ಶಿಕ್ಷಣದ ಜೊತೆ ಕೃಷಿಯನ್ನೂ ಕಲಿಸಿ
ಸಕಲೇಶಪುರ: ಮಕ್ಕಳಿಗೆ ಶಾಲಾ ಶಿಕ್ಷಣದ ಜತೆಗೆ ಕೃಷಿಯನ್ನೂ ಕಲಿಸಬೇಕು ಎಂದು ಪ್ರಗತಿಪರ ರೈತ ಲೋಕೇಶ್ ಹೇಳಿದರು.
ಇತ್ತೀಚೆಗೆ ಶುಕ್ರವಾರಸಂತೆಯ ವಿನಾಯಕ ಸಮುದಾಯ ಭವನದಲ್ಲಿ ಕೃಷಿ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಭೂಚೇತನ ಹೋಬಳಿ ಮಟ್ಟದ ರೈತರ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿ ದೆಸೆಯಿಂದಲೇ ಕೃಷಿ ಬಗ್ಗೆ ಆಸಕ್ತಿ ಮೂಡಿಸುವಂತಹ ಶಿಕ್ಷಣ ಇಂದಿನ ಅಗತ್ಯವಿದೆ. ಹೆಚ್ಚುತ್ತಿರುವ ಜನಸಂಖ್ಯೆಗೆ ಆಹಾರದಾನ್ಯಗಳ ಉತ್ಪಾದನೆಯಾಗಬೇಕಾದರೆ ಹೆಚ್ಚು ಆಧುನಿಕ ಕೃಷಿಯಲ್ಲಿ ತೊಡಗಿಕೊಳ್ಳಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯ್ತಿ ಸದಸ್ಯೆ ಮಂಜಮ್ಮ ತಿಪ್ಪೇಸ್ವಾಮಿ ಮಾತನಾಡಿ, ರೈತರನ್ನು ಒಂದೆಡೆ ಸೇರಿಸಿ ತರಬೇತಿ ಮಾಡುತ್ತಿರುವು ಉತ್ತಮವಾದ ಬೆಳವಣಿಗೆ ಮತ್ತು ಕೃಷಿಯಲ್ಲಿ ಅನುಭವ ಇರುವ ರೈತರು ಕೂಡ ಆಧುನಿಕ ತಾಂತ್ರಿಕತೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಬೇಸಾಯದ ಖರ್ಚು ಕಡಿಮೆ ಮಾಡಿ ಅಧಿಕ ಇಳುವರಿ ಪಡೆಯಲು ರೈತರು ಪ್ರಯತ್ನಿಸಬೇಕು ಎಂದರು.
ಪ್ರಾಸ್ತಾವಿಕ ನುಡಿ ನುಡಿದ ಸಹಾಯಕ ಕೃಷಿ ನಿರ್ದೇಶಕರಾದ ಟಿ.ಜಿ. ಚೆಲುವರಂಗಪ್ಪ ಭೂ ಚೇತನ ಯೋಜನೆಯ ಉದ್ದೇಶ ಕುರಿತು ಸಭೆಗೆ ಮಾಹಿತಿ ನೀಡಿದರು.
ಕೀಟನಾಶಕ ಹೆಚ್ಚು ಬಳಸಬೇಡಿ: ಕೃಷಿ ಕಾಲೇಜಿನ ಕೀಟ ತಜ್ಞ ಡಾ. ಮುನಿಸ್ವಾಮಿಗೌಡ ಮಾತನಾಡಿ, ಕೀಟನಾಶಕಗಳ ಅತಿಯಾದ ಬಳಕೆಯನ್ನು ಕಡಿಮೆ ಮಾಡಿಕೊಂಡು ಅಗತ್ಯವಾದ ಸಂದರ್ಭಗಳಲ್ಲಿ ಶಿಫಾರಸು ಮಾಡಿರುವ ಕೀಟನಾಶಕಗಳನ್ನು ಬಳಸಲು ತಿಳಿಸಿದರು.
ಕಾರ್ಯಕ್ರಮದಲ್ಲಿ ಕುರಬತ್ತೂರು ಗ್ರಾಪಂ ಅಧ್ಯಕ್ಷರಾದ ರುಕ್ಮಿಣಿ, ವಳಲಹಳ್ಳಿ ಗ್ರಾಪಂ ಅಧ್ಯಕ್ಷರಾದ ಭಾಗ್ಯಲಕ್ಷ್ಮಿ, ತಾ.ಪಂ. ಸದಸ್ಯರಾದ ಮಂಜುನಾಥ್, ತಾಪಂ ಮಾಜಿ ಅಧ್ಯಕ್ಷರಾದ ರಾಮೆಗೌಡ ರವರು, ಗ್ರಾಪಂ ಸದಸ್ಯರಾದ ಪರಮೇಶ್, ಪ್ರಗತಿ ಪರ ರೈತರಾದ ಪುರುಷೋತ್ತಮ, ಕೃಷಿ ಅಧಿಕಾರಿ ಮಹಮ್ಮದ್ ಸಿದ್ದಿಕ್, ಭೂಮಿ ಸಂಸ್ಥೆಯ ಪ್ರತಿನಿಧಿ ಅಫ್ಸರ್ ಭಾಷ ಮತ್ತಿತರರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

