ಹಾಸನ

ಪರಿಹಾರ ಸಾಂತ್ವನಕಷ್ಟೇ ಸೀಮಿತ

Published On :

ಕ.ಪ್ರ.ವಾರ್ತೆ ್ಣ ಹಾಸನ ್ಣ ಜೂ 26
ನಗರದ ಖಾಸಗಿ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯದಿಂದ 2 ತಿಂಗಳ ಗಂಡು ಮಗುವನ್ನು ಕಳೆದುಕೊಂಡ ಕುಟುಂಬದವರಿಗೆ ಗುರುವಾರ ಮಧ್ಯರಾತ್ರಿ ಬಂದು ಆರೋಗ್ಯ ಸಚಿವರು ಸಾಂತ್ವನ ಹೇಳಿದರು. ಆದರೆ ಅಂಗವಿಕಲ ಕುಟುಂಬ ಬದುಕಿನ ಬಂಡಿ ನಡೆಸುವುದು ಹೇಗೆ ಎಂಬ ಬಗ್ಗೆ ಚರ್ಚಿಸಿ, ಪರಿಹಾರ ನೀಡುವ ಬಗ್ಗೆ ಚಕಾರವೆತ್ತಲಿಲ್ಲ.
ಇದರಿಂದ ತೀವ್ರ ಬೇಸರಗೊಂಡಿರುವ ಮಗು ಕಳೆದುಕೊಂಡ ಅರಸೀಕೆರೆ ತಾಲೂಕಿನ ಗಂಡಸಿ ಗ್ರಾಮದ ಯೋಗವ್ಮು ಮತ್ತು ಜಗದೀಶ್ ಮತ್ತವರ ಕುಟುಂಬ ಜೂ. 27 ರಿಂದ ಜಿಲ್ಲಾಧಿಕಾರಿ ಕಚೇರಿ ಬಳಿ ಧರಣಿ ನಡೆಸಲು ಮುಂದಾಗಿದೆ.
ಗುರುವಾರ ಮಧ್ಯರಾತ್ರಿ 11.18 ಕ್ಕೆ ಹಾಸನ ನಗರಕ್ಕೆ ಬಂದ ಆರೋಗ್ಯ ಸಚಿವ ಯು.ಟಿ. ಖಾದರ್ ಅವರು,  ಸಂಬಂಧಿಕರ ಮನೆಯಲ್ಲಿ ಇದ್ದ ಯೋಗವ್ಮು ಮತ್ತು ಕುಟುಂಬದವರನ್ನು ಭೇಟಿ ಮಾಡಿ, ಆಗಿದ್ದು ಆಗಿ ಹೋಯಿತು. ಧೈರ್ಯ ತೆಗೆದುಕೊಳ್ಳಿ. ತಪ್ಪು ಮಾಡಿದವರ ವಿರುದ್ಧ ಕ್ರಮ ಜರುಗಿಸುವುದಾಗಿ ಹೇಳಿದರು. ಆದರೆ ಸರ್ಕಾರದಿಂದ ಪರಿಹಾರ ನೀಡುವ ಭರವಸೆಯನ್ನು ನೀಡಲಿಲ್ಲ. ಇದರಿಂದ ಈ ಬಡ ಕುಟುಂಬ ಕಂಗಾಲಾಗಿದೆ.
ಯೋಗವ್ಮು ತಮ್ಮ ಮಗುವಿನ ಉಸಿರಾಟದ ತೊಂದರೆಗೆ ತುತ್ತಾಗಿದ್ದರಿಂದ ಮಗುವನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ವೈದ್ಯರ ನಿರ್ಲಕ್ಷ್ಯದಿಂದ ಜೂ.23ರಂದು ಮಗು ಮೃತಪಟ್ಟಿತು. ನಂತರ ಮಗುವನ್ನು ಜಿಲ್ಲಾಸ್ಪತ್ರೆಯ ಮರಣೋತ್ತರ ಪರೀಕ್ಷೆಗೆ ತರಲಾಗಿತ್ತು. ಆಗ ಹೆಗ್ಗಣಗಳು ಮಗುವಿನ ಬಲಗೆನ್ನೆ ಮತ್ತು ಮೂಗನ್ನು ತಿಂದು ಹಾಕಿದ್ದವು. ಇದು ವಿಧಾನಸಭೆಯಲ್ಲೂ ಚರ್ಚೆಯಾಗಿತ್ತು. ಇದಾದ ನಂತರ ಲೋಕಾಯುಕ್ತ ನ್ಯಾಯಮೂರ್ತಿ ಭಾಸ್ಕರ್ ರಾವ್, ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ ತನಿಖೆಗೆ ಆದೇಶ ಮಾಡಿದರು. ಆದರೆ ಈ ಕುಟುಂಬಕ್ಕೆ ಪರಿಹಾರವನ್ನು ನೀಡಿಲ್ಲ. ಈ ಬಗ್ಗೆ ಸಚಿವರನ್ನು ಪರಿಹಾರ ನೀಡುವ ಅಧಿಕಾರ ನಮ್ಮ ವ್ಯಾಪ್ತಿಗೆ ಬರೋದಿಲ್ಲ. ನಮ್ಮದೇನಿದ್ದರು ತಪ್ಪಿತಸ್ಥರ ವಿರುದ್ಧ ತನಿಖೆ ಕೈಗೊಂಡು ಕ್ರಮಕೈಗೊಳ್ಳುವುದು, ಔಷಧಿ ವಿತರಣೆಯಲ್ಲಿ ಲೋಪವಾಗಿದ್ದರೆ ಈ ವಿರುದ್ಧ ಕ್ರಮ ಕೈಗೊಳ್ಳಬಹುದು. ಆದರೆ ಪರಿಹಾರದ ವ್ಯಾಪ್ತಿ ನನಗೆ ಬರೋದಿಲ್ಲ ಎಂದಿದ್ದಾರೆ ಸಚಿವರು.
ಸರ್ಕಾರ ಪರಿಹಾರ ನೀಡದ ಕಾರಣ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಅದ್ದರಿಂದ ಸರ್ಕಾರ ಕೂಡಲೇ ಪರಿಹಾರವನ್ನು ನೀಡದಿದ್ದರೆ ಈ ವಿರುದ್ಧ ಪ್ರತಿಭಟಿಸುವುದಾಗಿ ಮಗುವಿನ ಕುಟುಂಬದವರು ಎಚ್ಚರಿಕೆ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.