ಹಾಸನ

ಕಳಪೆ ಕಾಮಗಾರಿಗೆ ಪುರಸಭಾ ಸದಸ್ಯರ ಗರಂ

Published On :

ಬೇಲೂರು: ಇಲ್ಲಿನ ರಸ್ತೆ ಸಾರಿಗೆ ಸಂಸ್ಥೆಯ ಒಳ ಬರುವ ಮಾರ್ಗದಲ್ಲಿದ್ದ ಗುಂಡಿಯನ್ನು  ಮುಚ್ಚಿಸುತ್ತಿರುವ ಕಾಮಗಾರಿ ಕಳಪೆಯಾಗಿದೆಯೆಂದು ಪುರಸಭಾ ಸದಸ್ಯ ಸತೀಶ್, ಅಧಿಕಾರಿಗಳ ಮತ್ತು ಗುತ್ತಿಗೆದಾರರ ಮೇಲೆ ಹರಿಹಾಯ್ದ ಘಟನೆ ನಡೆಯಿತು.  ಅನೇಕ ತಿಂಗಳುಗಳಿಂದ ಬಿದ್ದಿರುವ ಗುಂಡಿಯಿಂದ ಸಾರಿಗೆ ಬಸ್ಸುಗಳು ನಿಲ್ದಾಣ ದೊಳಗೆ  ಬರುವಾಗ ನೆಲಕ್ಕೆ ತಾಕಿ ಜಖಂ ಆಗುತ್ತಿತ್ತು. ಇದರಿಂದ ಎಚ್ಚೆತ್ತುಕೊಂಡು ಸಾರಿಗೆ ಸಂಸ್ಥೆ  ಅಧಿಕಾರಿಗಳು ಗುಂಡಿ ಮುಚ್ಚಿಸುತ್ತಿದ್ದರು. ಇದನ್ನು ಗಮನಿಸಿದ ಪುರಸಭೆ ಸದಸ್ಯ ಸತೀಶ್ ಹಾಗೂ ಬೆಂಬಲಿಗರು ಕಾಮಗಾರಿ ನಡೆಯುತ್ತಿದ್ದ ಸ್ಥಳಕ್ಕೆ ತೆರಳಿ ಕಾಮಗಾರಿಯ ಗುಣಮಟ್ಟ  ಸರಿಯಿಲ್ಲವೆಂದು ಆರೋಪಿಸಿ ಕಾಮಗಾರಿ ನಿಲ್ಲಿಸಿದರು.  ಸುದ್ದಿಗಾರರೊಂದಿಗೆ ಮಾತನಾಡಿದ ಸಾರಿಗೆ ಸಂಸ್ಥೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಶ್ರೀನಿವಾಸ್, ಗುಂಡಿ ಬಿದ್ದಿರುವ ಸ್ಥಳ ಲೋಕೋಪಯೋಗಿ ಇಲಾಖೆಗೆ ಸೇರಿದ್ದಾಗಿದೆ ಗುಂಡಿ ಮುಚ್ಚಿಸುವಂತೆ ಲೋಕೋಪಯೋಗಿ ಮತ್ತು ಪುರಸಭೆಗೆ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ. ಆದ್ದರಿಂದ ನಾವೇ ಮುಚ್ಚಿಸುತ್ತಿದ್ದೇವೆ. ಇದಕ್ಕೆ ಯಾವುದೇ  ಗುತ್ತಿಗೆ  ನೀಡಿಲ್ಲ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.