'ಮನಸ್ಸಿಗೆ ತಂಪೆರೆಯುವ ಶಕ್ತಿ ಸಂಗೀತಕ್ಕಿದೆ'
ಕ.ಪ್ರ.ವಾರ್ತೆ, ಅರಸೀಕೆರೆ, ಜೂನ್ 3
ಜೀವನದ ಜಂಜಾಟದಿಂದ ಜರ್ಜರಿತ ಮನಸ್ಸಿಗೆ ತಂಪೆರೆಯುವ ಶಕ್ತಿ ಸಂಗೀತಕ್ಕಿದೆ. ಮನುಷ್ಯನಲ್ಲಿ ಸಾತ್ವಿಕ ಗುಣಗಳನ್ನು ಉತ್ತೇಜಿಸುವ ಮಾಧ್ಯಮ ಸಂಗೀತ ಎಂದು ತಹಶೀಲ್ದಾರ್ ಜೆ.ಪಿ.ನಟರಾಜ್ ಅಭಿಪ್ರಾಯಪಟ್ಟರು.
ಪಟ್ಟಣದ ಬಸವರಾಜೇಂದ್ರ ಸಮುದಾಯ ಭವನದಲ್ಲಿ ಡಾ.ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್, ಸ್ವರಸುರಭಿ ಟ್ರಸ್ ಬೆಂಗಳೂರು, ಸ್ಥಳೀಯ ಮಹಿತಿ ಗ್ರಾಮ ವಿಕಾಸ ಟ್ರಸ್ಟ್ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಬನ್ನಿ ನಮ್ಮ ಹಾಡಿಗೆ ಆನಂದಕಂದ ವಿರಚಿತ ಭಾವಗೀತೆಗಳ 10ನೇ ಶಿಬಿರದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ದ್ವೇಷ-ಅಸೂಯೆಯಿಂದ ಮೃಗತ್ವದ ಕಡೆಗೆ ಹೋಗುತ್ತಿರುವ ಮನಸನ್ನು ಉತ್ತಮ ಮನುಷ್ಯನನ್ನಾಗಿ ಮಾಡಿ ಸಾತ್ವಿಕದತ್ತ ಕೊಂಡೊಯ್ಯುವ ಶಕ್ತಿ ಸಂಗೀತಕ್ಕಿದೆ ಎಂದರು.
ಪಟ್ಟಣದಲ್ಲಿ ಇಂತಹ ಕಾರ್ಯಕ್ರಮಗಳು ನಡೆಯುತ್ತಿರುವುದು ಉತ್ತಮ ಬೆಳವಣಿಗೆಯಾಗಿದ್ದು ಮಕ್ಕಳ ಮನೋವಿಕಾಸಕ್ಕೆ ಇಂತಹ ಪ್ರಯತ್ನಗಳು ಸಹಕಾರಿಯಾಗಿವೆ. ಹೆಚ್ಚು ಹೆಚ್ಚು ಇಂತಹ ಕಾರ್ಯಕ್ರಮಗಳು ನಡೆಯುವ ಮೂಲಕ ಸಮಾಜದಲ್ಲಿ ಶಾಂತಿ ನೆಮ್ಮದಿ ನೆಲೆಸಲಿ ಎಂದು ಹಾರೈಸಿದರು.
ಖ್ಯಾತ ಗಾಯಕ ಮೃತ್ಯುಂಜಯ ದೊಡ್ಡವಾಡ ಮಾತನಾಡಿ ಪಟ್ಟಣದಲ್ಲಿ ಇಂತಹ ದೊಡ್ಡ ದೊಡ್ಡ ಚಟುವಟಿಕೆಗಳು ನಡೆಯುತ್ತಿದ್ದರೂ ಸಾರ್ವಜನಿಕರಿಂದ ಪ್ರೋತ್ಸಾಹದ ಕೊರತೆಯಿರುವುದು ವಿಷಾದಕರ ಸಂಗತಿಯಾಗಿದ್ದು ಸಂಗೀತ ಕಾರ್ಯಕ್ರಮಗಳು ಮಕ್ಕಳಿಗೆ ಜನಸಾಮಾನ್ಯರಿಗೆ ಅತ್ಯಗತ್ಯ.
