ಹಾಸನ

ನಗರಸಭೆ ಆಸ್ತಿ ಕಬಳಿಕೆ ಪ್ರಕರಣ ತನಿಖೆಗೆ ಒತ್ತಾಯ

Published On :

ಕನ್ನಡಪ್ರಭ ವಾರ್ತೆ ್ಣ ಹಾಸನ ್ಣ ಜೂ 30
ನಗರಸಭೆ ಆಸ್ತಿಯನ್ನು ಕಬಳಿಸಿರುವುದರ ವಿರುದ್ಧ ಸೂಕ್ತ ತನಿಖೆಯಾಗಬೇಕು ಹಾಗೂ ಇದಕ್ಕೆ ಸಹಕರಿಸಿದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ನಗರಸಭೆ ಸದಸ್ಯರು ಒತ್ತಾಯಿಸಿದರು.
ನಗರಸಭೆಯ ಸಭಾಂಗಣದಲ್ಲಿ ಆಧ್ಯಕ್ಷೆ ಶ್ರೀವಿದ್ಯಾ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಸದಸ್ಯ ಅನಿಲ್ ಕುಮಾರ್, ನಗರದ ಹೈಟೆಕ್ ಬಸ್ಸು ನಿಲ್ದಾಣದ ಸಮೀಪದ ಕೋಡಿಕಾಲುವೆಯಲ್ಲಿ 100್ಢ43 ನಿವೇಶನವನ್ನು ಅಕ್ರಮವಾಗಿ ನಗರಸಭೆಯಿಂದ ಖಾತೆ ಮಾಡಿಕೊಡಲಾಗಿದೆ ಎಂದು ಆರೋಪಿಸಿದರು.
ಈ ಬಗ್ಗೆ ದೂರು ಬಂದಿದ್ದು, ನಗರಸಭೆಯ ಈ ನಿವೇಶನವು ರು. 2 ಕೋಟಿ  ಹೆಚ್ಚು ಮೌಲ್ಯವಾಗಿದೆ. ಇದರ ಜೊತೆಗೆ ನಗರದ ಬೀರನಹಳ್ಳಿ ಕೆರೆ ಸಮೀಪ ನಗರಸಭೆಗೆ ಸೇರಿದ ಉದ್ಯಾನವು ಸತ್ಯಮಂಗಲ ಗ್ರಾಮ ಪಂಚಾಯ್ತಿಗೆ ಸೇರಿದೆ ಎನ್ನಲಾಗುತ್ತಿದೆ. ಸತ್ಯಮಂಗಲ ಗ್ರಾಮಪಂಚಾಯ್ತಿಗೆ ಸೇರುವುದಾದರೆ ಉದ್ಯಾನವಕ್ಕೆ ಲಕ್ಷಾಂತರ ರು.ಹಣವನ್ನು ನಗರಸಭೆಯಿಂದ ಏತಕ್ಕೆ ವೆಚ್ಚಮಾಡಲಾಗಿದೆ ಎಂದು ಅವರು ಪ್ರಶ್ನಿಸಿದರು.
ತಪ್ಪು ಮಾಹಿತಿ: ಸದಸ್ಯ ಗೋಪಾಲ್ ಮಾತನಾಡಿ, ನಗರಸಭೆಯ ನಿವೇಶನವನ್ನು ಅಕ್ರಮವಾಗಿ ಖಾತೆ ಮಾಡಿಕೊಟ್ಟಿರುವ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಕೇಳಿದರೆ ಅಧಿಕಾರಿಗಳು ಸುಳ್ಳು ಮಾಹಿತಿಯನ್ನು ಒದಗಿಸಿಕೊಟ್ಟಿದ್ದಾರೆ. ಅಂತಹ ಅಧಿಕಾರಿಗಳು ನಮಗೆ ಬೇಕಾ ಎಂದು ಪ್ರಶ್ನಿಸಿದ ಅವರು, ನಗರಸಭೆ ಸಿಬ್ಬಂದಿಗೆ ವೇತನ ನೀಡಲು ಹಣ ಇಲ್ಲ ಎಂದು ಹೇಳುಲಾಗುತ್ತಿದೆ. ಅದಕ್ಕೆ ನಗರಸಭೆಯ ಮಳಿಗೆಗಳನ್ನು ಬಾಡಿಗೆ ನೀಡಿ ಅದರಿಂದ ಬರುವಂತಹ ಹಣವನ್ನು ವೇತನಕ್ಕೆ ಬಳಿಸಿಕೊಳ್ಳಬಹುದಾಗಿದೆ ಎಂದರು.
ಸದಸ್ಯ ಸುರೇಶ್ ಕುಮಾರ್ ಮಾತನಾಡಿ, ನಗರಸಭೆ ಜಾಗ ಅಕ್ರಮವಾಗಿ ಕಬಳಿಸಿಕೊಂಡಿದ್ದರೆ ಅದನ್ನು ನಗರಸಭೆ ವಶಪಡಿಸಿಕೊಳ್ಳಬೇಕು. ಈ ಬಗ್ಗೆ ಅಧಿಕಾರಿಗಳೇ ನೇರವಾಗಿ ಕ್ರಮಕೈಗೊಳ್ಳಬಹುದಾಗಿದೆ ಎಂದರು.
