ಅಥ್ಲೆಟಿಕ್ಸ್ ಟ್ರ್ಯಾಕ್ ನಿರ್ಮಾಣಕ್ಕೆ ರು. 5 ಲಕ್ಷ
ಬೇಲೂರು: ನೂತನವಾಗಿ ನಿರ್ಮಾಣವಾಗಿರುವ ಕ್ರೀಡಾಂಗಣದಲ್ಲಿ ಸದ್ಯದಲ್ಲೇ ಅಥ್ಲೆಟಿಕ್ ಟ್ರ್ಯಾಕ್ ಮಾಡುವುದಕ್ಕೆ ರು. 5 ಲಕ್ಷ ಬಿಡುಗಡೆ ಮಾಡಲಾಗಿದ್ದು, ಕೆಲ ದಿನಗಳ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಶಾಸಕ ವೈ.ಎನ್. ರುದ್ರೇಶ್ ಗೌಡ ತಿಳಿಸಿದರು.
ಪಟ್ಟಣದ ಹನುಮಂತ ನಗರದ ನೂತನ ಕ್ರೀಡಾಂಗಣದಲ್ಲಿ ಬೇಲೂರು ಕ್ರಿಕೆಟ್ ಕ್ಲಬ್ನ ಹಿರಿಯ ಕ್ರಿಕೆಟ್ ಆಟಗಾರ ಸುರೇಂದ್ರ ಹತ್ವಾರ್ ಬಾಸ್ ಸ್ಮರಣಾರ್ಥ ಬೇಲೂರು ಕ್ರಿಕೆಟ್ ಕ್ಲಬ್ ವತಿಯಿಂದ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಲೆದರ್ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿಜೇತ ತಂಡಕ್ಕೆ ಬಹುಮಾನ ವಿತರಿಸಿ ಮಾತನಾಡಿದರು.
ಸ್ಥಳಿಯ ಕ್ರೀಡಾ ಪಟುಗಳು ಕ್ರೀಡಾಂಗಣದ ಸದುಪಯೋಗ ಪಡೆದುಕೊಳ್ಳಬೇಕು ಎಂದ ಅವರು, ಕ್ರೀಡಾಂಗಣವನ್ನು ಉನ್ನತ ದರ್ಜೆಗೆ ಏರಿಸುವ ಉದ್ದೇಶದಿಂದ ಸಂಬಂಧಪಟ್ಟ ಮಂತ್ರಿಗಳಲ್ಲಿ ಮಾತ ನಾಡಿದ್ದು, ಮುಂದಿನ ದಿನಗಳಲ್ಲಿ ಮೂಲ ಸೌಲಭ್ಯ ನೀಡಲಾಗುತ್ತದೆ ಎಂದ ಅವರು, ಕ್ರಿಕೆಟ್ನಂತೆ ಫುಟ್ ಬಾಲ್, ವಾಲಿಬಾಲ್ ಇನ್ನು ಮುಂತಾದ ಕ್ರೀಡೆಗಳಿಗೂ ಪ್ರೋತ್ಸಾಹ ನೀಡಬೇಕಿದೆ ಎಂದರು.
ಭೂಮಿ ಬೇಕು: ಅಧ್ಯಕ್ಷತೆ ವಹಿಸಿ ಮಾತನಾಡಿದ ಬೇಲೂರು ಕ್ರಿಕೆಟ್ ಕ್ಲಬ್ನ ಅಧ್ಯಕ್ಷ ರಘುಪತಿ ಹತ್ವಾರ್, 1969ರಲ್ಲಿ ಸ್ಥಾಪನೆಯಾದ ಈ ಕ್ಲಬ್ ಉತ್ತಮ ಕ್ರೀಡೆಯಲ್ಲಿ ತೊಡಗಿದೆ. ಕ್ರಿಕೆಟ್ಗಾಗಿ ಉತ್ತಮ ಕ್ರೀಡಾಂಗಣ ನಿರ್ಮಿಸುವುದಕ್ಕೆ 7 ಎಕರೆ ಭೂಮಿ ಅವಶ್ಯವಿದ್ದು, ಜಮೀನು ಕೊಟ್ಟಲ್ಲಿ ಕೆಪಿಸಿಸಿಯಿಂದ ಉತ್ತಮ ಕ್ರೀಡಾಂಗಣ ನಿರ್ಮಿಸುವುದಾಗಿ, ಮಾಜಿ ಕ್ರಿಕೆಟಿಗ ಬ್ರಿಜೇಶ್ ಪಾಟೀಲ್ ಒಪ್ಪಿಕೊಂಡಿದ್ದಾರೆ ಎಂದರು.
