ದೇಶದಲ್ಲಿ ಕೃಷಿ ಕ್ಷೇತ್ರ ಕಡೆಗಣನೆ
ಕ.ಪ್ರ. ವಾರ್ತೆ ಟಿ ಹಾಸನ ಟಿ ಜೂ.10
ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಕೃಷಿ ಕ್ಷೇತ್ರವನ್ನು ಕಡೆಗಣಿಸಿದ್ದು, ಗ್ಯಾಟ್ ಒಪ್ಪಂದ ನಂತರ ದೇಶಾದ್ಯಂತ 3 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಜೈವಿನ ಇಂಧನ ತಜ್ಞ ವೈ.ಬಿ. ರಾಮಕೃಷ್ಣ ಆತಂಕ ವ್ಯಕ್ತಪಡಿಸಿದ್ದಾರೆ.
ಜಾಗತೀಕರಣದ ಪ್ರಭಾವ: ಮಂಗಳವಾರ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಭಾರತೀಯ ಕಿಸಾನ್ ಸಂಘ ಹಮ್ಮಿಕೊಂಡಿದ್ದ ಜಿಲ್ಲಾ ರೈತರ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, 1990ರಲ್ಲಿ ಜಾಗತೀಕರಣದ ಒಪ್ಪಂದಕ್ಕೆ ಸಹಿ ಹಾಕಿ ಈಗ ಅನೇಕ ಪರಿಣಾಮಗಳನ್ನು ಕಾಣಲಾಗುತ್ತಿದೆ. ಮುಖ್ಯವಾಗಿ ಕೃಷಿಯಲ್ಲಿ ಪ್ರಮುಖ ಬದಲಾವಣೆ ಕಂಡಿದ್ದೇವೆ. ಸ್ವಾತಂತ್ರ್ಯ ಬಂದ ನಂತರ ಕೃಷಿ ಕ್ಷೇತ್ರವನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಲಾಗಿದೆ ಎಂದು ಆರೋಪಿಸಿದರು.
ಪ್ರಸ್ತುತದಲ್ಲಿ ಸಂಪ್ರದಾಯದಿಂದ ಆಧುನಿಕರಣಕ್ಕೆ ರೈತರು ವಲಸೆ ಹೋಗುತ್ತಿದ್ದಾರೆ. ಸಾವಿರಾರು ವರ್ಷಗಳಿಂದ ರೈತ ಸಂಪ್ರದಾಯಿಕ ಕೃಷಿ ಮಾಡಿಕೊಂಡು ಬರಲಾಗಿದೆ. ಕೃಷಿ ಎಂಬುದು ಸಂಸ್ಕತಿ ಜೀವನ ಪದ್ಧತಿ. ಆದರೇ ದೇಶದ ಹೊರಗೆ ನೋಡಿದರೇ ಇದನ್ನೆ ವ್ಯಾಪಾರ ಎಂದು ಕರೆಯಲಾಗುತ್ತಿದೆ. ದೇಶದಲ್ಲಿ ಇತಿಹಾಸ ನೋಡಿದಾಗ ಆರೂವರೆ ಸಾವಿರ ವರ್ಷದಿಂದ ರೈತರು ಕೃಷಿ ಮಾಡಿಕೊಂಡೆ ಬರುತ್ತಿದ್ದಾರೆ ಎಂದು ಹೇಳಿದರು.
ಕಂಪನಿಗಳ ಉದ್ಧಾರ: ದೇಶದಲ್ಲಿ ಹೆಚ್ಚು ಮಳೆ ಆಧಾರಿತ ಕೃಷಿ ಇದ್ದು, ಅದಕ್ಕೆ ಬೇಕಾಗುವ ಅವಶ್ಯಕ ಬೀಜವನ್ನು ಅವರೇ ತಯಾರು ಮಾಡಿಕೊಳ್ಳುತ್ತಿದ್ದರು. ಒಂದು ಗ್ರಾಮದಲ್ಲಿ ಬೆಳೆ ಬೀಜವನ್ನು ಒಬ್ಬರಿಗೊಬ್ಬರೂ ಹಂಚಿಕೊಳ್ಳುತ್ತಿದರು. ಆದರೇ ಮಾರಾಟ ಮಾಡುತ್ತಿರಲಿಲ್ಲ. ಇಂದು ದೊಡ್ಡ ಪ್ರಮಾಣದಲ್ಲಿ ರಸಾಯನಿಕ ಮತ್ತು ಕೀಟನಾಶಕ ಔಷಧಿ ಬಳಸಲಾಗುತ್ತಿದೆ. ಸಾಂಪ್ರದಾಯಕ ಕೃಷಿ ಬದಲಾಗಿ ರಸಾಯನಿಕ ಬಳಸಲಾಗುತ್ತಿದೆ ಎಂದು ವಿಷಾದಿಸಿದರು.
