ಪ್ರತ್ಯೇಕ ಪ್ರಕರಣ: ನಾಲ್ವರು ನಾಪತ್ತೆ
ಹಾಸನ; ಜಿಲ್ಲೆಯಲ್ಲಿ ನೆಡೆದ ನಾಲ್ಕು ಪ್ರತ್ಯೇಕ ಘಟನೆಯಲ್ಲಿ ನಾಲ್ವರು ನಾಪತ್ತೆಯಾಗಿದ್ದಾರೆ. ಮಾನಸಿಕ ಅಸ್ವಸ್ಥೆಯಾದ ನಗರದ ಉಜ್ವಲ ಪುನರ್ವಸತಿ ಕೇಂದ್ರದಲ್ಲಿದ್ದ ಆಶಾ (20) ಎಂಬವರು ಆಸ್ಪತ್ರೆಗೆ ಕರೆದುಕೊಂಡು ಹೋಗಲೆಂದು ಸಂಸ್ಥೆಯ ಬಾಗಿಲು ತೆರೆದಾಗ ಓಡಿ ಹೋಗಿ ನಾಪತ್ತೆಯಾಗಿದ್ದಾಳೆ.
ಕೋಲು ಮುಖ, ಎಣ್ಣೆಗೆಂಪು ಮೈಬಣ್ಣ, ಸಾಧಾರಣ ಮೈಕಟ್ಟು, ಕನ್ನಡ ಮಾತನಾಡುತ್ತಾರೆ. ಹೋಗುವಾಗ ಕಪ್ಪು ಮಿಶ್ರಿತ ಸಿಮೆಂಟ್ ಬಣ್ಣದ ಟಾಪ್ ಮತ್ತು ನೇರಳೆ ಬಣ್ಣದ ಪ್ಯಾಂಟ್ ಧರಿಸಿರದ್ದರು. ಈಕೆಯ ಬಗ್ಗೆ ಮಾಹಿತಿ ದೊರೆತಲ್ಲಿ ಹಾಸನ ಬಡಾವಣೆ ಪೊಲೀಸ್ ಠಾಣೆ ಆರಕ್ಷಕ ಉಪ ನಿರೀಕ್ಷಕರು ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂ. 08172-268845, ಸಂಪರ್ಕಿಸಲು ಕೋರಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಹಾಸನದ ರಾಜೀವ್ ಕಾಲೇಜಿನಲ್ಲಿ ಮೊದಲ ವರ್ಷದ ಡಿಪ್ಲೊಮೋ ವ್ಯಾಸಂಗ ಮಾಡತ್ತಿದ್ದ ಭರತ್ (16) ಎಂಬಾತ ಎಂದಿನಂತೆ ಮನೆಯಿಂದ ಕಾಲೇಜಿಗೆ ಹೋಗುವುದಾಗಿ ಹೇಳಿ ಹೋಗಿ ಈವರೆಗೆ ಮನೆಗೆ ಬಾರದೆ ನಾಪತ್ತೆಯಾಗಿದ್ದಾನೆ. ಈ ಸಂಬಂಧ ಈತನ ತಂದೆ ರಮೇಶ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈತ 5.10 ಅಡಿ ಎತ್ತರ, ಗುಂಡು ಮುಖ, ಎಣ್ಣೆಗೆಂಪು ಮೈಬಣ್ಣ, ಸಾಧಾರಣ ಮೈಕಟ್ಟು, ಕನ್ನಡ ಮಾತನಾಡುತ್ತಾನೆ. ಸೊಂಟದಲ್ಲಿ ಒಂದು ಕಪ್ಪು ಮಚ್ಚೆ ಇದೆ. ಈತನ ಬಗ್ಗೆ ಮಾಹಿತಿ ದೊರೆತಲ್ಲಿ ಹಾಸನ ಬಡಾವಣೆ ಪೊಲೀಸ್ ಠಾಣೆಯ ಆರಕ್ಷಕ ಉಪ ನಿರೀಕ್ಷಕರು, ಅಥವಾ ಹಾಸನ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂ 