ನಿವೇಶನ ಹಕ್ಕು ಪತ್ರಗಳ ಪರಿಶೀಲನೆ
ಚನ್ನರಾಯಪಟ್ಟಣ: ಪಟ್ಟಣದ ಪುರಸಭೆ ವತಿಯಿಂದ 1998ರಲ್ಲಿ ನೀಡಿದ್ದ ನಿವೇಶನದ ಹಕ್ಕು ಪತ್ರಗಳ ಪರಿಶೀಲನೆ ಕಾರ್ಯ ಇಂದು ಪುರಸಭೆಯ ಅಧಿಕಾರಿಗಳು ಶಾಸಕ ಸಿ.ಎನ್ ಬಾಲಕೃಷ್ಣ ನೇತೃತ್ವದಲ್ಲಿ ನಡೆಯಿತು.
ಪುರಸಭೆ ವತಿಯಿಂದ ಕೆರೆ ಬೀದಿ ಮತ್ತು ನಾಗಸಮುದ್ರ ಬಳಿ ವಸತಿ ರಹಿತರಿಗೆ ನೀಡಿದ್ದ ನಿವೇಶನ ಹಕ್ಕು ಪತ್ರಗಳ ಪರಿಶೀಲನೆ ನಡೆಸಿ ಅವರಿಗೆ ಸಕ್ರಮ ಮಾಡಿಕೊಳ್ಳುವುದು ಸೇರಿದಂತೆ ಉಳಿದ ನಿವೇಶನಗಳ ಹಂಚಿಕೆಗಾಗಿ ಶಾಸಕ ಸಿ.ಎನ್ ಬಾಲಕೃಷ್ಣ ಅವರು ನಿವೇಶನ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿದರು.
1998ರಲ್ಲಿ ಕೆರೆ ಬೀದಿಯಲ್ಲಿ ಲೇಔಟ್ ನಿರ್ಮಿಸಿ 83ನಿವೇಶನಗಳನ್ನು ಗುರುತಿಸಿ ಹಕ್ಕು ಪತ್ರಗಳನ್ನು ಪುರಸಭೆಯಿಂದ ನೀಡಿದ್ದು, ಅವುಗಳಲ್ಲಿ ಕೆಲವುಗಳನ್ನು ಮಾತ್ರ ಫಲಾನುಭವಿಗಳಿಗೆ ನೀಡಿ ಕೆಲ ಪ್ರಭಾವಿಗಳು ಹಕ್ಕುಪತ್ರಗಳನ್ನು ಯಾರಿಗೂ ನೀಡದೆ ತಾವೇ ಹೊಂದಿ, ತಮಗೆ ಬೇಕಾದವರಿಗೆ ಬರೆದುಕೊಟ್ಟಿದ್ದು ಪತ್ತೆಯಾಗಿದೆ.
ದಾಖಲಾತಿ ಪರಿಶೀಲನೆ ಸಂದರ್ಭದಲ್ಲಿ ಪುರಸಭೆ ವತಿಯಿಂದ ನೀಡಿರುವ ಹಕ್ಕುಪತ್ರಗಳನ್ನು 27 ಮಂದಿ ನೀಡಿದರೆ, 6ಮಂದಿ ಮೂಲ ದಾಖಲೆ ಬದಲಾಗಿ ಜರಾಕ್ಸ್ ಪ್ರತಿಗಳನ್ನು ನೀಡಿದರು. ಮೂಲ ಪ್ರತಿಗಳನ್ನು ನೀಡುವಂತೆ ಅವರಿಗೆ ಸೂಚನೆ ನೀಡಿದರೆ, ಉಳಿದವರು ತಮ್ಮ ಮೂಲ ದಾಖಲಾತಿ ನೀಡಲು ದಿನಾಂಕ ನಿಗದಿ ಮಾಡುವಂತೆ ಅಧಿಕಾರಿಗಳಿಗೆ ಶಾಸಕ ಸಿ.ಎನ್ ಬಾಲಕೃಷ್ಣ ತಿಳಿಸಿದರು. ಪುರಸಭಾಧ್ಯಕ್ಷ ಮಂಜಣ್ಣ, ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್, ಮುಖ್ಯಾಧಿಕಾರಿ ನಾಗರಾಜು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

