ಹಾಸನ

ಬಾಲ ವಿಜ್ಞಾನಿ ದೀಪಿಕಾಗೆ ಸನ್ಮಾನ

Published On :

ಚನ್ನರಾಯಪಟ್ಟಣ:  ಕಿರಿಯ ವಯಸ್ಸಿನಲ್ಲಿ  ಹಿರಿಯ ಸಾಧನೆಗೈದ ಗ್ರಾಮೀಣ ವಿದ್ಯಾರ್ಥಿನಿಯೊಬ್ಬಳನ್ನು ತಾಲೂಕು ಆಡಳಿತದ ವತಿಯಿಂದ ಆಕೆಯ ನಿವಾಸದಲ್ಲಿ ಆಭಿನಂದಿಸಲಾಯಿತು.
ತಾಲೂಕಿನ ಕೆರೆಚಿಕ್ಕೇನಹಳ್ಳಿ ಗ್ರಾಮದ ನಂಜಪ್ಪ ಹಾಗೂ ರತ್ನಮ್ಮ ಪುತ್ರಿ ಸಿ. ಎನ್. ದೀಪಿಕಾ ಸಾಧನೆ ಮಾಡಿದ ಪುಟ್ಟ  ಪೋರಿಯಾಗಿದ್ದಾಳೆ. ಪರಿಸರಕ್ಕೆ ಹಾನಿಯಾಗದ  ಪ್ಲಾಸ್ಟಿಕ್‌ಗೆ ಬದಲಾಗಿ ಪಾರ್ಥೇನಿಯಂ ಸಸ್ಯದ ನಾರಿನಿಂದ ಹಗ್ಗ ತಯಾರಿಸುವುದು ಹಾಗೂ ವಿಮಾನದ ಹೊರ ಕವಚಕ್ಕೆ ಬಳಕೆ ಮಾಡಬಹುದಾದ ಮೆಟಲ್ ಈ ಸಸ್ಯದಿಂದ ಅಭಿವೃದ್ಧಿ ಪಡಿಸಬಹುದು ಎಂದು ತನ್ನ ಹೊಸ ಸಂಶೋಧನೆಯಿಂದ ಸಾದರಪಡಿಸಿದ್ದಾಳೆ.
ಪ್ರಬಂಧ ಮಂಡನೆ: 9ನೇ ತರಗತಿಯ ಅಭ್ಯಾಸದಲ್ಲೇ ಶಿಕ್ಷಕ ಜಯಶ್ರೀಭಟ್ ಹಾಗೂ ಸಾಧನ ಹೆಬ್ಬಾರ್ ಅವರ ಮಾರ್ಗದರ್ಶನದಲ್ಲಿ ಕಳೆಯಿಂದ ನಾರು ತೆಗೆಯುವುದು ಎಂಬ ಹೊಸ ಸಂಶೋಧನೆಯನ್ನು ಯುರೋಪಿನ ನೆದರ್‌ಲೆಂಡ್‌ನಲ್ಲಿ ಜೂ.1ರಂದು ಬಾಲವಿಜ್ಞಾನಿಯಾಗಿ ಪ್ರಬಂಧ ಮಂಡಿಸಿದ್ದಳು.
ಈಕೆ ತನ್ನ ಸ್ನೇಹಿತೆ ಆಯಿಷಾ ಪಾಹಿಮಾ ಜತೆಗೂಡಿ ಅಂತಾರಾಷ್ಟ್ರೀಯ ವಿಜ್ಞಾನ ಒಲಂಪಿಯಾಡ್‌ನಲ್ಲಿ ಮಂಡಿಸಿದ ಯೋಜನೆಗೆ ರಾಷ್ಟ್ರ ಪ್ರಶಸ್ತಿಯೊಂದಿಗೆ ಚಿನ್ನದ ಪದಕ ಗಳಿಸಿದ್ದಾಳೆ. ಪಾರ್ಥೇನಿಯಂ ಗಿಡದಿಂದ ಮ್ಯಾಟ್, ಹಗ್ಗಗಳು, ಪರದೆ ತಯಾರು ಮಾಡಿ ಹೇಗೆ ಬಳಸಹುದೆಂದು ಪ್ರಾಯೋಗಿಕವಾಗಿ ಪ್ರಬಂಧದೊಡನೆ ಮಂಡಿಸಿದ್ದಾಳೆ.
ಈಕೆ ಪುತ್ತೂರಿನ ಸುಧಾನ ರೆಸಿಡೆನ್ಸಿಯಲ್ ಸ್ಕೂಲ್‌ನಲ್ಲಿ ಒಂಬತ್ತನೇ ತರಗತಿ ಅಭ್ಯಾಸ ಮಾಡುತ್ತಿದ್ದಾಳೆ. ನೆದರ್‌ಲೆಂಡ್‌ನಲ್ಲಿ ನಡೆದ ಬಾಲ ವಿಜ್ಞಾನಿಗಳ ಸ್ಪರ್ಧೆಯಲ್ಲಿ 45 ದೇಶಗಳಿಂದ 170 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಪೈಕಿ ತಾಲೂಕಿನ ಕೆರೆ ಚಿಕ್ಕೇನಹಳ್ಳಿ ಗ್ರಾಮದ ದೀಪಿಕಾ ಈ ಸಾಧನೆಗೈದು ಪುಟ್ಟ ವಿಜ್ಞಾನಿಯಾಗಿದ್ದಾಳೆ.
ಗ್ರೇಡ್2 ತಹಸಿಲ್ದಾರ್ ಸೋಮಶೇಖರ್ ಹಾಗೂ ಕಸಬಾ ರೆವಿನ್ಯೂ ಇನ್ಸ್‌ಪೆಕ್ಟರ್ ಅನಿಲ್ ಕುಮಾರ್ ಅವರು ದೀಪಿಕಾ ಮನೆಗೆ ಭೇಟಿ ನೀಡಿ ಆಕೆಗೆ ಶಾಲು ಹೊದಿಸಿ ತಾಲೂಕು ಆಡಳಿತದ ಪರವಾಗಿ ಶುಭ ಹಾರೈಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.