ಹಾಸನ

ಸ್ವಚ್ಛತೆ ಕಾಪಾಡಿ ಮಲೇರಿಯಾ ತಡೆಗಟ್ಟಿ

Published On :

ಕ.ಪ್ರ.ವಾರ್ತೆ   ಬೇಲೂರು   ಜೂ.8
ಜಿಲ್ಲೆಯಲ್ಲಿ ಇಲ್ಲಿ ತನಕ 16 ಮಲೇರಿಯಾ ಪ್ರಕರಣಗಳು ಕಂಡುಬಂದಿವೆ.  ಬಹುತೇಕ ಈ ಪ್ರಕರಣಗಳಲ್ಲಿ ಮಂಗಳೂರು ಭಾಗಕ್ಕೆ ಹೋಗಿ ಬಂದವರಲ್ಲಿ ಮಲೇರಿಯಾ ಕಂಡು ಬಂದಿದೆ ಎಂದು ಜಿಲ್ಲಾ ಕೀಟ ಶಾಸ್ತ್ರಜ್ಞ ರಾಜೇಶ್ ಕುಲಕರ್ಣಿ ತಿಳಿಸಿದರು.
ತಾಲೂಕಿನ ಹೆಬ್ಬಾಳು ಗ್ರಾಮದಲ್ಲಿ ಬೇಲೂರು ಪ್ರಾಥಮಿಕ ಆರೋಗ್ಯ ಕೇಂದ್ರ ಹಮ್ಮಿಕೊಂಡಿದ್ದ ರಾಷ್ಟ್ರೀಯಾ ಮಲೇರಿಯಾ ಮಾಸಾಚರಣೆ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜೂನ್ ತಿಂಗಳನ್ನು ಮಲೇರಿಯಾ ಮಾಸಾಚರಣೆ ಎಂದು ಅಚರಣೆ ಮಾಡುತ್ತವೆ. ಜೂನ್ನಲ್ಲಿ ಮುಂಗಾರು ಪ್ರಥಮದಲ್ಲಿ ಸೊಳ್ಳೆ ಸಂತತಿ ಹೆಚ್ಚು ಹುಟ್ಟುತ್ತಾವೆ. ಈ ದಿಸೆಯಲ್ಲಿ ಸಾರ್ವಜನಿಕರಿಗೆ ಅಗತ್ಯ ಅರಿವು ಮೂಡಿಸುವ ದಿಸೆಯಲ್ಲಿ ಇಂತಹ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
16 ಪ್ರಕರಣ ಪತ್ತೆ: ಜಿಲ್ಲೆಯಲ್ಲಿ ಇಲ್ಲಿಯ ತನಕ 16 ಮಲೇರಿಯಾ ಪ್ರಕರಣ ಕಂಡು ಬಂದಿದ್ದು, ಬಾಂಬೆ ಹಾಗೂ ಮಂಗಳೂರಿನ ಭಾಗದಲ್ಲಿ ಬಂದಿರುವ ಶಂಕೆ ಇದೆ, ಅಲ್ಲದೆ ಜಿಲ್ಲೆಯ ಸಕಲೇಶಪುರದಲ್ಲಿ ಯಾವ ಪ್ರಕರಣ ಕಂಡು ಬಂದಿಲ್ಲ.
ಇನ್ನು ಡೆಂಘೀ 125 ಶಂಕಿತ ಪ್ರಕರಣಗಳು ಪತ್ತೆಯಾಗಿವೆ.  ಅದರೆ ಪರೀಕ್ಷೆಯಲ್ಲಿ ರೋಗದ ಛಾಯೆ ಕಂಡು ಬಂದಿಲ್ಲ ಎಂದರು. ತಾಲೂಕು ಆರೋಗ್ಯಾಧಿಕಾರಿ ಡಾ. ಸಂಧ್ಯಾ ಮಾತನಾಡಿ,  ತಾಲ್ಲೂಕಿನಲ್ಲಿ ಹೆಬ್ಬಾಳು ಗ್ರಾಮದಲ್ಲಿ ಪ್ರಥಮ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ, ಇದರ ಉದ್ದೇಶ ಹೆಬ್ಬಾಳು ಗ್ರಾಮ ಪಂಚಾಯ್ತಿ ಸುತ್ತ-ಮುತ್ತು ಗ್ರಾಮದಲ್ಲಿ ಡೆಂಗ್ಯು ಮತ್ತು ಮಲೇರಿಯಾ ಪ್ರಕರಣಗಳು ಕಳೆದ ಭಾರಿ ಕಂಡು ಬಂದ ಹಿನ್ನೆಲೆಯಲ್ಲಿ ಜಾಗೃತಿ ಮೂಡಿಸವ ನಿಟ್ಟಿನಲ್ಲಿ ಕಾರ್ಯಕ್ರಮ ನಡೆಸಲಾಗುತ್ತದೆ ಎಂದರು.


ಔಷಧ ಲಭ್ಯ
ಹನಿಕೆ ವೈದ್ಯಾಧಿಕಾರಿ ಡಾ.ವಿಜಯ್ ಮಾತನಾಡಿ, ಎಲ್ಲಿ ಸ್ವಚ್ಛತೆ ಇಲ್ಲವೋ ಆ ಸ್ಥಳದಲ್ಲಿ ಮಲೇರಿಯಾ ರೋಗ ಹೆಚ್ಚು ಹರಡುತ್ತದೆ. ಆ ಕಾರಣದಿಂದ ಜನರು ಸ್ವಚ್ಛತೆಗೆ ಹೆಚ್ಚು ಮಹತ್ವ ನೀಡಬೇಕು. ಅಲ್ಲದೆ ಸ್ಥಳೀಯ ಗ್ರಾಮ ಪಂಚಾಯ್ತಿ ಆಡಳಿತ ಜನರಿಗೆ ಅರಿವು ಮೂಡಿಸಬೇಕು. ಮಲೇರಿಯಾ ರೋಗ ಬಂದ ವ್ಯಕ್ತಿಗೆ ಆರೋಗ್ಯ ಕೇಂದ್ರದಲ್ಲಿ ತಕ್ಕ ಔಷಧ ಲಭ್ಯವಿದೆ, ಜನರು ಭಯ ಪಡುವ ಅಗತ್ಯವಿಲ್ಲ ಎಂದು ತಿಳಿಸಿದರು.  ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ತಿಮ್ಮೇಗೌಡ, ಮಾಜಿ ಅಧ್ಯಕ್ಷ ವಿಘ್ನೇಶಯ್ಯ, ತಾಲೂಕು ಆರೋಗ್ಯ ಸಹಾಯಕ ಅಧಿಕಾರಿ ಹಕ್ಕ್ಯಿಣ್ಣಕುಮಾರ್, ಶಿಕ್ಷಕ ಭದ್ರೇಗೌಡ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.