ಹಾಸನ

ಹಿಂದಿ ಶಿಕ್ಷಕ್ ಫಲಿತಾಂಶ ಪ್ರಕಟ

Published On :

ಹಾಸನ: ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ವತಿಯಿಂದ ಮೇ 2014ರಲ್ಲಿ ನಡೆದ ಮಂಡ್ಯದ ಹಿಂದಿ ಶಿಕ್ಷಕ್ ಟ್ರೈನಿಂಗ್ ಕಾಲೇಜಿನ ಹಿಂದಿ ಶಿಕ್ಷಕ್ ಕೋರ್ಸ್ ಶಿಕ್ಷಣಾರ್ಥಿಗಳ ಫಲಿತಾಂಶವು ಪ್ರಕಟವಾಗಿದ್ದು ಇದಕ್ಕೆ ಸಂಬಂಧಪಟ್ಟ ವಿವಿಧ ಜಿಲ್ಲೆಗಳ ಪ್ರಶಿಕ್ಷಣಾರ್ಥಿಗಳು ಫಲಿತಾಂಶವನ್ನು ತಾತ್ಕಾಲಿಕ ಅಂಕಪಟ್ಟಿಯನ್ನು ಪಡೆಯಲು ಪ್ರಾಂಶುಪಾಲರು, ಹಿಂದಿ ಶಿಕ್ಷಕ್ ಟ್ರೈನಿಂಗ್ ಕಾಲೇಜು, ಹಿಂದಿ ಭವನ, ಜಿಲ್ಲಾ ಪಂಚಾಯಿತಿ ಕಚೇರಿ ಎದುರು, ಮಂಡ್ಯ, ಅಥವಾ 08232-226667, 9448268114 ಸಂಪರ್ಕಿಸಲು ಕೋರಿದೆ.
ಹುದ್ದೆಗೆ ಅರ್ಜಿ ಆಹ್ವಾನ
ಹಾಸನ: ಕೇಂದ್ರ ಸರ್ಕಾರದ ನಾನಾ ಇಲಾಖೆಗಳಲ್ಲಿ  ಪಿಯುಸಿ ವಿದ್ಯಾರ್ಹತೆಗೆ ಅನುಗುಣವಾದ ವಿವಿಧ  ಹುದ್ದೆಗಳನ್ನು ಒಂದೇ ರೀತಿಯ ಪರೀಕ್ಷೆಗಳ ಮೂಲಕ ಆಯ್ಕೆ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದ್ದಾರೆ. ಅರ್ಜಿಯನ್ನು ಢಿಢಿಢಿ.ಡಡ್ಛ ್ಟಟಿಟ್ಝಟಿಜ.ಟ್ಝ್ಛಿ.್ಝಟಿ  ಅಥವಾ  ಢಿಢಿಢಿ.ಡಡ್ಛ್ಟಟಿಟ್ಝಟಿಜ2.್ಜ್ಟಢ.್ಝಟಿ ಮೂಲಕ ಸಲ್ಲಿಸಬಹುದು ಅಥವಾ ಇದೇ ಅರ್ಜಿ ನಮೂನೆಯನ್ನು ಭರ್ತಿಮಾಡಿ ಅಂಚೆಮೂಲಕ ಸಲ್ಲಿಸಬಹುದು.  ಅರ್ಜಿ ಸಲ್ಲಿಸಲು ಆ.19 ಕೊನೆ ದಿನ.  ಹೆಚ್ಚಿನ ಮಾಹಿತಿಗೆ ಉಪಮುಖ್ಯಸ್ಥರು, ಉದ್ಯೋಗ ಮಾಹಿತಿ ಮತ್ತು ಮಾರ್ಗದರ್ಶನ ಕೇಂದ್ರ ಗ್ರಂಥಾಲಯ ಕಟ್ಟಡ, ಮಾನಸಗಂಗೋತ್ರಿ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು. ಇವರನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಿ. ದೂರವಾಣಿ ಸಂಖ್ಯೆ 0821-2516844, ಮೊಬೈಲ್ ಸಂಖ್ಯೆ 9449686641.
ಬ್ಯಾಂಕಿಂಗ್ ಸಾಮಾನ್ಯ ಪರೀಕ್ಷೆ
ಹಾಸನ: ಭಾರತದ 20 ಕ್ಕಿಂತ ಹೆಚ್ಚು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಪ್ರೊಬೇಷನರಿ ಅಧಿಕಾರಿ ಹುದ್ದೆಗಳನ್ನು  ಒಂದೇ ಸಾಮಾನ್ಯ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಭರ್ತಿಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದ್ದಾರೆ.  ಪರೀಕ್ಷೆಯಲ್ಲಿ ಪಡೆಯುವ ಅಂಕಗಳ ಆಧಾರದ ಮೇಲೆ 20 ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಪ್ರೊಬೇಷನರಿ ಅಧಿಕಾರಿ ಹುದ್ದೆಗಳಿಗೆ  ನೇರವಾಗಿ ಸಂದರ್ಶನಕ್ಕೆ ಅರ್ಹತೆ ಪಡೆಯಬಹುದು. ಪ್ರತಿಯೊಂದು ಬ್ಯಾಂಕಿನ  ನೇಮಕಾತಿಗೆ ಪ್ರತ್ಯೇಕ ಪರೀಕ್ಷೆ ಬರೆಯುವ ಅವಶ್ಯಕತೆ ಇರುವುದಿಲ್ಲ. ಅರ್ಜಿಯನ್ನು ಆ. 11ರೊಳಗೆ ಢಿಢಿಢಿ.