ಹಾಸನ

ಗೊಬ್ಬರ ದಾಸ್ತಾನು ಹೋಬಳಿ ಮಟ್ಟಕ್ಕೆ ವಿಸ್ತರಿಸಿ: ಡಿಸಿ ಸೂಚನೆ

Published On :

ಹಾಸನ: ಜಿಲ್ಲೆಯಲ್ಲಿ ರಸಗೊಬ್ಬರ ಮತ್ತು ಬಿತ್ತನೆ ಬೀಜಗಳಿಗೆ ಯಾವುದೇ ರೀತಿಯ ಕೊರತೆ ಉಂಟಾಗದಂತೆ ಮುಂಜಾಗ್ರತೆ ವಹಿಸುವಂತೆ ಜಿಲ್ಲಾಧಿಕಾರಿ ವಿ.ಅನ್ಬು ಕುಮಾರ್ ಕೃಷಿ ಇಲಾಖೆ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದ್ದಾರೆ.
 ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ರಸಗೊಬ್ಬರ ಹಾಗೂ ಬಿತ್ತನೆ ಬೀಜದ ಲಭ್ಯತೆ ಮತ್ತು ವಿತರಣೆ ಕುರಿತು ಚರ್ಚಿಸಲು ಕೃಷಿ, ತೋಟಗಾರಿಕೆ ಇಲಾಖೆಗಳು ಮಾರ್ಕೇಟಿಂಗ್ ಫೆಡರೇಷನ್ ಅಧಿಕಾರಿಗಳ ಸಭೆ ನಡೆಸಿದ ಅವರು ಯಾವುದೇ ನೈಜ ಅಥವಾ ಕೃತಕ ಅಭಾವಗಳು ಸೃಷ್ಟಿಯಾಗದಂತೆ ಎಚ್ಚರ ವಹಿಸಲು ಸೂಚಿಸಿದರು.
ಗೊಬ್ಬರ ದಾಸ್ತಾನು: ರಸಗೊಬ್ಬರಗಳ ನಿಯಮಿತ ಕಾಪು ದಾಸ್ತಾನು ಇರಲೇಬೇಕು. ಕೇವಲ ಖಾಸಗಿ ಸಂಸ್ಥೆಗಳು ವ್ಯಾಪಾರಸ್ಥರಿಗೆ ಗೊಬ್ಬರ ಪೂರೈಸದೆ ಹೆಚ್ಚ್ಚಿನ ಪ್ರಮಾಣದಲ್ಲಿ ವ್ಯವಸಾಯ ಸೇವಾ ಸಂಘಗಳಿಗೆ, ಸಹಕಾರ ಸಂಸ್ಥೆಗಳಿಗೂ ಒದಗಿಸುವಂತೆ ತಿಳಿಸಿದ ಅವರು, ಹಾಸನ ನಗರದಲ್ಲೇ ಗೊಬ್ಬರ ದಾಸ್ತಾನು ಮಾಡಿಟ್ಟುಕೊಳ್ಳುವ ಬದಲು ಅದು ಎಲ್ಲಾ ಹೋಬಳಿಗಳಿಗೆ ತಲುಪುವಂತೆ ನೋಡಿಕೊಳ್ಳಿ. ನಿರಂತರ ನಿಗಾ ವಹಿಸಿ ವರದಿ ಸಲ್ಲಿಸುವಂತೆ ಜಂಟಿ ಕೃಷಿ ನಿರ್ದೇಶಕರಿಗೆ ಹೇಳಿದರು.
ಇದೇ ವೇಳೆ ಆಲೂಗೆಡ್ಡೆ ಬಿತ್ತನೆ ಬೀಜ ಮಾರಾಟ, ಬಿತ್ತನೆ, ಸಧ್ಯದ ಸ್ಥಿತಿಗತಿಗಳ ಬಗ್ಗೆ ತೋಟಗಾರಿಕಾ ಉಪನಿರ್ದೇಶಕ ಶಕೀಲ್ ಅಹಮದ್ ಅವರಿಂದ ಅನ್ಬು ಕುಮಾರ್ ಮಾಹಿತಿ ಪಡೆದರು.
 ಜಂಟಿ ಕೃಷಿ ನಿರ್ದೇಶಕ  ಬಿ.ಶಿವರಾಜ್ ಅವರು, ಜಿಲ್ಲೆಯಲ್ಲಿ  ನಾನಾ  ಕಂಪನಿಗಳಲ್ಲಿ 11,430 ಟನ್ ಹಾಗೂ ಸಹಕಾರ ಮಾರಾಟ ಮಹಾ ಮಂಡಳಗಳಲ್ಲಿ 7252 ಟನ್ ರಸಗೊಬ್ಬರ ಸೇರಿದಂತೆ ಒಟ್ಟು 18,682 ಟನ್ ರಸಗೊಬ್ಬರ ದಾಸ್ತಾನಿದೆ ಎಂದು ಸಭೆಗೆ ಮಾಹಿತಿ ನೀಡಿದರು.
 ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಶ್ಮಿ, ಮಾರ್ಕೇಟಿಂಗ್ ಫೆಡರೇಷನ್ ಅಧಿಕಾರಿ ನಾಯಕ್ ಸಭೆಯಲ್ಲಿ  ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.