08172-268845 ಇಲ್ಲಿಗೆ ಮಾಹಿತಿ ನೀಡಲು ಕೋರಿದೆ. ಮತ್ತೊಂದು ಪ್ರಕರಣದಲ್ಲಿ ಸತ್ಯನಾರಾಯಣ (45) ಎಂಬವರು ಮನೆಯಿಂದ ಹನುಮಂತಪುರ ಫ್ಯಾಕ್ಟರಿಗೆ ಹೋಗುವುದಾಗಿ ತಿಳಿಸಿದ್ದು, ನಾಪತ್ತೆಯಾಗರಿದ್ದಾರೆ. 5.5 ಅಡಿ ಎತ್ತರ ಎಣ್ಣೆಗೆಂಪು ಬಣ್ಣ, ಕೋಲು ಮುಖ, ಎಡಕಣ್ಣು ಮಾಲು ಕಣ್ಣು, ಇವರಿಗೆ ಕನ್ನಡ, ಇಂಗ್ಲೀಷ್, ತಮಿಳು ಮಾತನಾಡಲು ಬರುತ್ತದೆ. ಮನೆಯಿಂದ ಹೋಗುವಾಗ ಕಪ್ಪು ಪ್ಯಾಂಟ್ ಮತ್ತು ಶರ್ಟ್ ಧರಿಸಿದ್ದರು. ಈ ಬಗ್ಗೆ ಮಾಹಿತಿ ದೊರೆತಲ್ಲಿ ಗೊರೂರು ಆರಕ್ಷಕ ಉಪ ನಿರೀಕ್ಷಕರಿಗೆ ತಿಳಿಸಬೇಕೆಂದು ಕೋರಿದೆ. ಹಾಸನದ ದೇವೇಗೌಡ ನಗರದಲ್ಲಿ ನಡೆದ ಪ್ರಕರಣದಲ್ಲಿ, ಉಮೇಶ್ ಎಂಬುವರ ಪುತ್ರಿ ಶೋಭಾ (16) ಶ್ರೀಮತಿ ಎಲ್.ವಿ. ಪಾಲಿಟೆಕ್ನಿಕ್ನಲ್ಲಿ 1 ನೇ ವರ್ಷದ ಡಿಪ್ಲೋಮೊ ವ್ಯಾಸಂಗವನ್ನು ಮಾಡುತ್ತಿದ್ದು, ಜೂ. 13ರಂದು ಮದ್ಯಾಹ್ನ 11.30 ರಲ್ಲಿ ಶೋಭಾ ಕಾಲೇಜಿಗೆ ಹೋಗಿ ಅಂಕಪಟ್ಟಿ ತರುತ್ತೇನೆಂದು ಮನೆಯಲ್ಲಿ ತಿಳಿಸಿ ಹೋದವಳು ನಾಪತ್ತೆಯಾಗಿದ್ದಾರೆ. ಈಕೆಯ ಮಾಹಿತಿ ದೊರೆತಲ್ಲಿ ಹಾಸನ ಎಸ್ಪಿಗೆ ಅಥವಾ ಹಾಸನ ನಗರ ಠಾಣಾ ಆರಕ್ಷಕ ಉಪ ನಿರೀಕ್ಷಕರಿಗೆ ಮಾಹಿತಿ ನೀಡಲು ಕೋರಿದೆ. ದೂರವಾಣಿ 08172-268410 ಲ್ಲಿಗೆ ಸಂಪರ್ಕಿಸಿ.
ವಾರಸುದಾರ ನಾಪತ್ತೆ: ಹಾಸನ ಅರಸೀಕೆರೆ ಗೋಪಾಲಸ್ವಾಮಿ ದೇವಸ್ಥಾನದ ಬಳಿ ಸುಮಾರು 3 ವರ್ಷದ ಹೆಣ್ಣು ಮಗು ಸಿಕ್ಕಿದ್ದು 2.5 ಅಡಿ ಎತ್ತರ, 11 ಕೆ.ಜಿ. ತೂಕ, ಕಪ್ಪು ಬಣ್ಣ ಹೊಂದಿದೆ. ವಾರಸುದಾರರಿದ್ದಲ್ಲಿ ಅಧ್ಯಕ್ಷರು, ಮಕ್ಕಳ ಕಲ್ಯಾಣ ಸಮಿತಿ, ಹಾಸನ, ಮೊ.9916667726 ಇವರನ್ನು ಸಂಪರ್ಕಿಸಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

