ಹಾಸನ

ಬೀಜೋಪಚಾರ

Published On :

ಉದಯಪುರ (ಚನ್ನರಾಯಪಟ್ಟಣ ತಾ.): ತಾಲೂಕಿನ ಉದಯಪುರದಲ್ಲಿ ಭೂಚೇತನ ಯೋಜನೆಯಡಿ ಕೃಷಿ ಇಲಾಖೆ, ರೈತ ಸಂಪರ್ಕ ಕೇಂದ್ರ, ಉದಯಪುರ ವತಿಯಿಂದ ಹೋಬಳಿ ಮಟ್ಟದ ರೈತ ತರಬೇತಿ ಹಾಗೂ ಬೀಜೋಪಚಾರ ಆಂದೋಲನ ಕಾರ್ಯಕ್ರಮ ನಡೆಯಿತು. ಕೃಷಿ ಮಹಾವಿದ್ಯಾಲಯ ಕಾರೇಕೆರೆಯ ರೋಗಶಾಸ್ತ್ರ ತಜ್ಞ ಡಾ.ನಾಗರಾಜು ವಿವಿಧ ಬೆಳೆಗಳಿಗೆ ತಗಲುವ ರೋಗ, ಕೀಟಗಳು, ಅವುಗಳನ್ನು ಹತೋಟಿ ಮಾಡುವ ಕ್ರಮ, ಬಳಸಬೇಕಾದ ಔಷಧಿಗಳು ಅದರ ಪ್ರಮಾಣ ಹಾಗೂ ಬೀಜೋಪಚಾರದ ಉದ್ದೇಶ ಹಾಗೂ ಮಹತ್ವ ತಿಳಿಸಿದರು. ಬೇಸಾಯ ತಜ್ಞ ಡಾ.ಮಂಜುನಾಥ ಮಾತನಾಡಿ, ನಾನಾ ಬೆಳೆಗಳು, ಅದರ ತಳಿಗಳು, ಯಾವ ತಳಿಗಳ ಬಿತ್ತನೆ ಕಾಲ, ಅವುಗಳ ಅಂತರ, ಇಳುವರಿ ಹಾಗೂ ಲಘುಪೋಷಕಾಂಶಗಳ ಬಳಕೆ ಜೊತೆಗೆ ಭೂಮಿ ಚೇತನಗೊಳ್ಳಲು ಲಘುಪೋಷಕಾಂಶಗಳು ಅವಶ್ಯಕ ಎಂದು ತಿಳಿಸಿದರು. ತಾಲೂಕು ಪಂಚಾಯ್ತಿ ಅಧ್ಯಕ್ಷೆ ಹೇಮಾವತಿ ಕೃಷ್ಣನಾಯಕ್ ಉದ್ಘಾಟಿಸಿದರು. ತಾಲೂಕು ಪಂಚಾಯ್ತಿ ಸದಸ್ಯರಾದ ದೇವೇಗೌಡ, ರವೀಶ್, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಜಯಲಕ್ಷ್ಮಮ್ಮ ಶಾಂತರಾಜ್,  ಬರಗೂರು ಗ್ರಾಮ ಘಟಕದ ರೈತ ಸಂಘದ ಅಧ್ಯಕ್ಷ ರಾಮದಾಸ್ ಇದ್ದರು. ಕೃಷಿ ಇಲಾಖೆ ಸಹಾಯಕ ಕೃಷಿ  ನಿರ್ದೇಶಕ ಮಲ್ಲೇಶಗೌಡ, ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ರಶ್ಮಿ,  ಮಾತನಾಡಿದರು. ಆತ್ಮ ಯೋಜನೆ ಅಧಿಕಾರಿ ಗುರುದತ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.