ಹಾಸನ

ರಾಮ ಮಂದಿರ ಸ್ಥಾಪನೆಗೆ ಹಿಂದೂ ಜನಜಾಗೃತಿ ಕಾರ್ಯಕರ್ತರ ಆಗ್ರಹ

Published On :

ಹಾಸನ: ಅಯೋಧ್ಯೆ ಶ್ರೀರಾಮಜನ್ಮ ಭೂಮಿಯಲ್ಲಿ ಶ್ರೀರಾಮ ಮಂದಿರ ಸ್ಥಾಪಿಸುವಂತೆ ಆಗ್ರಹಿಸಿ ರಾಷ್ಟ್ರೀಯ ಹಿಂದೂ ಆಂದೋಲನದ ನೇತೃತ್ವದಲ್ಲಿ ನಾನಾ ಹಿಂದುತ್ವವಾದಿ ಸಂಘಟನೆಯ ಕಾರ್ಯಕರ್ತರು ಬುಧವಾರ ಜಿಲ್ಲಾಡಳಿತಕ್ಕೆ ಮನವಿ ನೀಡಿದರು.
ಉತ್ತರ ಪ್ರದೇಶದ ಅಯೋಧ್ಯಾನಗರದಲ್ಲಿ ಶ್ರೀರಾಮನ ಜನ್ಮಸ್ಥಾನದಲ್ಲಿ ಭವ್ಯ ಶ್ರೀರಾಮ ಮಂದಿರವಾಗಲು ಹಿಂದೂಗಳು ಕಳೆದ 500 ವರ್ಷಗಳಿಂದ ಸಂಘರ್ಷ ಮಾಡುತ್ತಿದ್ದಾರೆ. ಅಲಹಾಬಾದ್ ಉಚ್ಚ ನ್ಯಾಯಾಲಯ ಸೆ.30, 2010 ರಂದು ಈ ಸ್ಥಳ ರಾಮ ಜನ್ಮ ಭೂಮಿಯಾಗಿದೆ ಹಾಗೂ ಅಲ್ಲಿ ಶ್ರೀರಾಮ ಮಂದಿರ ಇತ್ತು ಎಂದು ಮಹತ್ವದ ತೀರ್ಪು ನೀಡಿದರೂ ಅಲ್ಲಿ ರಾಮ ಮಂದಿರ ಕಟ್ಟುವ ಬಗ್ಗೆ ಸರ್ಕಾರಿ ಮಟ್ಟದಲ್ಲಿ ಯಾವುದೇ ಚಟುವಟಿಕೆ ಆಗುತ್ತಿರುವುದು ಕಾಣಿಸುತ್ತಿಲ್ಲ.
ಜನರು ಬಿಜೆಪಿಗೆ ಬಹುಮತದಿಂದ ಆರಿಸಿ ಕೇಂದ್ರದಲ್ಲಿ ಅಧಿಕಾರ ಕೊಟ್ಟಿದ್ದಾರೆ. ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಶ್ರೀರಾಮ ಮಂದಿರವನ್ನು ಕಟ್ಟುವೆವು ಎಂದು ಆಶ್ವಾಸನೆ ನೀಡಿದೆ. ಆದ್ದರಿಂದ ಬಿಜೆಪಿ ಸರ್ಕಾರ ಕಾಲಮಿತಿಯನ್ನು ನಿರ್ಧರಿಸಿ ಅಲ್ಲಿ ಭವ್ಯ ಶ್ರೀರಾಮ ಮಂದಿರವನ್ನು ಕಟ್ಟಿ ವಚನವನ್ನು ಪೂರ್ತಿ ಮಾಡಬೇಕೆಂದು ಆಗ್ರಹಿಸಿ ಮನವಿ ನೀಡಿದರು. ಇದೇ ಸಮಯದಲ್ಲಿ ರಾಮ ಮಂದಿರವನ್ನು ಪೂರ್ಣವಾಗುವ ತನಕ ಅಲ್ಲ್ಲೆ ತಾತ್ಕಾಲಿಕವಾಗಿ ದೇವಸ್ಥಾನ ಕಟ್ಟಿ ಡೇರೆಯಲ್ಲಿ ಇರುವ ಶ್ರೀರಾಮನ ಮೂರ್ತಿಯನ್ನು ಅಲ್ಲಿಗೆ ಸ್ಥಳಾಂತರಿಸಬೇಕೆಂದೂ ಒತ್ತಾಯಿಸಿದರು.

ಆರೋಗ್ಯ ಉಚಿತ ತಪಾಸಣೆ ನಾಳೆ
ಅರಸೀಕೆರೆ: ರಾಜ್ಯ ಸರ್ಕಾರದ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನ ವಾಜಪೇಯಿ ಆರೋಗ್ಯ ಶ್ರೀ ಯೋಜನೆಯಡಿ ಮತ್ತು ಮೈಸೂರಿನ ವಿಕ್ರಂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಸಹಯೋಗದಲ್ಲಿ ಜೂ.13 ರಂದು ಪಟ್ಟಣದ ಸರ್ಕಾರಿ ಜೆ.ಸಿ.ಆಸ್ಪತ್ರೆಯಲ್ಲಿ ಶಿಬಿರವನ್ನು ಏರ್ಪಡಿಸಲಾಗಿದೆ. ಶಿಬಿರಾರ್ಥಿಗಳು ಬಿಪಿಎಲ್ ಪಡಿತರದಾರರು ಆಗಿರಬೇಕು. ಮಾಹಿತಿಗೆ ಮೊ. 7259003472, 7259003473 ಸಂಪರ್ಕಿಸಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.