ಪೋಷಕರು ತಮ್ಮ ಮಕ್ಕಳನ್ನು ಪ್ರೋತ್ಸಾಹಿಸಿ ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಲು ಉತ್ತೇಜಿಸಬೇಕೆಂದು ತಿಳಿಸಿದರು. ಶ್ರಮದಿಂದ ಮಾಡುವ ಇಂತಹ ಚಟುವಟಿಕೆಗಳಿಗೆ ಸ್ಫೂರ್ತಿ ತುಂಬಬೇಕು. ಅಂತಹ ವಾತಾವರಣ ಕಂಡುಬರುತ್ತಿಲ್ಲ. ಸಮೂಹ ಮಾಧ್ಯಮಗಳಿಗೆ ಮಾರುಹೋದ ಜನರು ಇಂತಹ ಕಾರ್ಯಕ್ರಮಗಳನ್ನು ನಿರಾಕರಿಸುತ್ತಿರುವುದು ವಿಷಾದನೀಯ ಸಂಗತಿ ಎಂದರು.
ಬಾಳೇನಹಳ್ಳಿ ಪ.ಪೂ.ಕಾಲೇಜಿನ ಪ್ರಾಂಶುಪಾಲ ಡಾ. ಎಚ್.ಆರ್. ಸ್ವಾಮಿ ಮಾತನಾಡಿ ರಂಗಭೂಮಿ ಕಲೆ, ಸಾಹಿತ್ಯ, ಸಂಗೀತಗಳಂತಹ ಚಟುವಟಿಕೆಗಳು ಹತ್ತಾರು ವರ್ಷಗಳಿಂದ ಪಟ್ಟಣದಲ್ಲಿ ನಡೆಯುತ್ತಿದ್ದು ಇಂತಹ ಕಾರ್ಯಕ್ರಮಗಳಿಗೆ ಜನಸಾಮಾನ್ಯರು ಹೆಚ್ಚಿನ ಉತ್ತೇಜನ ನೀಡಿ ಪ್ರೋತಾಹಿಸಬೇಕು. ಇದರಿಂದ ಆಯೋಜಕರಿಗೂ ಸ್ಫೂರ್ತಿ ಹೆಚ್ಚುತ್ತದೆ ಎಂದು ಹೇಳಿದರು.
ಮಾಹಿತಿ ಗ್ರಾಮೀಣ ವಿಕಾಸ ಟ್ರಸ್ಟ್ನ ಅಧ್ಯಕ್ಷ ರವಿಶಂಕರ್, ಕಾರ್ಯದರ್ಶಿ ಮಮತಾರಾಣಿ, ಖ್ಯಾತ ಉದ್ಯಮಿ, ಸಮಾಜಸೇವಕಿ ಲಲಿತಾ ಜಯಣ್ಣ, ಅರಸೀ ಸಾ.ವೇದಿಕೆ ಕಾರ್ಯದರ್ಶಿ ಮಮತಾ, ಕಸಾಪ ಅಧ್ಯಕ್ಷ ಮೇಳೇಗೌಡ, ಹರೀಶ್ ಕುಮಾರ್, ಯುವರಾಜ್, ವಿಜಯ ಕುಮಾರ್, ತ್ರಿಮೂರ್ತಿ, ಚಂದನ್, ನೇತ್ರಾ, ಸಾಹಿತಿ ಆನಂದಮೂರ್ತಿ ಇದ್ದರು. ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರೆ, ಸಾಹಿತಿ ಶ್ರೀಧರ್ ಅಯ್ಯರ್ ಪ್ರಾರ್ಥಿಸಿದರು, ಮಮತಾ ಸ್ವಾಗತಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

