ಹಾಸನ

ಗೋಮಾಳಕ್ಕೆ ಬಡಿದಾಟ

Published On :

ಕನ್ನಡಪ್ರಭ ವಾರ್ತೆ    ಹಾಸನ    ಜೂ 6
ಸರ್ಕಾರಿ ಗೋಮಾಳಕ್ಕೆ ಸಂಬಂಧಿಸಿದಂತೆ ಒಂದೇ ಗ್ರಾಮದ ಎರಡು ಗುಂಪುಗಳ ನಡುವೆ ವಾಗ್ವಾದ ನಡೆದು, ಪ್ರತಿಭಟನೆ ನಡೆಸಿದ ಘಟನೆ ಶುಕ್ರವಾರ ನಡೆಯಿತು.
ಪ್ರತಿಭಟನೆ ಮಾಡಲು ಬಂದಿದ್ದ ಎರಡು ಗುಂಪುಗಳ ನಡುವೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕೆಲ ಸಮಯ ಮಾತಿ ಚಕಮಕಿ ನಡೆದು ಕೈಕೈ ಮೀಲಾಯಿಸುವ ಹಂತಕ್ಕೆ ತಲುಪಿತ್ತು. ನಂತರ ಗ್ರಾಮದ ಎರಡು ಗುಂಪಿನವರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ವಿ.ಅನ್ಬುಕುಮಾರ್ಗೆ ಪ್ರತ್ಯೇಕ ಮನವಿ ಸಲ್ಲಿಸಿದರು.
ತಾಲೂಕಿನ ಹನುಮಂತಪುರ ಗ್ರಾಮ ಪಂಚಾಯಿತಿಗೆ ಸೇರಿದ ಕೊಕ್ಕಟಘಟ್ಟದ ಸರ್ವೆ ನಂ. 26ರಲ್ಲಿ 4.14 ಎಕರೆ ಜಾಗವಿದ್ದು, ಈ ಪೈಕಿ 4.4 ಎಕರೆ ಜಾಗವನ್ನು ಬಿಟ್ಟು ಉಳಿದ ಜಾಗವನ್ನು ಕರ್ನಾಟಕ ಕೈಗಾರಿಕ ಪ್ರದೇಶಾಭಿವೃದ್ದಿ ಮಂಡಳಿ (ಕೆಐಎಡಿಬಿ) ಮತ್ತು ಜ್ಯೋತಿ ಕಂಪನಿಗೆ ಮಂಜಾರಾಗಿದ್ದು, 4.4 ಎಕರೆ ಜಾಗದಲ್ಲಿ ಒಂದುವರೆ ಎಕರೆ ಜಾಗವನ್ನು ಬಿಟ್ಟು ಉಳಿದ ಜಾಗದಲ್ಲಿ 48 ಜನರು ಅನಧಿಕೃತವಾಗಿ ಮನೆ ಕಟ್ಟಿದ್ದಾರೆ. ಕನಿಷ್ಠ 2 ಸಾವಿರದಿಂದ 10 ಸಾವಿರ ರು.ಗಳ ಬಾಡಿಗೆಯನ್ನು ಪಡೆಯುತ್ತಿದ್ದಾರೆ. ಉಳಿದಿರುವ ಒಂದೂವರೆ ಎಕರೆ ಜಾಗವನ್ನು ಹಿಂದೆ ಕೆಐಎಡಿಬಿಯಿಂದ ಪರಿಹಾರವಿಲ್ಲದೆ 25 ಗುಂಟೆ ಜಾಗನ್ನು ಕಳೆದುಕೊಂಡ 19 ಜನರು ಸೇರಿದಂತೆ ಪರಿಶಿಷ್ಟ ಸಮಾಜಕ್ಕೆ ಸೇರಿದ 26 ಜನರಿಗೆ ಇದು ಸೇರಿಬೇಕು. ಆದ್ದರಿಂದ ಕೂಡಿಲೇ ತಮಗೆ ನ್ಯಾಯಾ ದೊರಕಿಸಿಕೊಡುವಂತೆ ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ಶ್ರೀನಿವಾಸ್, ಬಸವರಾಜು, ಮುಡ್ಲಿಗಿರಿಯಯ್ಯ, ತಿಮ್ಮಪ್ಪ, ಮಧು, ರಂಗಯ್ಯ, ಪಾಪಣ್ಣ, ದೇವರಾಜು, ಗೋವಿಂದರಾಜು, ಸ್ವಾಮಿ, ಆನಂದ್, ದಿನೇಶ್, ವೆಂಕಟೇಶ್, ಕುಮಾರ್, ಶಿವಣ್ಣ , ಅನಿಲ್ ಕುಮಾರ್, ಗಿರೀಶ್, ಸುನೀಲ್ ಕುಮಾರ್ ಹಾಗೂ ಇತರರು ಇದ್ದರು.
