ಕಳಪೆ ಕಾಮಗಾರಿ: ತಾಪಂ ಇಒ ಭೇಟಿ, ಪರಿಶೀಲನೆ
ಚನ್ನರಾಯಪಟ್ಟಣ: ಕೆಂಬಾಳು ಗ್ರಾಮ ಪಂಚಾಯ್ತಿಯಲ್ಲಿನ ರೋಜ್ಗಾರ್ ಯೋಜನೆಯ ಕಳಪೆ ಕಾಮಗಾರಿ ಹಾಗೂ ಕೆಲವು ಅವ್ಯವಹಾರ ನಡೆದಿದ್ದು ತಾಲೂಕು ಪಂಚಾಯ್ತಿ ದೂರಿನ ಮೇಲೆ ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಮೃತ್ಯುಂಜಯ ಮತ್ತು ನಿರ್ದೇಶಕ ಜಯರಾಂ ಸ್ಥಳ ಪರಿಶೀಲಿಸಿ ಸಾರ್ವಜನಿಕ ದೂರು ಸ್ವೀಕರಿಸಿ ಮುಂದಿನ ತನಿಖೆಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದಿದ್ದಾರೆ. ಬ್ಯಾಂಕ್ ಕೆಲವು ಸರ್ಟಿಫಿಕಟ್ಗಳಲ್ಲಿ ನಕಲಿ ಸಹಿ ಇದೆ ಎನ್ನಲಾಗಿದೆ, ವಕ್ಕಲ ಗಣ, ಚರಂಡಿ, ಚುರ್ಕಿ ಇತ್ಯಾದಿಗಳ ಕಳಪೆ ಕಾಮಗಾರಿಯಾಗಿದೆ ಎಂದು ಸಾರ್ವಜನಿಕರು ದೂರಿ ನೀಡಿದ ಮೇರೆಗೆ ಕಾರ್ಯನಿರ್ವಹಣಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಯುಜಿಸಿ-ಡಿಎಎಡಿ ಸಂಶೋಧನಾ ಕಾರ್ಯಕ್ಕೆ ಆಯ್ಕೆ
ಹಾಸನ: ಮೈಸೂರು ವಿವಿಯ ಹೇಮಗಂಗೋತ್ರಿ ಸ್ನಾತಕೋತ್ತರ ಕೇಂದ್ರದ ಸಹ ಪ್ರಾಧ್ಯಾಪಕ ಡಾ.ಟಿ.ಎಸ್. ದೇವರಾಜ ಅವರು ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ, ನವದೆಹಲಿ (ಯು.ಜಿ.ಸಿ). ಪ್ರಾಯೋಜಕತ್ವದಲ್ಲಿ ಭಾರತ ಮತ್ತು ಜರ್ಮನಿ ಸರ್ಕಾರದ ಸಹಭಾಗಿತ್ವದಲ್ಲಿನ ಯುಜಿಸಿ-ಡಿಎಎಡಿ ಸಂಶೋಧನಾ ಕಾರ್ಯಕ್ರಮಕ್ಕೆ ಆಯ್ಕೆಗೊಂಡಿದ್ದಾರೆ.
ಸಹಭಾಗಿತ್ವ ಕಾರ್ಯಕ್ರಮದಲ್ಲಿ ಆಯ್ಕೆಗೊಂಡ ರಾಷ್ಟ್ರೀಯ ಮಟ್ಟದ ಆಯ್ಕೆಯಲ್ಲಿ ಇಬ್ಬರು ಸಮಾಜ ವಿಜ್ಞಾನಿಗಳಲ್ಲಿ ಇವರೂ ಒಬ್ಬರು. ಈ ಸಂಶೋನಾ ಕಾರ್ಯಕ್ರಮ ಎರಡು ವರ್ಷದ ಅವಧಿಯಾಗಿದ್ದು 2013 -14 ಮತ್ತು 2014-15 ರ ಅವಧಿಯಲ್ಲಿ ಇವರು ಜರ್ಮನಿಯ ಡುಯಿಷ್ಬರ್ಗ್- ಎಸ್ಸಾನ್ ವಿಶ್ವವಿದ್ಯಾನಿಲಯದಲ್ಲಿ ಜಾಗತಿಕ ತಾಪಮಾನ ಕುರಿತು ಸಂಶೋಧನೆ ನಡೆಸಲಿದ್ದಾರೆ. ಈ ಯೋಜನೆಯ ಪ್ರಯುಕ್ತ ಜೂ. 16 ರಂದು ಡಾ. ಟಿ.ಎಸ್. ದೇವರಾಜ್ ಅವರು ಜರ್ಮನಿಗೆ ಒಂದು ತಿಂಗಳು ಭೇಟಿ ನೀಡಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

