ಹಾಸನ

ಪೊಲೀಸರ ವಿರುದ್ಧ 'ಕೈ' ಕಾರ್ಯಕರ್ತರ ಆರೋಪ

Published On :

ಹಾಸನ: ಸಾರ್, ಆ ಚನ್ನರಾಯಪಟ್ಟಣ ಸಬ್ ಇನ್ಸ್ಪೆಕ್ಟರ್ ಇದ್ದಾರಲ್ಲಾ... ಭಾರಿ ಲಂಚಕೋರ ಸಾರ್. ನನ್ನ ಹತ್ರನೇ 10 ಸಾವಿರ ರು. ಲಂಚ ತಕ್ಕಂಡ... ಅಕ್ರಮ ಮರಳು ಸಾಗಾಣಿಕೆಯಲ್ಲಿ ಪೊಲೀಸರು ಭಾಗಿಯಾಗಿದ್ದಾರೆ.. ಅತ್ಯಾಚಾರ ಪ್ರಕರಣಗಳನ್ನು ಪೊಲೀಸ್ ಠಾಣೆಗಳಲ್ಲಿ ದಾಖಲಿಸಿಕೊಳ್ಳುವುದೇ ಇಲ್ಲ.. ಸುಮ್ಸುಮ್ಮನೇ ರೌಡಿ ಶೀಟ್ ಹಾಕ್ತಾರೆ.. ಅದನ್ನು ತೆಗೆಸಿ... ಸಾರ್..ತೆಗಿಸಿ.
ಹೀಗೆ ಸೋಮವಾರ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಗೃಹ ಸಚಿವ ಕೆ,.ಜೆ. ಜಾರ್ಜ್ ಮುಂದೆ ಸಮಸ್ಯೆಗಳನ್ನು ನಿವೇದಿಸಿಕೊಂಡರು. ಅಲ್ಲದೇ ಮುಖಂಡರೊಬ್ಬರು, ಕಾಂಗ್ರೆಸ್ ಅಧಿಕಾರಕ್ಕೆ ಬಂದು ವರ್ಷವಾದರೂ ಕಾರ್ಯಕರ್ತರಿಗೆ ನಯಾಪೈಸೆ ಅನುಕೂಲ ಆಗಿಲ್ಲ. ಆದ್ದರಿಂದ 2 ಲಕ್ಷ ರು. ವರೆಗಿನ ಕಾಮಗಾರಿಯನ್ನು ಟೆಂಡರ್ ಇಲ್ಲದೇ ಕಾರ್ಯಕರ್ತರಿಗೆ ನೀಡಬೇಕೆಂದು ಆಗ್ರಹಿಸಿದರು.
ಕಾಂಗ್ರೆಸ್ ಮುಖಂಡ ತಾರಾ ಚಂದನ್ ಮಾತನಾಡಿ, ಸಕಲೇಶಪುರ ತಾಲೂಕಿನಲ್ಲಿ ಅತ್ಯಾಚಾರ ನಡೆದ ಪ್ರಕರಣಗಳನ್ನು ದಾಖಲಿಸಿಕೊಳ್ಳುತ್ತಿಲ್ಲ. ಹಾಗೆಯೇ ಹಾಸನ ನಗರದ ಪೆನ್ಷನ್ ಮೊಹಲ್ಲಾ ಠಾಣೆಯಲ್ಲೂ ದಾಖಲಿಸಿಕೊಳ್ಳುವುದಿಲ್ಲ. ಕೂಡಲೇ ಕೇಸು ದಾಖಲಿಸಿಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗೆ ಸೂಚಿಸಬೇಕೆಂದರು. ಚನ್ನರಾಯಪಟ್ಟಣ ತಾಲೂಕಿನ ಕಾರ್ಯಕರ್ತ ಶೇಖರ್, ಶಾಂತಿಗ್ರಾಮ ಹೋಹಳಿ ದೇವನಹಳ್ಳಿಯ ಮೋಹನ್ಕುಮಾರ್, ಕೆಬ್ಬಾಳ ಗ್ರಾಮದ ರಾಮಕೃಷ್ಣ ಪೊಲೀಸರ ವರ್ತನೆ ಬಗ್ಗೆ ಅಸಮಾಧಾನ ವಕ್ತಪಡಿಸಿದರು.
ಮಾಜಿ ಶಾಸಕ ಮಲ್ಲೇಶ್ ಮಾತನಾಡಿ, ದರೇ ಗೃಹ ಸಚಿವರಿಗೆ ಮತ್ತು ರಾಜ್ಯ ಸರ್ಕಾರಕ್ಕೆ ಉತ್ತಮ ಹೆಸರು ಬರುತ್ತದೆ ಎಂದು ಸಲಹೆ ನೀಡಿದರು. ಮುಖಂಡರಾದ ವಿನಯ ಗಾಂಧಿ ಮತ್ತು ಮಾಜಿ ಶಾಸಕ ಪುಟ್ಟೇಗೌಡ ಮತ್ತಿತರು ಮಾತನಾಡಿ, ಜೆಡಿಎಸ್ ಮುಖಂಡರ ದಬ್ಬಾಳಿಕೆ ಹೆಚ್ಚಾಗುತ್ತಿದೆ. ಇದನ್ನು ತಡೆಯಬೇಕೆಂದು ಆಗ್ರಹಿಸಿದರು. ನೀವು ಏನೇ ಹೇಳಿ ಕಾನೂನಿನಂತೆ ಕ್ರಮ:
ಗೃಹ ಸಚಿವ ಕೆ.ಜೆ. ಜಾರ್ಜ್ ಅವರು ಮಾತನಾಡಿ, ಯಾವುದೇ ಆರೋಪ ಮತ್ತು ದೂರುಗಳ ಬಗ್ಗೆ ನೇರವಾಗಿ ಕ್ರಮ ತೆಗೆದುಕೊಳ್ಳಲಿಕ್ಕೆ ಆಗದು. ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡಬೇಕಾಗುತ್ತದೆ. ಈಗ ಪೊಲೀಸರ ವಿರುದ್ಧ ಹೇಳಿರುವ ಆರೋಪಗಳ ಬಗ್ಗೆ  ಜಿಲ್ಲಾ ಸಮಿತಿಯಲ್ಲಿ ಚರ್ಚಿಸಿ, ತಮಗೆ ವರದಿ ನೀಡಿದರೇ ಕ್ರಮ ತೆಗೆದುಕೊಳ್ಳಲಾಗುವುದು. ಗೂಂಡಾ ಕಾಯ್ದೆಯಡಿ ರೌಡಿ ಶೀಟ್ಗೆ ಸೇರ್ಪಡೆ ಮಾಡಿರುವುದನ್ನು ಮರು ಪರಿಶೀಲನೆ ಮಾಡಿ, ತೆಗೆಸಲಾಗುವುದು ಎಂದು ಭರವಸೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.