ಮಕ್ಕಳಲ್ಲಿ ಸಮಾನತೆ ಮನೋಭಾವ ಬೆಳೆಸಿ
ಹಾಸನ: ಮಕ್ಕಳಲ್ಲಿ ಸರ್ವಧರ್ಮ ಸಮಾನತೆಯ ಮನೋಧರ್ಮ ಬೆಳೆಸಬೇಕಾದ ಜವಬ್ದಾರಿ ಶಿಕ್ಷಕರು ಮೇಲಿದ್ದು, ಇಂದಿನ ಎಲ್ಲಾ ಶಾಲೆಗಳು ಇದೇ ಹಾದಿಯಲ್ಲಿ ಸಾಗಬೇಕು ಎಂದು ರಾಷ್ಟ್ರಪತಿ ಪದಕ ವಿಜೇತ ಹಾಗೂ ಡಿಫೆನ್ಸ್ ವಿಭಾಗದ ಡೆಪ್ಯುಟಿ ಕಮಾಂಡೆಂಟ್ ಆಫೀಸರ್ ಯೋಗಪ್ಪ ಹೆಗಡೆ ತಿಳಿಸಿದ್ದಾರೆ. ನಗರದ ಟೈಮ್ಸ್ ಅಂತಾರಾಷ್ಟ್ರೀಯ ಶಾಲೆಯಯಲ್ಲಿ 2014-15ನೇ ಸಾಲಿನ ಶೈಕ್ಷಣಿಕ ವರ್ಷಾರಂಭದ ಪ್ರಯುಕ್ತ ಇತ್ತೀಚೆಗೆ ಹಮ್ಮಿಕೊಂಡಿದ್ದ ಟೈಮ್ಸ್ ಸರ್ವಧರ್ಮ ವಿದ್ಯಾರಂಭ ಮಹೋತ್ಸವ ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದರು, ಮಕ್ಕಳಿಗೆ ಕೇವಲ ಪಠ್ಯವನ್ನು ಮಾತ್ರ ಬೋಧನೆ ಮಾಡದೆ ಇಂತಹ ಕಾರ್ಯಕ್ರಮಗಳನ್ನು ನಡೆಸುವುದರಿಂದ ಮಕ್ಕಳು ಸಾಮಾಜಿಕವಾಗಿ, ಬೌದ್ಧಿಕವಾಗಿ ಬೆಳೆಯಲು ಸಹಕಾರಿಯಗಲಿದೆ ಎಂದರು.
ಸಮಾನತೆ ಬೋಧಿಸಿ: ಸಂಸ್ಥೆಯ ಕಾರ್ಯದರ್ಶಿ ಬಿ.ಕೆ. ಗಂಗಾಧರ ಮಾತನಾಡಿ ಮಕ್ಕಳನ್ನು ಪ್ರಾಥಮಿಕ ಹಂತದಿಂದಲೇ ಅವರಿಗೆ ಸಮಾನತೆಯ ಬಗ್ಗೆ ತಿಳಿಸಿಕೊಡುವ ನಿಟ್ಟಿನಲ್ಲಿ ಶಾಲೆಯ ವತಿಯಿಂದ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಧರ್ಮದ ಗುರುಗಳಿಂದ ಆಯಾ ಧರ್ಮದ ಮಕ್ಕಳಿಗೆ ವಿದ್ಯಾರಂಭವನ್ನು ಮಾಡಿಸಲಾಯಿತು. ಸಾಂಪ್ರದಾಯಿಕ ಚೌಕಟ್ಟಿನೊಂದಿಗೆ ಶಾಸ್ತ್ರೋಕ್ತವಾಗಿ ಕಾರ್ಯಕ್ರಮವನ್ನು ನಡೆಸಲಾಯಿತು ಹಾಗೂ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಗುರುಕುಲ ಪದ್ಧತಿಯನ್ನು ಮಕ್ಕಳಿಗೆ ತಿಳಿಸಿಕೊಡಲಾಯಿತು. ಟೈಮ್ಸ್ ಸಂಸ್ಥೆಯ ಅಧ್ಯಕ್ಷ ಎ.ಬಿ. ಸುರೇಂದ್ರ ಕುಮಾರ್, ಪ್ರಾಂಶುಪಾಲ ಉಮಾ ಎಸ್. ಪಾಟೀಲ್ ಹಾಗೂ ಶಿಕ್ಷಕರಾದ ಹಾಲಿ, ನಾಜೀಮ, ರೋಹಿಣಿ, ನಳಿನಾಕ್ಷಿ, ದೈಹಿಕ ಶಿಕ್ಷಕ ಪ್ರಸನ್ನ, ಸುನಿತ ಇತರರು ಇದ್ದರು.
ನಿರ್ಮಲಾ ಚಿತ್ರಕಲಾ ಶಾಲೆಗೆ ಶೇ.100
ಹಾಸನ: ಹಂಪಿ ಕನ್ನಡ ವಿಶ್ವವಿದ್ಯಾಲಯ ವತಿಯಿಂದ ಇತ್ತೀಚೆಗೆ ನಡೆಸಿದ ಚಿತ್ರ ಕಲಾ ಪದವಿ ಬಿಬಿಎ ಪರೀಕ್ಷಾ ಫಲಿತಾಂಶವು ಪ್ರಕಟಗೊಂಡಿದ್ದು, ಹಾಸನದ ನಿರ್ಮಲಾ ಚಿತ್ರ ಕಲಾ ಶಾಲೆಗೆ ಶೇ 100 ಫಲಿತಾಂಶ ಬಂದಿದೆ. 2014 ರ ಶೈಕ್ಷಣಿಕ ಸಾಲಿನ ಚಿತ್ರ ಕಲಾ ಶಿಕ್ಷಣದಲ್ಲಿ ಬಿ.ಬಿ.ಎ. ತರಗತಿ ಪ್ರವೇಶ ಪ್ರಾರಂಭವಾಗಿದ್ದು ಎಸ್ಸೆಸ್ಸೆಲ್ಸಿ ಪಾಸಾದವರು, ಪಿಯುಸಿ, ಐಟಿಐ, ಜೆಒಸಿ, ಡಿಎಂಸಿ, ಉತ್ತಿರ್ಣ ಅಥವಾ ಅನ್ನುತೀರ್ಣ ಆದವರು ಪ್ರವೇಶಕ್ಕೆ ಅರ್ಹರಾಗಿದ್ದಾರೆ ಎಂದು ಪ್ರಾಂಶುಪಾಲರ ಕಾರದಕಟ್ಟಿ ಅವರು ತಿಳಿಸಿದ್ದಾರೆ. 9448220852 ಸಂಪರ್ಕಿಸಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

