ಹಾಸನ

ಬೇಲೂರು ಎಪಿಎಂಸಿ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ರಂಗೇಗೌಡ ಅವಿರೋಧ ಆಯ್ಕೆ

Published On :

ಬೇಲೂರು : ಬೇಲೂರಿನ ಕೃಷಿ ಉತ್ಪನ್ನ ಮಾರುಕಟ್ಟೆ ಅಧ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ರಂಗೇಗೌಡರು ಅವಿರೋದವಾಗಿ ಆಯ್ಕೆಯಾದರು.
ಎಪಿಎಂಸಿಯಲ್ಲಿ ಜೆಡಿಎಸ್‌ನ 7, ಬಿಜೆಪಿಯ 6 ಸದಸ್ಯರಿದ್ದು, ಹಿಂದಿನ ಬಿಜೆಪಿ ಸರ್ಕಾರ 3 ಮಂದಿಯನ್ನು ನಾಮ ನಿರ್ದೇಶನ ಮಾಡಿದ್ದರಿಂದ ಇಲ್ಲಿವರೆಗೆ ಬಿಜೆಪಿಗೆ ಅಧ್ಯಕ್ಷ ಸ್ಥಾನ ದೊರಕಿತ್ತು. ಎಪಿಎಂಸಿ ಅಧ್ಯಕ್ಷರ ರಾಜಿನಾಮೆಯಿಂದಾಗಿ ಬುಧವಾರ ನಡೆದ ಚುನಾವಣೆಯಲ್ಲಿ ಜೆಡಿಎಸ್ - ಬಿಜೆಪಿ ಮೈತ್ರಿಯಿಂದ ಜೆಡಿಎಸ್‌ಗೆ  ಆಧ್ಯಕ್ಷ ಸ್ಥಾನ ದೊರಕಿದಂತಾಗಿದೆ.
ಈ ಸಂದರ್ಭದಲ್ಲಿ ಎಪಿಎಂಸಿ ಆಧ್ಯಕ್ಷ ಹಳೇಬೀಡು ಕ್ಷೇತ್ರದ ಗಂಗೂರಿನ ರಂಗೇಗೌಡರು ಮಾತನಾಡಿ, ಎಪಿಎಂಸಿಗೆ ಕಾರ್ಯದರ್ಶಿ ನೇಮಕ ಮತ್ತು ರೈತ ಭವನ ಹಾಗೂ ಉಳಿದ ಕಾಮಗಾರಿಗಳ ಪೂರ್ಣಗೋಳ್ಳುವಿಕೆ ಹಾಗೂ ಅನುದಾನ ಯೋಜನೆಯ ಅನಷ್ಠಾನ ತರುವುದಾಗಿ ಹೇಳಿದರು. ರೈತರಿಗೆ ಎಲೆಕ್ಟ್ರಾನಿಕ್ ತೂಕದ ಯಂತ್ರ ಉಪಯೋಗವನ್ನು ಪ್ರತಿ ಹಳ್ಳಿಗೂ ತಲುಪಿಸಿ ಅದರಿಂದ ಯಾವ ರೀತಿ ಉಪಯೋಗವನ್ನು ಪಡೆಯಬೇಕೆಂದು ಮನವರಿಕೆ ಮಾಡುವುದಾಗಿ ತಿಳಿಸಿದರು.
ಆದರೆ, ಕೆಲವೆಡೆ ರ್ಯೆತರು ಇದಕ್ಕೆ ಸ್ಪಂದಿಸದೆ ನಮಗೆ ಸಾಮಾನ್ಯ ತೂಕದ ಯಂತ್ರ ಸಾಕು ಎಂದು ಹೇಳುತ್ತಿದ್ದಾರೆ. ಅವರಿಗೆ ತಿಳವಳಿಕೆ ಹೇಳಿ ಎಪಿಎಂಸಿ ವಾಹನದಲ್ಲೇ ಎಲೆಕ್ಟ್ರಾನಿಕ್ ತೂಕದ ಯಂತ್ರ ತಲುಪಿಸುವ ವ್ಯವಸ್ಥೆ ಮಾಡುತ್ತೇವೆ.
ಪಟ್ಟಣದಲ್ಲಿ ನೆಡೆಯುವ ಸಂತೆಯು ಎಪಿಎಂಸಿಯಲ್ಲಿ ನಡೆಯಬೇಕು ಈ ಬಗ್ಗೆ ಮುಂದಿನ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಹೇಳಿದರು.
ಪುರಸಭೆ ಮಾಜಿ ಅಧ್ಯಕ್ಷ ತೋ.ಚ.ಅನಂತಸುಬ್ಬರಾವ್ ಮಾತನಾಡಿ, ಜೆಡಿಎಸ್ ಬಿಜೆಪಿ ಸೇರಿ ಎಪಿಎಂಸಿ ಹಿತದೃಷ್ಟಿಯಿಂದ ರಂಗೇಗೌಡರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದ್ದು ಅವರಿಂದ ಕಡಿಮೆ ಅವಧಿಯಲ್ಲಿ ಉತ್ತಮ ಆಡಳಿತ ನಿರೀಕ್ಷಿಸಲಾಗಿದೆ ಎಂದರು.
ಎಪಿಎಂಸಿ ಸದಸ್ಯರಾದ ರಂಗನಾಥ್, ಮಹೇಶ್, ಜೆಡಿಎಸ್ ಮುಖಂಡರಾದ ಲಿಂಗೇಶ್, ಬಿ.ಸಿ.ಮಂಜುನಾಥ್, ಹೇಮಾವತಿ ಮಂಜುನಾಥ್, ಜಿಪಂ ಮಾಜಿ ಆದ್ಯಕ್ಷ ಚಂದ್ರೇಗೌಡ, ನಾಗೇಶ್, ಗಣೇಶ್, ಈಶ್ವರ್ ಹಾಗೂ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.