ಹಾಸನ

'ಮಾತೃ ಭಾಷೆ ಬದುಕು ಕಟ್ಟಿಕೊಡುತ್ತದೆ'

Published On :

ಹಾಸನ: ಮಾತೃಭಾಷೆಯು ಬದುಕನ್ನು ಕಟ್ಟಿಕೊಡುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರವಿಕುಮಾರ್ ತಿಳಿಸಿದರು.
ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಕಸಾಪ ವತಿಯಿಂದ ಇತ್ತೀಚೆಗೆ ಏರ್ಪಡಿಸಲಾಗಿದ್ದ ಕನ್ನಡ ವಿಷಯದಲ್ಲಿ 2013-14 ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಒಳಗೆ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಸನ್ಮಾನಿಸಿ ಮಾತನಾಡಿದರು.
ಅಂಕದ ಮೇಲೆ ಭವಿಷ್ಯ: ಹಿಂದೆ ಕಡಿಮೆ ಅಂಕ ಪಡೆದದರೂ ಅದು ದೊಡ್ಡ ಸಾಧನೆ ಎಂದು ಹೇಳಲಾಗುತ್ತಿತ್ತು. ಕಾಲ ಕ್ರಮೇಣ ಈಗ ಭವಿಷ್ಯ ಅಂಕದ ಮೇಲೆ ನಿಂತಿದೆ. ಅಂಕ ಎನ್ನುವುದು ಬದುಕು ಕಟ್ಟುವುದಿಲ್ಲ. ವಿದ್ಯಾರ್ಥಿಗಳು ಹೆಚ್ಚು ಅಂಕ ಪಡೆದರೇ ಯಾರ ಶಿಫಾರಸು ಹಾಗೂ ಹಣ ಕೊಡದೆ ಉದ್ಯೋಗ ಪಡೆಯಬಹುದು ಎಂದರು.
ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಹೆಚ್.ಬಿ. ಮದನ ಗೌಡ ಮಾತನಾಡಿ, ಓದಿನ ಕಣ್ಣಿಗೆ ಹೆಚ್ಚುನ ಗಮನ ನೀಡಿ ಉತ್ತಮ ಅಂಕ ಪಡೆದರೇ ಮುಂದೆ ಉನ್ನತ ವಿದ್ಯಾಭ್ಯಾಸಕ್ಕೆ ಯಾವ ಹಣ ವೆಚ್ಚ ಮಾಡಬೇಕಾಗಿಲ್ಲ ಎಂದು ಕಿವಿಮಾತು ಹೇಳಿದರು.
ಕನ್ನಡದಲ್ಲೇ ವ್ಯವಹರಿಸಿ: ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿ ಗೊರೂರು ಶಿವೇಶ್ ಮಾತನಾಡಿ, ಕನ್ನಡದಲ್ಲಿರುವ ತಂತ್ರಜ್ಞಾನವನ್ನು ಉತ್ತಮ ಪಡಿಸಿಸಲು ಮುಂದಾಗಬೇಕು.  ನಾವು ಸಾಧ್ಯವಾದಷ್ಟು ಕನ್ನಡದಲ್ಲಿಯೇ ವ್ಯವಹಾರ ಮತ್ತು ಸಹಿ ಹಾಕಬೇಕೆಂದು  ಹೇಳಿದರು.
ಕನ್ನಡ ವಿಷಯದಲ್ಲಿ 2013-14 ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ  ಮತ್ತು ಪಿಯುಸಿ ಒಳಗೆ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಪರಿಷತ್ ಜಿಲ್ಲಾಧ್ಯಕ್ಷ ಡಾ.ಹೆಚ್.ಎಲ್. ಜನಾರ್ದನ್ ಮಾತನಾಡಿದರು. ಕಸಾಪ ತಾಲೂಕು ಅಧ್ಯಕ್ಷ ಮಮತೇಶ್, ತ್ರೈ ಮಾಸಿಕ ಪತ್ರಿಕೆಯ ಸಂಪಾದ ಅರಕಲಗೂಡು ಜೈಕುಮಾರ್, ನೀಲೆಗೌಡ, ಆನಂದ್ ಇತರರು ಇದ್ದರು. ಹರೀಶ್ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.