ಹಾಸನ

ಜನರಿಂದ ಹಣ ವಸೂಲಿ ಮಾಡುತ್ತಿದ್ದ ನಾಲ್ವರ ಬಂಧನ

Published On :

ಶ್ರೀರಂಗಪಟ್ಟಣ: ಗಂಜಾಂ ಗ್ರಾಮದಲ್ಲಿ ಗ್ಯಾಸ್ ಕನೆಕ್ಷನ್ ಪರಿಶೀಲನೆಗಾಗಿ ಬಂದಿರುವುದಾಗಿ  ತಿಳಿಸಿ ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿದ್ದ ನಾಲ್ವರನ್ನು ಪಟ್ಟಣದ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಗ್ರಾಮದಲ್ಲಿ ಕಳೆದೆರಡು ದಿನಗಳಿಂದ ಗ್ರಾಮದ ಪ್ರತಿಯೊಂದು ಮನೆ ಮನೆಗೂ ತೆರಳಿ ತಾವು ಎಚ್‌ಪಿ ಗ್ಯಾಸ್ ಕಂಪನಿಯವರು ಎಂದು ಹೇಳಿಕೊಂಡು ಗ್ರಾಹಕರ ಮನೆಯಲ್ಲಿರುವ ಗ್ಯಾಸ್ ಸೋರಿಕೆಯಾಗುತ್ತಿರುವ ಬಗ್ಗೆ ಪರೀಶೀಲನೆ ಮಾಡಲು ಮುಂದಾಗಿದ್ದಾರೆ.
ಅಲ್ಲದೇ  75 ರು. ನೀಡುವಂತೆ ತಿಳಿಸಿ ಇದರ ಜೊತೆಗೆ ಗ್ರಾಹಕರಿಗೆ ತಮ್ಮ ಮನೆಯ ಗ್ಯಾಸ್ ಪೈಪ್ ಹಳೆಯದಾಗಿದೆ. ರಂಧ್ರ ಬಿದ್ದು  ಅಪಾಯ ಸಂಭವಿಸುವುದಾಗಿ ಹೆದರಿಸಿ ಗ್ಯಾಸ್ ಪೈಪ್ ಬದಲಾಯಿಸಬೇಕು ಎಂದು ಹೆಂಗಸರಲ್ಲಿ ಹೆದರಿಕೆ ಹುಟ್ಟಿಸಿ  270 ರಿಂದ 300 ರು. ವಸೂಲಿ ಮಾಡಿದ್ದಾರೆ.
ಮಂಗಳವಾರ ಮನೆಯೊಂದರಲ್ಲಿ ಹಣ ಪಡೆದು ಗ್ರಾಮದ ಸಿದ್ದಪ್ಪ ಎಂಬುವರ ಮನೆಗೆ ತೆರಳಿದ ಸಿಬ್ಬಂದಿ ಮನೆಯ ಮಾಲೀಕ ಸಿಬ್ಬಂದಿಗೆ ಗುರುತು ಪತ್ರ ಸೇರಿದಂತೆ ಗ್ಯಾಸ್ ಕಂಪನಿಯ ಇನ್ನಿತರ ದಾಖಲೆಗಳನ್ನು ತೋರಿಸುವಂತೆ ಕೇಳಿದಾಗ ಕಕ್ಕಾಬಿಕ್ಕಿಯಾದ ವ್ಯಕ್ತಿಗಳು ಮನೆಯಿಂದ ಕಾಲ್ಕೀಳುವಷ್ಟರಲ್ಲಿ ಗ್ರಾಮದ ಸಾರ್ವಜನಿಕರು ಆ ವ್ಯಕ್ತಿಗಳನ್ನು ಹಿಡಿದು ಪಟ್ಟಣದ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಪಟ್ಟಣದ ಪೊಲೀಸರು ನಾಲ್ವರು ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.