ಕೋಡಿಕಾಲುವೆ ವಿವಾದ: ಸದಸ್ಯ ಯಶ್ವಂತ್ ಮಾತನಾಡಿ, ಕೋಡಿಕಾಲುವೆ ಜಾಗ ಅದು ನಗರಸಭೆಗೆ ಸೇರಿಲ್ಲ. ಅಲ್ಲದೆ ನಗರಸಭೆಗೆ ಸೇರಿರುವ ಬಗ್ಗೆ ಯಾವುದೇ ಮಾಹಿತಿ ಕೂಡ ಇಲ್ಲ. ಆದ್ದರಿಂದ ಆಯುಕ್ತರಿಗೆ ಒಂದು ತಿಂಗಳಲ್ಲಿ ಈ ಬಗ್ಗೆ ವರದಿ ನೀಡಬೇಕಾಗಿದೆ. ಈ ವಿಚಾರದಲ್ಲಿ ಯಾರೇ ತಪ್ಪು ಮಾಡಿದ್ದರು ಅವರ ವಿರುದ್ಧ ಕ್ರಮಕೈಗೊಳ್ಳಲು ನಮ್ಮ ಸಂಪೂರ್ಣ ಬೆಂಬಲವಿದೆ ಎಂದರು.
 ಇದಕ್ಕೆ ಆಯುಕ್ತ ಕೃಷ್ಣಮೂರ್ತಿ ಪ್ರತಿಕ್ರಿಯಿಸಿ, ಚನ್ನಪಟ್ಟಣ ಸಮೀಪದ ಜಾಗ ಅಕ್ರಮ ನಡೆದಿದೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದ್ದು ವರದಿಯನ್ನು ನೀಡಬೇಕಾಗಿದೆ. ಇದರಲ್ಲಿ ತಪ್ಪು ಮಾಡಿರುವ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲಾಗುತ್ತದೆ. ಇನ್ನು ಬೀರನಹಳ್ಳಿ ಕೆರೆಯ ಸಮೀಪದ ಉದ್ಯಾನಕ್ಕೆ ಸಂಬಂಧಿಸಿದಂತೆ ಅದು ಸತ್ಯಮಂಗಲ ಗ್ರಾಮ ಪಂಚಾಯ್ತಿಗೆ ಸೇರಲಿದೆ. ಈ ಬಗ್ಗೆ ನ್ಯಾಯಾಲಯವು ಸಹ ತಿಳಿಸಿದೆ ಎಂದರು.
ಕಸ ವಿಲೇವಾರಿ ಸಮಸ್ಯೆ: ಸದಸ್ಯ ಆರಿಫ್ ಖಾನ್ ಮಾತನಾಡಿ, ನಗರದಲ್ಲಿ ಕಸವನ್ನು ಸಾಗಿಸಲು ಒಂದು ಆಟೋ ಟಿಪ್ಪರ್‌ಗಳು ಇಲ್ಲ. ಅಧಿಕಾರಿಗಳಿಗೆ ಕರೆ ಮಾಡಿದರೆ ಆಟೋ ಕಳುಹಿಸುವುದಾಗಿ ಹೇಳುತ್ತಾರೆ. ಆದರೆ ಆಟೋಗಳನ್ನು ಕಳುಹಿಸುವುದಿಲ್ಲ. ಈ ಬಗ್ಗೆ ಕೂಡಲೇ ಕ್ರಮಕೈಗೊಳ್ಳುವಂತೆ ಪಟ್ಟು ಹಿಡಿದರು.
ಆಯುಕ್ತ ಕೃಷ್ಣಮೂರ್ತಿ ಪ್ರತಿಕ್ರಿಯಿಸಿ, ಇರುವಂತಹ 10 ಆಟೋ ಟಿಪ್ಪರ್‌ಗಳು ಕೆಟ್ಟುಹೋಗಿದ್ದು, ಹೊಸ ಆಟೋ ಟಿಪ್ಪರ್‌ಗಳ ವ್ಯವಸ್ಥೆಯನ್ನು ಕಲ್ಪಿಸುವುದಾಗಿ ಹೇಳಿದರು.
ಡ್ಯಾಂ ನೀರು ನಿಲ್ಲಿಸಿ: ಹೇಮಾವತಿ ಜಲಾಶಯಿಂದ ಬೆಂಗಳೂರು ಸೇರಿದಂತೆ ಇತರೆ ಜಿಲ್ಲೆಗಳಿಗೆ ನೀರನ್ನು ಬಿಡಲಾಗುತ್ತಿದೆ. ಈಗಾಗಲೇ ಹಾಸನಕ್ಕೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಡ್ಯಾಂ ನಿಂದ ನೀರು ಬಿಟ್ಟರೆ ಕುಡಿಯುವ ನೀರಿನ ಸಮಸ್ಯೆ ಮತ್ತಷ್ಟು ಉಲ್ಬಣವಾಗಲಿದೆ. ಆದ್ದರಿಂದ ಈ ಬಗ್ಗೆ ಗೊರೂರಿನಲ್ಲಿ ಪ್ರತಿಭಟನೆ ನಡೆಸಿ ಸಂಬಂಧಪಟ್ಟವರ ಗಮನಕ್ಕೆ ತರೋಣ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.