ಹಾಸನ

ತಂದೆಯ ಅತ್ಯಾಚಾರಕ್ಕೆ ಗರ್ಭಿಣಿಯಾದ ಮಗಳು

Published On :

ಅರಕಲಗೂಡು: ನಾಲ್ಕು ತಿಂಗಳಿಂದ ಹೆತ್ತ ಮಗಳನ್ನೇ ಬೆದರಿಸಿ ಅತ್ಯಾಚಾರವೆಸಗಿ, ಮಗಳನ್ನು ಗರ್ಭಿಣಿಯಾಗಲು ಕಾರಣನಾದ ಅಪ್ಪನನ್ನು ಕೊಣನೂರು ಪೊಲೀಸರು ಬಂಧಿಸಿದ್ದಾರೆ. ಕೊಣನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಶಾನುಭೋಗನಹಳ್ಳಿಯಲ್ಲಿ ಈ ಹೀನ ಕೃತ್ಯ ನಡೆದಿದೆ. 15 ವರ್ಷದ ತುಂಗಾ (ಹೆಸರು ಬದಲಾಯಿಸಲಾಗಿದೆ) ದುರ್ದೈವಿ ಮಗಳು. ಕಾಮುಕ ಅಪ್ಪನ ವಿಕೃತಕ್ಕೆ ಸಿಲುಕಿದ ಈಕೆ ಈಗ 3 ತಿಂಗಳ ಗರ್ಭಿಣಿ. ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಆರೋಪಿ ಅಪ್ಪ ಈಗ ಪೊಲೀಸರ ಅತಿಥಿ.
ಘಟನೆಯ ವಿವರ
ಶಾನಬೋಗನಹಳ್ಳಿಯ ವಾಸಿಸುವ ರಾಜಯ್ಯ ಕುಡುಕನಾಗಿದ್ದು, ಕುಡಿದು ಬಂದ ಮತ್ತಿನಲ್ಲಿ ತನ್ನ ಮಗಳ ಮೇಲೆ ಅತ್ಯಾಚಾರವೆಸಗಿದ್ದಾನೆ. ಈ ವಿಷಯ ತಿಳಿದ ಆತನ ಹೆಂಡತಿ ಗೌರಮ್ಮ, ಗಲಾಟೆ ಮಾಡಿದ್ದಳು. ಸ್ವಲ್ಪದಿನ ಸುಮ್ಮನಿದ್ದ ರಾಜಯ್ಯ ಮತ್ತೆ ತನ್ನ ಮಗಳಿಗೆ ಲೈಂಗಿಕ ಕಿರುಕುಳ ನೀಡಲು ಆರಂಭಿಸಿದ್ದಾನೆ. ಈ ವಿಷಯವನ್ನು ಯಾರೊಡನೆಯು ಹೇಳಿಕೊಳ್ಳಲಾಗದೆ ನೋವು ಅನುಭವಿಸಿದ್ದಾಳೆ ತುಂಗಾ.
ಕಳೆದ 2 ದಿನಗಳ ಹಿಂದೆ ಈಕೆಯ ದೇಹದಲ್ಲಿ ಆಗುತ್ತಿದ್ದ ಬದಲಾವಣೆಯನ್ನು ಗಮನಿಸಿದ ತಾಯಿ ಗೌರಮ್ಮ, ಈಕೆಯನ್ನು ಪ್ರಶ್ನಿಸಿದಾಗ ನಡೆದಿರುವ ವಿಷಯ ತಿಳಿಸಲು ನಿರಾಕರಿಸಿದ್ದಾಳೆ. ಸುಮ್ಮನಾಗದ ತಾಯಿ ಆಕೆಯನ್ನು ಕೊಣನೂರು ಪೊಲೀಸ್ ಠಾಣೆಗೆ ಕರೆತಂದು ನನ್ನ ಮಗಳ ಮೇಲೆ ಯಾರೋ ಅತ್ಯಾಚಾರ ಮಾಡಿದ್ದಾರೆ, ನನಗೆ ನ್ಯಾಯ ದೊರಕಿಸಿಕೊಡಿ ಎಂದು ಪೊಲೀಸರ ಮೊರೆಹೋದಳು. ಪೊಲೀಸರ ಮುಂದೆ ತುಂಗಾ, ನನ್ನ ಈ ಸ್ಥಿತಿಗೆ ಕಾರಣ ನನ್ನ ತಂದೆ ರಾಜಯ್ಯ ಎಂದು ತಿಳಿಸಿದಳು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ರಾಜಯ್ಯನನ್ನು ವಶಕ್ಕೆ ಪಡೆದು ಆತನ ಮೇಲೆ ಅತ್ಯಾಚಾರ ಪ್ರಕರಣವನ್ನು ದಾಖಲಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.