ಎರಡನೇ ಮಹಾಯುದ್ದದ ನಂತರ ಅಮೆರಿಕಾ ಸಂಚು ಮಾಡಿ ಅಲ್ಲಿನ ಗೊಬ್ಬರ ವಿತರಣೆಯನ್ನು ಭಾರತಕ್ಕೆ ನೀಡಲು ಮುಂದಾಯಿತು. ಸ್ವಾತಂತ್ರ್ಯದ ಹಿಂದೆ 125 ಕೋಟಿ ಜಾನುವಾರಿಗಳಿದ್ದರೇ 30 ಕೋಟಿ ಜನಸಂಖ್ಯೆ ಇತ್ತು. ಇಂದು ಜನಸಂಖ್ಯೆ 125 ಕೋಟಿ ಆದರೇ ಜಾನುವಾರುಗಳ ಸಂಖ್ಯೆ 35 ಕೋಟಿಗೆ ಕುಸಿದಿದೆ. ಇಂದು ಮಣ್ಣಿನ ಸವಕಳಿಯಿಂದ ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ಯಾವ ಬೆಳೆಯನ್ನು ಬೆಳೆಯದಂತ ಪರಿಸ್ಥಿತಿ ಬಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೈಗಾರಿಕೆ ಅಭಿವೃದ್ಧಿಯಾಗಬೇಕು: ಬೆಂಗಳೂರು ಪ್ರಾಂತ ಸಂಚಾಲಕ ಪುಟ್ಟಸ್ವಾಮಿ ಮಾತನಾಡಿ, ದೇಶ ಅಭಿವೃದ್ಧಿ ಆಗಬೇಕಾದರೇ ಮೊದಲು ಕೈಗಾರಿಕೆ ಉತ್ತಮ ಪಡಿಸಬೇಕು. ಅದಕ್ಕೆ ಮೊದಲು ಬಂಡಾವಳ ಬೇಕಾಗುತ್ತದೆ. ಕೃಷಿ ನಿರ್ಲಕ್ಷ್ಯದಿಂದ ಈಗ ಬೇಡವೆಂದು ರೈತರು ನಿರ್ಲಕ್ಷ್ಯ ಮನೋಭಾವನೆ ಬೆಲೆಸಿಕೊಂಡಿದ್ದಾರೆ. ಬೆಳೆದ ಬೆಳೆಗೆ ಬೆಲೆ ಇಲ್ಲದೆ ರೈತ ಸಾಲಬಾಧೆಯಿಂದ ಆತ್ಮಹತ್ಯೆಗೆ ಶರಣಾಗುವ ಪರಿಸ್ಥಿತಿ ಕಾಣುತ್ತಿದ್ದೇವೆ. ಪ್ರಸ್ತುತದಲ್ಲಿ ರೈತ ಮುಖ್ಯವಾಗಿ ತಮ್ಮ ಬೆಳೆಗೆ ಔಷಧಿ ಕೊಂಡು ಕೊಳ್ಳುವುದರ ಮೂಲಕ ಔಷಧಿ ಕಂಪನಿ ಉದ್ದಾರ ಮಾಡಲಾಗುತ್ತಿದೆ ಹೊರತು ರೈತನ ಬೆಳೆ ಅಭಿವೃದ್ಧಿಪಡಿಸಲಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ತಮ್ಮಪ್ಪಗೌಡ, ವೈ.ಎಂ. ರಾಜು ಇತರರು ಪಾಲ್ಗೊಂಡಿದ್ದರು. ಜಿಲ್ಲಾ ಘಟಕದ ಉಪಾಧ್ಯಕ್ಷ ಎಸ್.ಪಿ. ರಾಜೀವ್ ಗೌಡ ಸ್ವಾಗತಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

