ರಸ್ತೆ ರಿಪೇರಿ ಮಾಡದಿದ್ದರೆ ಉಗ್ರ ಪ್ರತಿಭಟನೆ ಎಚ್ಚರಿಕೆ
ಹಾಸನ: ಹದಗೆಟ್ಟಿರುವ ಹಾಸನ-ಅರಕಲಗೂಡು-ರಾಮನಾಥಪುರ ರಸ್ತೆಯನ್ನು ವಾರದೊಳಗೆ ಸರಿಪಡಸಿದ್ದರೆ ಈ ವಿರುದ್ಧ ಕಾಲ್ನನಡಿಗೆ ಜಾಥ ನಡೆಸುವ ಮೂಲಕ ಪ್ರತಿಭಟಿಸುವುದಾಗಿ ಬಿಜೆಪಿ ಮುಖಂಡ ಮರಡಿ ಸೋಮಶೇಖರ್ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಸನ, ಅರಕಲಗೂಡು, ರಾಮನಾಥಪುರ, ಕೊಣ್ಣನೂರು ಮಾರ್ಗವಾಗಿ ಗುಂಡ್ಲುಪೇಟೆಯನ್ನು ಸೇರುವಂತಹ ಈ ರಸ್ತೆ ರಾಜ್ಯ ಹೆದ್ದಾರಿ 21 ಆಗಿದ್ದು, ಈ ರಸ್ತೆಗೆ 2012ರಲ್ಲಿಯೇ ಹಣ ಬಿಡುಗಡೆಯಾಗಿದೆ ಅಂತ ಅರಕಲಗೂಡ ಕ್ಷೇತ್ರದ ಶಾಸಕರು ಹೇಳಿದ್ದರು. ಆದರೆ ಆ ಹಣ ಏನಾಯಿತು? ಅಂತ ಯಾರಿಗೂ ಗೊತ್ತಿಲ್ಲ. ಇತ್ತ ರಸ್ತೆ ದುರಸ್ತಿ ಕೂಡ ಆಗಿಲ್ಲ ಎಂದು ಆರೋಪಿಸಿದರು.
ಒಟ್ಟಿನಲ್ಲಿ ಒಂದು ವಾರದೊಳಗೆ ಅರಕಲಗೂಡ ರಸ್ತೆ ದುರಸ್ತಿ ಪಡಿಸಿದ್ದರೆ ಈ ವಿರುದ್ಧ ಕಾಲ್ನಡಿಗೆ ಜಾಥದ ಮೂಲಕ ಪ್ರತಿಭಟಿಸಲಾಗುತ್ತದೆ. ಇದಕ್ಕೆ ಸರ್ಕಾರ ಬಗ್ಗದಿದ್ದರೆ ಮುಂದಿನ ದಿನಗಳಲ್ಲಿ ಉಪವಾಸ ಸತ್ಯಾಗ್ರಹ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು. ಬಿಜೆಪಿ ಮುಖಂಡರಾದ ಲೋಹಿತ್ಗೌಡ, ನಾರಾಯಣಸ್ವಾಮಿ, ಎನ್.ರವಿಕುಮಾರ್, ವಿಶ್ವನಾಥ್, ನಾರಾಯಣ್ ಮತ್ತಿತರರು ಉಪಸ್ಥಿತರಿದ್ದರು.
'ಶಾಂತಳಾ ಶಿಕ್ಷಣಸಂಸ್ಥೆಯಲ್ಲಿ ಗ್ರಾಮೀಣ ಮಕ್ಕಳಿಗೆ ಆದ್ಯತೆ'
ಬೇಲೂರು: ಪಟ್ಟಣದ ಶಾಂತಳಾ ವಿದ್ಯಾ ಸಂಸ್ಥೆಯಲ್ಲಿ ಇಲ್ಲಿಯವರೆಗೂ ಹೆಚ್ಚು ಗ್ರಾಮೀಣ ಪ್ರದೇಶದಿಂದ ಬಂದ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಎಂದು ಶಾಂತಳಾ ವಿದ್ಯಾ ಸಂಸ್ಥೆ ಅಧ್ಯಕ್ಷ ಬಿ.ಕೆ.ಭಗವಾನ್ ತಿಳಿಸಿದರು.
ಪಟ್ಟಣದ ಶಾಂತಳಾ ವಿದ್ಯಾಸಂಸ್ಥೆ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಸಂಸ್ಥೆ ಕಟ್ಟುವುದು ಸುಲಭದ ಮಾತಲ್ಲ, ಆದರೆ ಶಾಂತಳಾ ವಿದ್ಯಾಸಂಸ್ಥೆಗೆ ಹಲವು ಸಮಸ್ಯೆ ಇದ್ದರೂ ಗ್ರಾಮೀಣ ವಿದ್ಯಾರ್ಥಿಗಳಿಗೆ ಹೆಚ್ಚು ಮಹತ್ವ ನೀಡುತ್ತಾ ಬಂದಿದೆ ಎಂದರು. ಸಂಸ್ಥೆ ಪ್ರಮುಖವಾಗಿ ಬಾಲಕಿಯರಿಗೆ ಎಲ್ಲಾ ರೀತಿಯ ಶಿಕ್ಷಣಕ್ಕೂ ಹೆಚ್ಚು ಮಹತ್ವ ನೀಡಿದ್ದು, ಮಕ್ಕಳು ಅವರಿಗೆ ಇಷ್ಟ ಬಂದ ಭಾಷೆಗಳನ್ನು ಅಯ್ಕೆ ಮಾಡುಕೊಂಡು ವ್ಯಾಸಂಗ ಮಾಡುವ ಸ್ವಾತಂತ್ರ್ಯವಿದೆ ಎಂದರು. ಸಂಸ್ಥೆ ಕಾರ್ಯದರ್ಶಿ ತೊ.ಚ.ಅನಂತಸುಬ್ಬರಾಯ ಮಾತನಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

