ಭಾವೈಕ್ಯತೆ ಬೆಸೆಯುವ ಏಕೈಕ ಭಾಷೆ ಸಂಗೀತ
ಹಾಸನ: ಆನಂದಕಂದರ ಕವಿತೆಯ ಹಾಡುಗಳು ಬಹಳ ವಿಶಿಷ್ಟವಾಗಿದ್ದು, ಕೇಳುಗರ ಹೃದಯದಲ್ಲಿ ಶಾಶ್ವತವಾಗಿ ಉಳಿಯುತ್ತವೆ ಹಾಗೂ ಹೊಸತನದಿಂದ ಕೂಡಿರುತ್ತದೆ ಎಂದು ಸಾಹಿತಿ ಸತೀಶ ಕುಲಕರ್ಣಿ ತಿಳಿಸಿದರು.
ಡಾ.ಬೆಟಗೇರಿ ಕೃಷ್ಣಶರ್ಮ ಟ್ರಸ್ಟ್, ಸ್ವರಸುರಭಿ ಟ್ರಸ್ಟ್, ಬೆಂಗಳೂರು ಹಾಗೂ ಅನನ್ಯ ಸಂಸ್ಥೆ, ಹಾಸನ ಇವರ ಸಹಯೋಗದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಬನ್ನಿ ನಮ್ಮ ಹಾಡಿಗೆ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಡಾ.ಬೆಟಗೇರಿ ಕೃಷ್ಣಶರ್ಮ ಅವರು ಬರೆದ ಅನೇಕ ಹಾಡುಗಳು ಹಳ್ಳಿಗರ ಜನಜೀವನಕ್ಕೆ ಹತ್ತಿರವಾದಂತಹವು. ನಾಡು-ನುಡಿಯ ಬಗ್ಗೆ ಅಪಾರವಾದಂತಹ ಕಾಳಜಿ ಹೊಂದಿದ್ದಂತಹ ಇವರು ಸಾಹಿತ್ಯ ಕ್ಷೇತ್ರದ ಮೇರು ಪ್ರತಿಭೆ ಎಂದರು.
ಏಕೈಕ ಭಾಷೆ ಸಂಗೀತ: ಗಾಯಕ ಹಾಗೂ ರಾಗ ಸಂಯೋಜಕ ಮೃತ್ಯುಂಜಯ ದೊಡ್ಡವಾಡವಾಡ ಮಾತನಾಡಿ, ಸಾಹಿತ್ಯ ಮತ್ತು ಸಂಗೀತ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ಸಾಹಿತ್ಯವನ್ನು ಬಿಟ್ಟು ಸಂಗೀತ, ಸಂಗೀತವನ್ನು ಬಿಟ್ಟು ಸಾಹಿತ್ಯ ಎಂದಿಗೂ ಇರಲಾರದು. ಹೃದಯಗಳನ್ನು ಬೆಸೆಯುವ, ಮನಸ್ಸುಗಳನ್ನು ಒಗ್ಗೂಡಿಸುವ, ಭಾವೈಕ್ಯತೆಯನ್ನು ಬೆಸೆಯುವ ವಿಶ್ವದ ಏಕೈಕ ಭಾಷೆ ಸಂಗೀತ, ಇಂತಹ ಸಂಗೀತವನ್ನು ಕಲಿಯುವ, ಕೇಳುವ ಮನಸ್ಸುಗಳು ಶಾಂತವಾಗಿವೆ ಎಂದು ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಜನಾರ್ದನ್, ಕರ್ನಾಟಕ ವೀರ ಕನ್ನಡಿಗರ ಸೇನೆಯ ರಾಜ್ಯಾಧ್ಯಕ್ಷ ಕೆ.ಟಿ.ರವೀಂದ್ರಕುಮಾರ್, ಸಮಾಜ ಸೇವಕ ಡಾ.ವೈ.ಎಸ್.ವೀರಭದ್ರಪ್ಪ, ಡಾ.ವಿ.ಸುನೀತಾ, ಶ್ರೀಧರ್ ಅಯ್ಯರ್ ಮಾತನಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

