ಹಾಸನ

ಹೇಮಾವತಿ ಭರ್ತಿಗೆ ನಾಲ್ಕೇ ಅಡಿ ಬಾಕಿ

Published On :

ಹಾಸನ: ಅಂತೂ ಇಂತೂ ಹೇಮಾವತಿ ಜಲಾಶಯ ಭರ್ತಿ ಆಗುತ್ತಿರುವುದು ಪಟ್ಟಣ, ನಗರ ಮತ್ತು ಗ್ರಾಮೀಣ ಪ್ರದೇಶದ ಜನರಿಗೆ ಖುಷಿ ತಂದಿದೆ. ಮುಂಗಾರು ವಿಳಂಬವಾಗಿ ಆರಂಭವಾದರೂ ಜಲಾಶಯ ಭರ್ತಿಯಾಗುತ್ತಿದೆಯಲ್ಲಾ ಎಂಬ ಸಂತೋಷ ಜನರದ್ದಾಗಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೇ ಈಗ ಜಲಾಶಯ ಭರ್ತಿಯಾಗುತ್ತಿರುವುದು ವಿಳಂಬವೇ. ಹೋದ ಬಾರಿ ಈ ವೇಳೆಗೆ ಜಲಾಶಯ ಎರಡು ಬಾರಿ ಭರ್ತಿಯಾಗಿತ್ತು. ಹೇಮಾವತಿ ಜಲಾನಯನ ಪ್ರದೇಶದಲ್ಲಿ ಮಳೆ ಮೂರು ದಿನಗಳಿಂದ ಸುರಿಯುತ್ತಿದೆ. ಇದರಿಂದ ಜಲಾಶಯದ ಹೊರ ಹರಿವು ಹೆಚ್ಚಳವಾಗಿದೆ. ಗುರುವಾರ ಜಲಾಶಯದ ಮಟ್ಟ 2918.02 ಅಡಿಗೆ ಏರಿದೆ. ಗರಿಷ್ಠ ಮಟ್ಟ- 2922 ಅಡಿಗಳು.
ನದಿ ದಂಡೆಯ ಜನರಿಗೆ ಎಚ್ಚರಿಕೆ: ಹೇಮಾವತಿ ಜಲಾಶಯದ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಜಲಾಶಯಕ್ಕೆ ಹೆಚ್ಚಿನ ಹರಿದು ಬರುತ್ತಿದೆ. ಅಲ್ಲದೇ ವ್ಯಾಪಕ ಮಳೆ ಆಗುತ್ತಿರುವುದರಿಂದ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಜಲಾಶಯಕ್ಕೆ ನೀರು ಹರಿದು ಬರುವ ನಿರೀಕ್ಷೆ ಇದೆ. ಅಣೆಕಟ್ಟೆಯ ಸುರಕ್ಷತಾ ದೃಷ್ಟಿಯಿಂದ, ಅಣೆಕಟ್ಟೆಯ ಕ್ರೆಸ್ಟ್ ಗೇಟ್‌ಗಳಿಂದ ಯಾವುದೇ ಘಳಿಗೆಯಲ್ಲಾದರೂ ನದಿ ಪಾತ್ರಕ್ಕೆ ನೀರನ್ನು ಬಿಡುವ ಸಾಧ್ಯತೆಗಳಿರುತ್ತವೆ. ಈ ಹಿನ್ನೆಲೆಯಲ್ಲಿ ಹೇಮಾವತಿ ನದಿ ದಂಡೆಯಲ್ಲಿ ವಾಸಿಸುವ ಗ್ರಾಮಸ್ಥರು ಮುನ್ನೆಚ್ಚರಿಕೆ ವಹಿಸಿ ಸುರಕ್ಷಿತ ಸ್ಥಳಗಳಿಗೆ ತೆರಳಲು ಕೋರಲಾಗಿದೆ. ಈ ಸಂದರ್ಭದಲ್ಲಿ ಸಂಬಂಧಪಟ್ಟ ಎಲ್ಲಾ ಇಲಾಖಾ ಅಧಿಕಾರಿಗಳು ತುರ್ತು ಕ್ರಮ ತೆಗೆದುಕೊಂಡು ನದಿ ದಂಡೆಯ ಗ್ರಾಮಸ್ಥರಿಗೆ ಸೂಕ್ತ ತಿಳುವಳಿಕೆ ಮತ್ತು ರಕ್ಷಣೆ ನೀಡಿ ಯಾವ ಹಾನಿಯೂ ಆಗದಂತೆ ಮುಂಜಾಗ್ರತಾ ಕ್ರಮ ವಹಿಸಬೇಕೆಂದು ಗೊರೂರು ಹೇಮಾವತಿ ಯೋಜನಾ ವೃತ್ತದ ಸೂಪರಿಂಟೆಂಡಿಂಗ್ ಎಂಜಿನಿಯರ್ ಕೋರಿದ್ದಾರೆ.
ಹಾಸನ ಜಿಲ್ಲೆಯ ಮಳೆ ವಿವರ: ಆಲೂರು-20, ಪಾಳ್ಯ-28.6, ಕೆಂಚಮ್ಮನ ಹೊಸಕೋಟೆ-52.3, ಕುಂದೂರು-16.4, ಅರಕಲಗೂಡು-3.2, ಮಲ್ಲಿಪಟ್ಟಣ-10, ರಾಮನಾಥಪುರ-5.6, ಕೊಣನೂರು-1.2, ದೊಡ್ಡಮಗ್ಗೆ-1.4, ದೊಡ್ಡಬೆಮ್ಮತ್ತಿ-2.2, ಅರಸೀಕೆರೆ-0.8, ಬಾಣಾವರ-4.2, ಗಂಡಸಿ-5.2, ಕಣಕಟ್ಟೆ-4.2, ಯಳವಾರೆ-2.8, ಜಾವಗಲ್-3, ಬೇಲೂರು-10.4, ಹಳೇಬೀಡು-6.2, ಹಗರೆ-9.4, ಅರೇಹಳ್ಳಿ-62.4, ಬಿಕ್ಕೋಡು-26.8, ಗೆಂಡೆಹಳ್ಳಿ-30.5, ಹಾಸನ-8.2, ಕಟ್ಟಾಯ-7.4, ಶಾಂತಿಗ್ರಾಮ-12.6, ದುದ್ದ-2.6, ಸಾಲಗಾಮೆ-6, ಗೊರೂರು -8, ಹೊಳೆನರಸೀಪುರ-0.1, ಹಳ್ಳಿಮೈಸೂರು 3ಮಿ.ಮಿ. ಮಳೆಯಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.