ಹಾಸನ

ರಸಗೊಬ್ಬರ ಬಳಕೆಗೆ ಮುನ್ನ ಮಣ್ಣು ಪರೀಕ್ಷೆ ಮಾಡಿಸಿ: ಡಾ. ಚನ್ನಕೇಶವ

Published On :

ಕ.ಪ್ರ. ವಾರ್ತೆ, ಬೇಲೂರು, ಜೂ. 13
ಅತಿಯಾದ ರಸಗೊಬ್ಬರದ ಬಳಕೆಯಿಂದ ಭೂಮಿಯಲ್ಲಿನ ಜೀವಸತ್ವ ದಿನ ದಿನಕ್ಕೆ ಕುಸಿಯುತ್ತಿದೆ. ಈ ದಿಸೆಯಲ್ಲಿ ರೈತರು ಮಣ್ಣಿನ ಆರೋಗ್ಯ ತಿಳಿದು ರಸಗೊಬ್ಬರ ಬಳಕೆ ಮಾಡುವಂತೆ ಹಾಸನ ಕಂದಲಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ಚನ್ನಕೇಶವ ಕೃಷಿಕರಿಗೆ ಸಲಹೆ ನೀಡಿದರು.
 ತಾಲೂಕಿನ ಬಿಕ್ಕೋಡು ಹೋಬಳಿ ಮದಘಟ್ಟ ಗ್ರಾಮದಲ್ಲಿ ಬೇಲೂರು ಕೃಷಿ ಇಲಾಖೆವತಿಯಿಂದ ಭೂ ಚೇತನ ಯೋಜನೆಯಡಿ ಬಿಕ್ಕೋಡು ಹೋಬಳಿ ಮಟ್ಟದ ತರಬೇತಿ ಭೂಚೇತನ ಕಾರ್ಯಕ್ರಮ ಹಾಗೂ ಮಣ್ಣಿನ ಆರೋಗ್ಯದ ಬಗ್ಗೆ  ಅವರು ಮಾತನಾಡಿದರು.
ಮಣ್ಣಿನ ಪರೀಕ್ಷೆ: ಮಣ್ಣಿನ ಪರೀಕ್ಷೆ ಆದಾರದ ಮೇಲೆ ರಸಗೊಬ್ಬರಗಳ ಬಳಕೆ ಬಗ್ಗೆ ಮತ್ತು ಮಣ್ಣಿನ ಆರೋಗ್ಯವನ್ನು ಸುಧಾರಿಸುವ ಭೂಚೇತನ ಪರಿಕರಗಳಾದ ಜಿಂಕ್,ಬೊರಾಕ್ಸ, ಜಿಪ್ಸಂಗಳ ರೈತರು ತಿಳಿಯುವದು ಅತ್ಯಗತ್ಯವಾಗಿದೆ ಎಂದರು.
 ಜಿಲ್ಲಾ ಪಂಚಾಯ್ತಿ ಸದಸ್ಯೆ ಬಿ.ಡಿ. ಚಂದ್ರೇಗೌಡ ಮಾತನಾಡಿ, ಸರ್ಕಾರ ರೈತರಿಗೆ ಹಲವು ಹತ್ತು ಸವಲತ್ತು ನೀಡುತ್ತಾ ಬಂದಿದೆ, ಅದರೆ ಅವುಗಳು ರೈತಾಪಿ ವರ್ಗಕ್ಕೆ ತಲುಪಿಲ್ಲ. ಈ ನಿಟ್ಟಿನಲ್ಲಿ ರೈತರು ರೈತ ಸಂಪರ್ಕ ಕೇಂದ್ರ ಭೇಟಿ ನೀಡಿ  ಸೌಲಭ್ಯ ಪಡೆದು ಉತ್ತಮ ಇಳುವರಿ ಪಡೆಯಬೇಕು ಎಂದರು.
ಬೇಡವಾದ ವಸ್ತುವಿಗೆ ಸಬ್ಸಿಡಿ: ತಾಲೂಕು ಪಂಚಾಯ್ತಿ ಜೆ.ಸಿ.ಮೋಹನ್ ಮಾತನಾಡಿ, ಸರ್ಕಾರ ರೈತರಿಗೆ ನೀಡುವ ಸಬ್ಸಿಡಿಯಲ್ಲಿ ಕೃಷಿಕರಿಗೆ ಬೇಡವಾದ ವಸ್ತುಗಳನ್ನು ನೀಡುತ್ತಿದೆ.  ಸರ್ಕಾರ ರೈತರಿಗೆ 50 ಸಬ್ಸಿಡಿ ಕೇವಲ ಬಾಯಿ ಮಾತು ಎಂದು ಟೀಕಿಸಿದರು.
 ಸಹಾಯಕ ಕೃಷಿ ನಿರ್ದೇಶಕರಾದ ಬಿ.ಜಿ. ನಾಗೇಂದ್ರ ಪ್ರಸಾದ್ ಮಾತನಾಡಿ ಈ ಭಾರಿ ತಾಲೂಕಿನಲ್ಲಿ ಉತ್ತಮ ಮಳೆ ಬಂದ ಹಿನ್ನೆಲೆಯಲ್ಲಿ ಕೃಷಿಕರಿಗೆ ಅಗತ್ಯವಾದ ಬೀತ್ತನೆ ಬೀಜ ಮತ್ತು ವಿವಿಧ ಗೊಬ್ಬರ ನೀಡಲಾಗಿದೆ ಎಂದರು.  ಕಾರ್ಯಕ್ರಮದಲ್ಲಿ ಮದಘಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸುಂದರಮ್ಮ, ಉಪಾಧ್ಯಕ್ಷರಾದ ಮಂಜುಳಮ್ಮ ಉಪಸ್ಥಿತರಿದ್ದರು. ಕೃಷಿ ಅಧಿಕಾರಿ  ಎನ್.ಸಿ. ಬೆಳಕೇರಿ ವಂದಿಸಿದರು. ಕಾರ್ಯಕ್ರಮದಲ್ಲಿ ರೈತ ಅನುವುಗಾರರಾದ ಸಂಗಯ್ಯ, ನೇತ್ರಾವತಿ, ವಿನಯ, ಆನಂದ, ಮಮತ ಮತ್ತು ನವೀತ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.