ಹಾಸನ

ದೇಗುಲ ಕಾಲುದಾರಿ ಒತ್ತುವರಿ ತೆರವಿಗೆ ಆಗ್ರಹ

Published On :

ಹಾಸನ: ದೇವಸ್ಥಾನದ ಕಾಲುದಾರಿ ಒತ್ತುವರಿ ಮಾಡಲಾಗಿದ್ದು, 15 ದಿನಗಳಲ್ಲಿ ತೆರವುಗೊಳಿಸದಿದ್ದರೆ ಉಗ್ರ ಪ್ರತಿಭಟನೆ ಮಾಡುವುದಾಗಿ ಸತ್ಯಮಂಗಲ ಗ್ರಾಪಂಗೆ ಸೇರಿದ ಗೌರಿಕೊಪ್ಪ ಗ್ರಾಮಸ್ಥರು ಎಚ್ಚರಿಸಿದ್ದಾರೆ.  ನಗರ ಹೊರವಲಯದ ಗೌರಿಕೊಪ್ಪಲಿನಲ್ಲಿ ಕಳೆದ 5 ವರ್ಷಗಳ ಹಿಂದೆ ಶ್ರೀದೇವಿ ಆದಿಶಕ್ತಿ ಕಲಾವಿದ ಸಂಘದವರು ಶ್ರೀ ಚಾಮುಂಡೇಶ್ವರಿ ದೇವಸ್ಥಾನ ನಿರ್ಮಿಸಿದ್ದರು.
ಭಕ್ತಾಧಿಗಳು ಈ ದೇವಾಲಯಕ್ಕೆ ಬರಲು ಒಂದೇ ದಾರಿ ಇತ್ತು. ಅದು ಖರಾಬು  ಜಾಗವಾಗಿದೆ. ಈ ರಸ್ತೆ ಪಕ್ಕದ ಭೂಮಿ ಮಾಲೀಕರು ಆಕ್ರಮಿಸಿ ಈಗ ಆ ಸ್ಥಳದಲ್ಲಿ ಚರಂಡಿ ನೀರು ಹೋಗುವಂತೆ ಮಾಡುವ ಮೂಲಕ ಭಕ್ತರು ಓಡಾಡುವ ದಾರಿಗೆ ಅಡ್ಡಿಪಡಿಸಿದ್ದಾರೆ. ಈಗ ಭಕ್ತರು ಬೇಲಿ ಪಕ್ಕದಲ್ಲಿ ನಡೆದುಕೊಂಡು ಬಂದು ದೇವರ ದರ್ಶನ ಮಾಡುತ್ತಿದ್ದಾರೆ.
ಅಳತೆ ಮಾಡಿಸಿ: ಜಾಗದ ವಿಚಾರವಾಗಿ ಈ ಹಿಂದೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರೂ ಇದುವರೆಗೂ ಜಮೀನಿನ ಅಳತೆ ಮಾಡಿಸಲು ಮುಂದಾಗಿರುವುದಿಲ್ಲ ಎಂದು ದೇವಾಸ್ಥಾನದ ಅಧ್ಯಕ್ಷ ಸಿ. ಸೋಮಣ್ಣ, ರಾಮು, ಯೋಗೀಶ್, ವೆಂಕಟೇಶ್, ರಂಗಸ್ವಾಮಿ ಇತರರು ಆರೋಪಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.