್ಝಛಿಠಡ.್ಝಟಿ ನಲ್ಲಿ ಸಲ್ಲಿಸಬೇಕು.  ಹೆಚ್ಚಿನ ಮಾಹಿತಿಗಾಗಿ ಉದ್ಯೋಗ ಮಾಹಿತಿ ಮತ್ತು ಮಾರ್ಗದರ್ಶನ ಕೇಂದ್ರ, ಗ್ರಂಥಾಲಯ ಕಟ್ಟಡ, ಮಾನಸಗಂಗೋತ್ರಿ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು ಇವರನ್ನು ಸಂಪರ್ಕಿಸಿ.  ದೂರವಾಣಿ- 2516844 , 8892019297
ತರಬೇತಿಗಾಗಿ ಅರ್ಜಿ ಆಹ್ವಾನ
ಹಾಸನ: ಭಾರತೀಯ  ರೇಲ್ವೆಯ ಮೈಸೂರು ವಿಭಾಗದ ಕಾರ್ಯಾಗಾರದಲ್ಲಿ ಅಪ್ರೆಂಟೀಸ್ ತರಬೇತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ ಯೊಂದಿಗೆ ಐ.ಟಿ.ಐ ನಲ್ಲಿ ಫಿಟ್ಟರ್, ಮಿಷನಿಸ್ಟ್, ಟರ್ನರ್, ವೆಲ್‌ಡರ್, ಎಲೆಕ್ಟ್ರಿಷಿಯನ್, ಪೈಂಟರ್ ಹಾಗೂ ಪಾಸಾ ಟ್ರೇಡ್‌ನಲ್ಲಿ ತೇರ್ಗಡೆ ಹೊಂದಿದ ಅಭ್ಯರ್ಥಿಗಳಿಗೆ ಮಾತ್ರ. ಅರ್ಜಿ ಸಲ್ಲಿಸಲು  ಆ.18 ಕೊನೆ ದಿನ. ಮಾದರಿ ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಉದ್ಯೋಗಾಧಿಕಾರಿ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಹಾಸನ ಇವರನ್ನು ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ 08172-268374 ಅನ್ನು ಸಂಪರ್ಕಿಸಿ ಮಾಹಿತಿ ಪಡೆಯಲು ಕೋರಿದೆ.   
ಕಂಬೈನ್ಡ್ ಡಿಫೆನ್ಸ್‌ಸರ್ವೀಸಸ್ ಪರೀಕ್ಷೆಗೆ ಅರ್ಜಿ
ಹಾಸನ: ಕೇಂದ್ರ ಲೋಕ ಸೇವಾ ಆಯೋಗ, ನವದೆಹಲಿ ಇವರು  ರಕ್ಷಣಾ ಪಡೆಗಳಾದ ಸೇನೆ, ನೇವಿ ಮತ್ತು ವಾಯುದಳದಲ್ಲಿ ಸುಮಾರು 464 ಆಫೀಸರ್ ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ತಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದ್ದಾರೆ. ಅಂಗೀಕೃತ ವಿಶ್ವವಿದ್ಯಾನಿಲಯದ ಯಾವುದಾದರು ಪದವಿ ಪಡೆದಿರಬೇಕು. ಅಂತಿಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿರುವವರೂ ಸಹ ಅರ್ಜಿ ಸಲ್ಲಿಸ ಬಹುದು. ಅರ್ಜಿ ಸಲ್ಲಿಸಲು ಆ.18  ಕೊನೆದಿನ. ಹೆಚ್ಚಿ ಮಾಹಿತಿಗೆ ಉಪಮುಖ್ಯಸ್ಥರು, ಉದ್ಯೋಗ ಮಾಹಿತಿ ಮತ್ತು ಮಾರ್ಗದರ್ಶನ ಕೇಂದ್ರ, ಮಾನಸಗಂಗೋತ್ರಿ, ಮೈಸೂರು ಇವರನ್ನು ಸಂಪರ್ಕಿಸಿ. ದೂರವಾಣಿ 0821-2516844,9449686641 (ಬೆಳಿಗ್ಗೆ.10-00 ರಿಂದ ಸಂಜೆ 5-30 ರಒಳಗೆ).

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.