ಹಾಸನ

ಹಸಿರು ನಾಶವಾದಲ್ಲಿ ಮನುಕುಲದ ನಾಶ

Published On :

ಹೊಳೆನರಸೀಪುರ: ಅರಣ್ಯ ಸಂಪತ್ತನ್ನು ನಾವು ಇಂದು ಸಂರಕ್ಷಿಸಿಕೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಇದಕ್ಕೆ ನಾವೇ  ಬೆಲೆ ತೆರೆಬೇಕಾದ ಪರಿಸ್ಥಿತಿ ಬರಲಿದೆ ಎಂದು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲಪ್ರೊ.ಎಂ.ಬಿ. ಇರ್ಷಾದ್ ಎಚ್ಚರಿಸಿದರು.
 ಪಟ್ಟಣದಲ್ಲಿನ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯದಲ್ಲಿನ ಅಂತಿಮ ವರ್ಷದ ಎಂ.ಕಾಂ ಮತ್ತು ಕಾನೂನು ವಿದ್ಯಾರ್ಥಿಗಳು ಹಾಸ್ಟೆಲ್ ಆವರಣದಲ್ಲಿ ವಿಶ್ವ ಪರಿಸರದ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಮದಲ್ಲಿ ಸಸಿ  ನೆಟ್ಟು ಮಾತನಾಡಿದ ಅವರು, ಹಸಿರು ನಾಶವಾದಲ್ಲಿ ಮನುಕುಲದ ನಾಶವಾದಂತೆ ಎಂಬ ಜ್ಞಾನಿಗಳ, ಹಿರಿಯರ ಮಾತುಗಳು ಎಂದಿಗೂ ಸುಳ್ಳಾಗಲಾರದು. ಆದ್ದರಿಂದ  ಮುಂದಿನ ತಲೆಮಾರಿಗಾಗಿ ನಾವು  ಒಂದಿಷ್ಟು ಹಸಿರನ್ನು ಉಳಿಸೋಣ ಎಂದರು.
ಹಸಿರು ಪರಿಸರ:  ಹುಟ್ಟಿನ ಪ್ರತಿಯೊಬ್ಬ ಮನುಷ್ಯನೂ ಒಂದೊಂದು ಗಿಡಗಳನ್ನು ನೆಟ್ಟಲ್ಲಿ ಈ ಭೂಮಿಯ ಮೇಲೆ ಹಸಿರಿನ ಸಂಪತ್ತು ಹೆಚ್ಚುವುದರಲ್ಲಿ ಸಂಶಯವಿಲ್ಲ. ಇದು ಯಾವುದೇ ಭಾಷಣಗಳಿಂದ ಅಥವಾ ಆದರ್ಶಗಳಿಂದ ಸಾಧ್ಯವಿಲ್ಲ. ಹಸಿರನ್ನು ಉಳಿಸುವ ಮನೋಧರ್ಮವು ನಮ್ಮೊಳಗೆ ಮೂಡಬೇಕು. ಆದ್ದರಿಂದ ಇಂದಿನಿಂದಲೇ ನಾವು ನಮ್ಮ ಸುತ್ತಲಿನ ಪರಿಸರವನ್ನು ಹಸಿರಾಗಿರಿಸಲು ನಮ್ಮ ಕೈಲಾದ ಶ್ರಮವನ್ನು ವಹಿಸುತ್ತೇವೆ ಎಂಬ ಸಂಕಲ್ಪ ಮಾಡಬೇಕು ಎಂದರು.  ವಿದ್ಯಾರ್ಥಿ ನಿಲಯದ ಮೇಲ್ವಿಚಾರಕರಾದ ಕೃಷ್ಣಕುಮಾರ್ ಮಾತನಾಡಿ, ಇಂದಿನ ಕೈಗಾರಿಕಾ ಯುಗದಲ್ಲಿ, ಮರಗಳ ಸರ್ವನಾಶವಾಗುತ್ತಿದೆ ಎಂಬ ಆತಂಕವನ್ನು ವ್ಯಕ್ತಪಡಿಸಿದರಲ್ಲದೇ, ಮರಗಳ ಸರ್ವನಾಶದಿಂದ ಮುಂದಿನ ದಿನಗಳಲ್ಲಿ ನಮ್ಮ ಬದುಕು ಅಸಹನೀಯವಾಗಲಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.