ಪಠ್ಯದ ಜೊತೆ ಕ್ರೀಡೆ ಸಾಮಾನ್ಯ ಜ್ಞಾನ ಅಗತ್ಯ
ಬೇಲೂರು: ಐಎಎಸ್ ಪಾಸ್ ಮಾಡಲು ಪಠ್ಯದೊಂದಿಗೆ ಕ್ರೀಡೆ ತೀರಾ ಅಗತ್ಯ ಎಂದು ಇತ್ತೀಚೆಗೆ ಐಎಎಸ್ನಲ್ಲಿ ತೇರ್ಗಡೆಯಾಗಿರುವ ಬೇಲೂರಿನ ಕೆಎಂ.ಶ್ರೇಯಸ್ ಅಭಿಪ್ರಾಯಪಟ್ಟರು.
ಸುದ್ದಿಗಾರರೊಂದಿಗೆ ಮಾತನಾಡಿ, ಇಂಟರ್ ವ್ಯೂನಲ್ಲಿ ಕ್ರೀಡೆಯ ಬಗ್ಗೆಯೆ ಪ್ರಶ್ನೆ ಕೇಳಲು ಒಬ್ಬರು ಇದ್ದರು. ದೇಶ, ವಿದೇಶ ಸಮಾಚಾರ, ಇತಿಹಾಸ, ರಾಜಕೀಯ, ಸಾಹಿತ್ಯ, ಸಾಹಿತಿಗಳ ಪರಿಚಯದೊಂದಿಗೆ ಸೋಷಿಯಲ್ ವರ್ಕ್ ಬಗ್ಗೆ ಆಸಕ್ತಿ ಇವುಗಳಿರಬೇಕು ಎಂದು ಅವರು ಹೇಳಿದರು.
ಪಠ್ಯದೊಂದಿಗೆ ಇನ್ನಿತರ ವಿಷಯಗಳ ಅರಿವು ಇದಿಲ್ಲದಿದ್ದರೆ ನಾನು ಖಂಡಿತಾ ಐಎಎಸ್ ಪಾಸು ಮಾಡಲು ಆಗುತ್ತಿರಲಿಲ್ಲ. ಕಾಲೇಜು ಹಂತದಲ್ಲಿಯೂ ಕ್ರಿಕೆಟ್, ವಾಲಿಬಾಲ್, ಫುಟ್ಬಾಲ್, ಬ್ಯಾಸ್ಕೆಟ್ಬಾಲ್ ಇತ್ಯಾದಿ ಆಟಗಳನ್ನ ಆಡುತ್ತಿದ್ದೆ, ಈಗ ವಾರದಿಂದ ಒಂದು ದಿನವೂ ಆಟವಾಡಲು ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಏನೆಲ್ಲಾ ಸಾಧನೆ ಮಾಡುವಾಗ 20 ರಿಂದ 29 ರವರಗಿನ ವಯಸ್ಸಿನ ಅಂತರದಲ್ಲಿರಬೇಕು. ಪ್ರಯತ್ನ ಮುಂದುವರಿಸಬೇಕು. ಯಾವುದನ್ನೂ ಆಗುವುದಿಲ್ಲ ಎನ್ನಬಾರದು. ವೈಡ್ ರೀಡಿಂಗ್ ಇರಬೇಕು. ಐಎಎಸ್ ಆಫೀಸರ್ಗಿಂತ ಆತನಲ್ಲಿ ವ್ಯಕ್ತಿತ್ವ ಇರಬೇಕು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

