ಹಾಸನ

ಷೇರುದಾರರಿಗೆ ತಲಾ 25 ಕೆಜಿ ಸಕ್ಕರೆ ವಿತರಣೆ

Published On :

ಅರಕಲಗೂಡು: ಹೇಮಾವತಿ ಸಕ್ಕರೆ ಕಾರ್ಖಾನೆ 2012-13ನೇ ಸಾಲಿನಲ್ಲಿ ಲಾಭದತ್ತ ಮುನ್ನಡೆ ಸಾಗಿಸಿದ್ದು, ಇದರಿಂದ ಬಂದ ಲಾಭದ ಡಿವಿಡೆಂಡನ್ನು ಪ್ರತಿ ಷೇರುದಾರರಿಗೆ ತಲಾ 25 ಕೆ.ಜಿ ಸಕ್ಕರೆ ರೂಪದಲ್ಲಿ ವಿತರಿಸಲು ತೀರ್ಮಾನ ಕೈಗೊಂಡಿದ್ದು, ಅದರಂತೆ ವಿತರಣೆ ಮಾಡಲಾಗುತ್ತಿದೆ ಎಂದು ಹೇಮಾವತಿ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮುತ್ತಿಗೆ ರಾಜೇಗೌಡ ತಿಳಿಸಿದರು.
ಪಟ್ಟಣದ ಪಿಎಲ್‌ಡಿ ಬ್ಯಾಂಕ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಷೇರುದಾರರಿಗೆ ಸಕ್ಕರೆ ಚೀಲಗಳನ್ನು ವಿತರಿಸಿದ ಅವರು, ಕಳೆದ 10 ವರ್ಷಗಳಿಂದ ಅಂಕಿ ಅಂಶಗಳು ಹಾಗೂ ಅಂದಿನ ಆಢಳಿತ ಮಂಡಳಿ ವ್ಯತ್ಯಾಸಗಳನ್ನು ಗಮನಿಸಿದರೆ ಇಷ್ಟು ಮಟ್ಟದ ಲಾಭ ಬಂದಿರುವ ಸಾಧ್ಯತೆ ಕಡಿಮೆ. ಮುಂದಿನ ದಿನಗಳಲ್ಲಿ ಪರಿಶಿಷ್ಟ ಜಾತಿಗೆ ಸೇರಿದವರಿಗೆ  ಷೇರು ನೀಡಲು ಅವಕಾಶವಿದ್ದು, ಅವರನ್ನು ತೊಡಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು. ಮಾ.15ರೊಳಗೆ ಅಗತ್ಯ ದಾಖಲಾತಿ ನೀಡಿ ಷೇರು ಪಡೆಯಬಹುದಾಗಿದೆ ಎಂದರು.
ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಕಬ್ಬಳಿಗೆರೆ ಬೈರೇಗೌಡ ಮಾತನಾಡಿದರು.

ಚನ್ನರಾಯಪಟ್ಟಣ: ದಿಢೀರ್ ಅಲ್ಪ ಮಳೆ
ಚನ್ನರಾಯಪಟ್ಟಣ: ಪಟ್ಟಣದಲ್ಲಿ ಸೋಮವಾರ ಸಂಜೆ ದಿಢೀರ್ ವರುಣನ ಕೃಪೆಯಾಗಿದ್ದು, ಬಿಸಿಲಿನಿಂದ ಬೇಗೆಯಲ್ಲಿ ಕಂಗಾಲಾಗಿದ್ದ ಜನತೆಗೆ ತಂಪೆರೆದ ವರುಣನ ಅಲ್ಪ ಕೃಪೆಗೆ ಸ್ವಲ್ಪ ನಿಟ್ಟುಸಿರು ಬಿಟ್ಟಿದ್ದಾರೆ.
 ಸಂಜೆ 6-30ಕ್ಕೆ ದಿಢೀರ್ ಕಾಣಿಸಿಕೊಂಡ ಮಳೆ ಅರ್ಧ ಗಂಟೆಗೂ ಅಧಿಕ ಸಮಯ ತಾಲೂಕಿನ ವಿವಿಧೆಡೆಗಳಲ್ಲಿ ಸುರಿದಿರುವ  ಹದವಾದ ಮಳೆಯಾಗಿದ್ದು, ತಾಲೂಕಿನ ವಿವಿಧೆಡೆಗಳಲ್ಲಿ ಸುರಿದಿರುವ ಮಳೆಯಿಂದ ರೈತರು ಅಲ್ಪ ಸಂತಸ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.