ಹಾಸನ

ಮಳೆ ಕೊರತೆಯಾದಾಗ ಅಲ್ಪಾವಧಿ ಬೆಳೆ ಲಾಭದಾಯಕ

Published On :

ಹೊಳೆನರಸೀಪುರ: ಖುಷ್ಕಿ ಪ್ರದೇಶಗಳಲ್ಲಿ ಮಳೆ ಕೊರತೆ ಉಂಟಾದಾಗ ಅಥವಾ ತಡವಾಗಿ ಮಳೆ ಬಿದ್ದ ಸಂದರ್ಭದಲ್ಲಿ ದೀರ್ಘಾವಧಿ ಬೆಳೆಗಳಿಗೆ ಪರ್ಯಾಯವಾಗಿ ಅಲ್ಪಾವಧಿ ಬೆಳೆಗಳನ್ನು ಬೆಳೆಯುವುದರಿಂದ ಲಭ್ಯವಿರುವ ತೇವಾಂಶದಿಂದ ಉತ್ತಮ ಇಳುವರಿ ಪಡೆಯಬಹುದು ಎಂದು ಇಲ್ಲಿನ ಸಹಾಯಕ ಕೃಷಿ ನಿರ್ದೇಶಕ ಡಾ.ಯು.ಎಚ್. ಭಾನುಪ್ರಕಾಶ್ ಪರ್ಯಾಯ ಬೆಳೆ ಪದ್ಧತಿ ಬಗ್ಗೆ ವಿವರಿಸಿದರು. ಇಲ್ಲಿನ ಕೃಷಿ ಇಲಾಖೆಯ ವತಿಯಿಂದ ತಾಲೂಕಿನ ಹಳ್ಳಿ ಮೈಸೂರು ಹೋಬಳಿಯ ನಿಡುವಣಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಹೋಬಳಿ ಮಟ್ಟದ ಭೂಚೇತನ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭೂಚೇತನ ಯೋಜನೆಯ ಎರಡನೇ ಹಂತದ ಉದ್ದೇಶಗಳನ್ನು ತಿಳಿಸುತ್ತಾ, ರಾಗಿ ಬೆಳೆಯಲ್ಲಿ ಎಂಎಲ್-365, ಕೆಎಂಆರ್-202, ಎಂಆರ್-1 ರಂತಹ ಉತ್ತಮವಾದ ಪರ್ಯಾಯಾಯ ತಳಿಗಳಿದ್ದು ಇವುಗಳು ಮಳೆ ಕೊರತೆ ಸಂದರ್ಭದಲ್ಲಿ ಉತ್ತಮ ಇಳುವರಿ ಕೊಡಬಲ್ಲವೆಂದು ತಿಳಿಸಿದರು.
ಬೆಳೆ ವಿಮೆ: ಇದೇ ಸಂದರ್ಭದಲ್ಲಿ ಮಾರ್ಪಡಿಸಿದ ಬೆಳೆ ವಿಮಾ ಯೋಜನೆಯನ್ನು ತಾಲೂಕಿನಲ್ಲಿ ಅನುಷ್ಠಾನ ಮಾಡಲಾಗುತ್ತಿದ್ದು, ಹೋಬಳಿ ಮಟ್ಟದಲ್ಲಿ ನೀರಾವರಿ ಬತ್ತ ಮಳೆಯಾಶ್ರಿತ ಮತ್ತು ನೀರಾವರಿ ರಾಗಿ, ಜೋಳ ಮತ್ತು ಮಳೆಯಾಶ್ರಿತ ಎಳ್ಳು, ಹರಳು ಮತ್ತು ಹುರುಳಿ ಬೆಳೆಗಳನ್ನು ಆಯ್ಕೆ ಮಾಡಲಾಗಿದೆ. ಬ್ಯಾಂಕ್‌ಗಳಲ್ಲಿ ವಿಮಾ ಕಂತನ್ನು ನಿಗಧಿತ ನಮೂನೆ ಮತ್ತು ದಾಖಲಾತಿಗಳೊಂದಿಗೆ ನೊಂದಾಯಿಸಬಹುದೆಂದು ತಿಳಿಸಿದರು.   ಅಲ್ಲದೇ ಕೃಷಿ ಇಲಾಖೆಯಲ್ಲಿ ರು. 5,000 ಗಿಂತಲೂ ಮೇಲ್ಪಟ್ಟ ಸಹಾಯಧನ ಪಡೆದ ರೈತರ ಬ್ಯಾಂಕ್ ಖಾತೆಗೆ ನೇರ ವರ್ಗಾವಣೆ ಮಾಡಿ ನಂತರ ಸಂಸ್ಥೆಗೆ ಪಾವತಿಸಲಾಗುವುದೆಂದು ತಿಳಿಸಿದರು. ಕೃಷಿ ಅಧಿಕಾರಿ ಸೋಮಶೇಖರ್, ಭೂಚೇತನ ಯೋಜನೆ ಬಗ್ಗೆ ವಿವರಿಸಿದರು.  ಇದೇ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಮಲ್ಲಿಕಾರ್ಜುನ, ಪಾಲಾಕ್ಷ  ಮಾತನಾಡಿದರು. ನಿಡುವಣಿ ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಉಪಾಧ್ಯಕ್ಷರು ಉಪಸ್ಥಿತರಿದ್ದರು. ಅಶೋಕ ಸ್ವಾಗತಿಸಿ, ಕೆಂಪರಾಜು ವಂದಿಸಿದರು. ಹಾಗೂ ಇಲಾಖೆ ಅನುವುಗಾರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.