ಮೀನುಗಳ ಮೃತ್ಯುಕೂಪ ಹುಣಸಿನಕೆರೆ
ಕ.ಪ್ರ.ವಾರ್ತೆ ಹಾಸನ ಜೂ 8
ನಗರದ ಹುಣಸಿನಕೆರೆಯಲ್ಲಿ ಸಾವಿರಾರು ಮೀನುಗಳ ಮಾರಣ ಹೋಮವಾಗಿದೆ. ಕಳೆದೆರಡು ದಿನಗಳಿಂದ ಕೆರೆಯಲ್ಲಿದ್ದ ಸಾವಿರಾರು ಮೀನುಗಳು ಸಾವನ್ನಪ್ಪಿವೆ.
ನಗರದ ಹುಣಸಿನಕೆರೆ, ರಾಜಕುಮಾರ್ ನಗರದ ಕೆಲವು ಮಾವಿನಹಣ್ಣಿನ ವ್ಯಾಪಾರಿಗಳು ಕೊಳೆತಂತಹ ಮಾವಿನಹಣ್ಣನ್ನು ತೆಗೆದುಕೊಂಡು ಕೆರೆಯಲ್ಲಿ ಸುರಿದಿದ್ದಾರೆ. ಮಾವಿನಹಣ್ಣನ್ನು ಹಣ್ಣು ಮಾಡಲು ಕೆಮಿಕಲ್ ಬಳಸಿದ್ದಂತಹ ಹಣ್ಣುಗಳನ್ನು ಕೆರೆಯಲ್ಲಿ ಸುರಿದ ಪರಿಣಾಮ ನೀರು ಸಂಪೂರ್ಣವಾಗಿ ಕಲುಷಿತವಾಗಿದೆ. ಇದರಿಂದ ಕೆರೆಯಲ್ಲಿ ಇದ್ದಂತಹ ಸಾವಿರಾರು ಮೀನುಗಳು ಸತ್ತಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಕೆರೆಗೆ ಕಲುಷಿತ ನೀರು: ಅಷ್ಟೇ ಅಲ್ಲದೆ ಇಲ್ಲಿನ ಸುತ್ತಮುತ್ತಲಿನ ಬಡಾವಣೆಯ ಕಲುಷಿತ ನೀರು ಸಹ ಕೆರೆಗೆ ಸೇರುತ್ತಿರುವುದರಿಂದ ನೀರು ಸಂಪೂರ್ಣವಾಗಿ ಕಲುಷಿಗೊಂಡು ರೋಗರುಜಿನಕ್ಕೆ ಕಾರಣವಾಗಿದೆ. ಕೆರೆಯಲ್ಲಿ ಹುಣಸಿನಕೆರೆ, ಸ್ಲಂಬೋರ್ಡ್, ರಾಜ್ಕುಮಾರ್ ನಗರದ ಕಲುಷಿತ ನೀರಿನಿಂದ ಕೆರೆಯಲ್ಲಿ ಇದ್ದಂತಹ ಮೀನ ನಾಶವಾಗಿದೆ. ಅಷ್ಟೇ ಅಲ್ಲದ ನೀರು ಕಲುಷಿತವಾಗಿರುವುದ ಪ್ರತಿ ವರ್ಷ ಈ ಕೆರೆ ವಲಸೆ ಬರುತ್ತಿದ್ದಂತಹ ವಿಶೇಷ ಪಕ್ಷಿಗಳು ಬೇರೆಡೆಗೆ ವಲಸೆ ಹೋಗುತ್ತಿವೆ. ಇದರಿಂದ ಕೆರೆಯ ಸೌಂದರ್ಯಕ್ಕೆ ಧಕ್ಕೆ ಉಂಟಾಗಿದೆ.