ಅಭಿವೃದ್ಧಿಗೆ ಮೀಸಲಿಡಿ ಎಂದು ಮತ್ತೊಂದು ಗುಂಪು: ತಾಲೂಕಿನ ಕೊಕ್ಕನಘಟ್ಟ ಗ್ರಾಮದ ಮತ್ತೊಂದು ಗುಂಪಿನ ಜನರು ಗ್ರಾಮದ ಸರ್ವೆ ನಂ.26 ರಲ್ಲಿ ಎರಡು ಎಕರೆ ಸರ್ಕಾರಿ ಗೋಮಾಳವನ್ನು ಗ್ರಾಮದ ಅಭಿವೃದ್ಧಿಗೆ ಮೀಸಲಿಡುವಂತೆ ಆಗ್ರಹಿಸಿದರು.
ಗ್ರಾಮದ ಸರ್ವೆ ನಂ. 26 ರಲ್ಲಿ 2 ಎಕರೆ ಸರ್ಕಾರಿ ಗೋಮಾಳವನ್ನು ಗ್ರಾಮದ ಕೆಲವು ವ್ಯಕ್ತಿಗಳು ಜೆಪಿಸಿ ಯಂತ್ರದಿಂದ ಸಮತಟ್ಟು ಮಾಡಿ 30 ಅಡಿ ರಸ್ತೆ, 40್ಗ30 ಅಡಿಗಳ 30 ನಿವೇಶನಗಳನ್ನು ಮಾಡಿಕೊಂಡು ಗ್ರಾಮಕ್ಕೆ ತಿಳಿಯದಂತೆ ಸರ್ಕಾರಿ ದಾಖಲೆ ಪಡೆಯಲು ಅರ್ಜಿ ನೀಡಿದ್ದಾರೆ. ಈ ಜಾಗಕ್ಕೆ ಇಂದಿನ ಬೆಲೆ 1.50 ಕೋಟಿ ರು. ಗಳಾಗಿದೆ. ಈ ಸರ್ಕಾರಿ ಗೋಮಾಳವನ್ನು ಗ್ರಾಮದ ಅಭಿವೃದ್ಧಿ ಕಾರ್ಯಗಳಾದ ಶಾಲೆ, ದೇವಸ್ಥಾನ ಹಾಗೂ ಸಮುದಾಯ ಭವನಗಳಿಗೆ ಮೀಸಲಿಡಬೇಕು ಎಂದರು.
ಕೊಕ್ಕನಘಟ್ಟ ಗ್ರಾಮದ ಜಮೀನು ಕೈಗಾರಿಕಾ ಪ್ರದೇಶಗಳಿಗೆ ಭೂ ಸ್ವಾಧೀನವಾಗಿರುವುದರಿಂದ ಗ್ರಾಮದ ಅಭಿವೃದ್ಧಿಗೆ ಇರುವ 2 ಎಕರೆ ಜಾಗ ಬಿಟ್ಟರೇ ಬೇರೆ ಯಾವ ಸ್ಥಳ ಇರುವುದಿಲ್ಲ.  ಈ ಜಾಗದ ಸುತ್ತಮುತ್ತಲು ಸುಮಾರು 100ಕ್ಕು ಹೆಚ್ಚು ಕುಟುಂಬಗಳಿದ್ದು, ಈ ಪ್ರದೇಶ ಗ್ರಾಮದ ಜನತೆಗೆ ಅತ್ಯಾವಶ್ಯಕವಾಗಿದೆ ಹೀಗಾಗಿ ಈ ಜಾಗವನ್ನು ಅಭಿವೃದ್ಧಿ ಕೆಲಸಕ್ಕೆ ಮೀಸಲಿಡಬೇಕು ಎಂದು ಪಟ್ಟ ಹಿಡಿದರು.
ಸಂತೋಷ್, ರಂಗಸ್ವಾಮಿ, ಪುಟ್ಟೇಗೌಡ, ಮಂಜಚಾರಿ, ಹೇಮ, ಲೋಲಾಕ್ಷಿ, ಪೂರ್ವಾಚಾರಿ, ರಾಣಿ, ಶೋಭ, ನಾಗಮಣಿ, ರೂಪ, ಸಣ್ಣಮ್ಮ, ಲಕ್ಷ್ಮಮ್ಮ, ರೇಖಾ, ತಂಗ್ಯಮ್ಮ ಮತ್ತಿತರರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.