ಹಾಸನ

ಕೆರೆಗಳಿಗೆ ಯಗಚಿ ನೀರು ಹರಿಸಲು ಒತ್ತಾಯ

Published On :

ಜಾವಗಲ್:  ಹೋಬಳಿಯ ಗೊಲ್ಲರಹಳ್ಳಿ ಊರಮುಂದಿನ ಕೆರೆ, ಕರಗುಂದ ಉಂಡಿಗನಾಳು ಗ್ರಾಮದ ಕೆರೆಗಳಿಗೆ ಯಗಚಿ ನೀರನ್ನು ತುಂಬಿಸುವಂತೆ ಈ ಭಾಗದ ಗ್ರಾಮಸ್ಥರು ಶಾಸಕ ರುದ್ರೇಶಗೌಡರಿಗೆ ಇತ್ತೀಚೆಗೆ ಮನವಿ ಸಲ್ಲಿಸಿದರು.
 ಸತತ ಬರಗಾಲದಿಂದ ಜನರು ತತ್ತರಿಸುತ್ತಿದ್ದು, ಮಳೆಯನ್ನು ಆಶ್ರಯಿಸಿ ವ್ಯವಸಾಯ ಮಾಡುತ್ತಿದ್ದ ರೈತರು ಗುಳೆ ಹೋಗುವ ಪರಿಸ್ಥಿತಿ ಉಂಟಾಗಿದೆ ಎಂದು ಗೊಲ್ಲರಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಸಿದ್ದಣ್ಣ ಮಾಜಿ ಪ್ರಧಾನ ಮಲ್ಲೇಶಪ್ಪ ಹೇಳಿದರು.
 ಸತತ ಬರಗಾಲ ಮಳೆಯ ಅಭಾವದಿಂದ ಅಂತರ್ಜಲ ಮಟ್ಟ ಕುಸಿದು ಜನ ಜಾನುವಾರುಗಳಿಗೆ ಕುಡಿಯುವ ನಿರಿಗೂ ಹಾಹಾಕಾರ ಉಂಟಾಗಿದ್ದು ಯಗಚಿ ನದಿಯನೀರನ್ನು ಈಭಾಗದ ಕೆರೆಗಳಿಗೆ ಹರಿಸುವಂತೆ ಶಾಸಕರನ್ನು ಒತ್ತಾಯಿಸಿದರು.
 ತಾಪಂ ಸದಸ್ಯರಾರ ಲಕ್ಷ್ಮೀ ರವಿಶಂಕರ್, ರಾಜೇಶ್ವರಿ ಶಿವಾನಂದ್, ಮಾಜಿ ಸದಸ್ಯ ನೇರ್ಲಿಗೆ ಸೋಮಶೇಖರ್, ಎಪಿಎಂಸಿ ಸದಸ್ಯ ಕಲ್ಲಹಳ್ಳಿ ನಾಗರಾಜು, ಗೊಲ್ಲರಹಳ್ಳಿ ವೆಂಕಟೇಶ್, ಪ್ರಸನ್ನ ಕುಮಾರ್ ಕರಗುಂದ ಬಸವರಾಜು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.