ಕಿಡಿಗೇಡಿಗಳ ಕೃತ್ಯದಿಂದಾಗಿ ಒಂದೇ ಕೆರೆಯಲ್ಲಿ ಇದ್ದ ಸಾವಿರ ಮೀನು ಸತ್ತು ಬಿದ್ದಿರುವುದರಿಂದ ಕೆರೆಯ ನೀರೂ ಮಲಿನಗೊಂಡಿದೆ. ಸುತ್ತಮುತ್ತಲ ಜನ-ಜಾನುವಾರುಗಳಿಗೆ ನೀರಿನ ಮೂಲ ಇಲ್ಲದಂತಾಗಿದೆ.
ಸ್ವಚ್ಛತೆ ಕಾಪಾಡಲು ಆಗ್ರಹ: ಕೆರೆಯ ನೀರು ಸಂಪೂರ್ಣ ಕಲುಷಿತಗೊಂಡಿರುವುದರಿಂದ ಸುತ್ತಮುತ್ತಲಿನ ನಿವಾಸಕ್ಕೆ ದುರ್ವಾಸನೆ ಬೀರುತ್ತಿದೆ. ಇದರಿಂದ ಮನೆಯಲ್ಲಿ ವಾಸ ಮಾಡಲು ಸಾಧ್ಯವಾಗುತ್ತಿಲ್ಲ. ಕಲುಷಿತ ಗೊಂಡಿರುವುದರಿಂದ ನಿವಾಸಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿವೆ. ಈ ಬಗ್ಗೆ ಹಲವು ಬಾರಿ ಸಂಬಂಧಪಟ್ಟವರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ಸ್ಥಳೀಯರು ಹೇಳುವುದೇನು? ಕೆಲವು ಮಾವಿನ ಹಣ್ಣಿನ ವ್ಯಾಪಾರಿಗಳು ಕೊಳೆತಹಣ್ಣನ್ನು ತಂದು ಕೆರೆಯಲ್ಲಿ ಸುರಿದಿರುವುದರಿಂದ ಕೆರೆಯಲ್ಲಿ ಇದ್ದಂತಹ ಸಾವಿರಾರು ಮೀನು ನಾಶವಾಗಿದ್ದಾವೆ. ಕೆರೆಯಲ್ಲಿ ಮೀನುಗಳು ವಾಸವಾಗಿದ್ದರೆ ನೀರು ಶುದ್ಧಿಯಾಗಿರುತ್ತದೆ. ಆದರೆ ಕೆಲವು ಮಾಡಿದ ತಪ್ಪಿನಿಂತ ಕೆರೆ ಸಂಪೂರ್ಣವಾಗಿ ಕಲುಷಿತಗೊಂಡು ದುರ್ವಾಸನೆ ಬೀರುತ್ತಿದೆ. ಆದ್ದರಿಂದ ಕೂಡಲೇ ಸಂಬಂಧಪಟ್ಟವರು ಕೆರೆಯನ್ನು ಸ್ವಚ್ಚಗೊಳಿಸಬೇಕು ಎಂದು ನಿಂಗಪ್ಪ ಒತ್ತಾಯಿಸಿದ್ದಾರೆ. ಹುಣಸಿನಕೆರೆಯು ತುಂಬಾ ಹಳೆಯ ಕೆರೆಯಾಗಿದ್ದು, ನಗರಕ್ಕೆ ಹತ್ತಿರದಲ್ಲಿ ಇರುವುದು ಒಂದೊಂದೆ ಕೆರೆಯಾಗಿದೆ. ಇದನ್ನು ಜನರು ಹಾಳು ಮಾಡಿದ್ದಾರೆ. ಇನ್ನು ಮುಂದೆ ಇಲ್ಲಿಗೆ ಯಾರು ಕಲುಷಿತ ನೀರ, ವಸ್ತುಗಳು ಸೇರಿದಂತೆ ಹಾನಿಕಾರಕ ಇತರೆ ವಸ್ತುಗಳನ್ನು ಹಾಕದಂತೆ ಎಚ್ಚರವಹಿಸಬೇಕು. ಹಾಕಿದಂವರಿಗೆ ಸೂಕ್ತ ದಂಡವನ್ನು ವಿಧಿಸಬೇಕು ಎಂಬುದು ರಾಜು ಅವರ ವಾದ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