ಬೇಲೂರು ಕ್ರಿಕೆಟ್ಗೆ ತಮ್ಮದೆ ಆದ ಕೊಡುಗೆ ನೀಡಿದ್ದ ದಿ. ಎಚ್.ಎಸ್. ಸುರೇಂದ್ರ ಹತ್ವಾರ್ಬಾಸ್ ನೆನಪಿನಲ್ಲಿ ಇಂದು ಕ್ರಿಕೆಟ್ ಪಂದ್ಯಾವಳಿ ನಡೆಸಿರುವುದು ನಿಜಕ್ಕೂ ಸಂತಸ ತಂದಿದೆ ಎಂದರು.
ಉದ್ಯಮಿ ಹಾಗೂ ನಗದು ಬಹುಮಾನ ನೀಡಿದ ಬಿ.ಎಸ್. ಮಧುಸೂದನ್ ಮಾತನಾಡಿದರು. ಹಿರಿಯ ಕ್ರಿಕೆಟಿಗರಾದ ಶ್ರೀನಿವಾಸ್, ಪಾಪು, ಶಿವಮೂರ್ತಿ, ಪ್ರಸನ್ನ ಕುಮಾರ್, ಸುರೇಶ್, ಲೋಕೇಶ್, ರವಿ ಇತರರು ಇದ್ದರು.
ಕಾಡಾನೆ ತುಳಿತ: ವ್ಯಕ್ತಿಗೆ ಮಾರಣಾಂತಿಕ ಗಾಯ
ಸಕಲೇಶಪುರ: ಕಾಡಾನೆ ತುಳಿತಕ್ಕೆ ಸಿಲುಕಿ ವ್ಯಕ್ತಿಯೊಬ್ಬರು ಮಾರಣಾಂತಿಕವಾಗಿ ಘಟನೆ ತಾಲೂಕಿನ ವಳಲಹಳ್ಳಿ ಕೂಡಿಗೆಯಲ್ಲಿ ಮಂಗಳವಾರ ನಡೆದಿದೆ. ಹಿರಿಯೂರು ಕೂಡಿಗೆ ಗ್ರಾಮದ ಹೊವಣ್ಣಗೌಡ (52) ಗಾಯಗೊಂಡ ವ್ಯಕ್ತಿಯಾಗಿದ್ದಾರೆ. ಎರಡು ದಿನದಿಂದ ಈ ಗ್ರಾಮದಲ್ಲಿ 5 ಕಾಡಾನೆಗಳ ಗುಂಪು ಬೀಡು ಬಿಟ್ಟಿದ್ದರಿಂದ ಗ್ರಾಮದಲ್ಲಿ ಶಾಲೆಗೆ ರಜೆ ಘೋಷಿಸಲಾಗಿತ್ತು. ಮಂಗಳವಾರ ಮುಂಜಾನೆ ಗಾಯಗೊಂಡ ಹೊವಣ್ಣಗೌಡ ಕಾಫಿ ತೋಟದಲ್ಲಿ ಕಾಡಾನೆಗಳು ಗುಂಪು ಇರುವುದನ್ನು ಗ್ರಾಮಸ್ಥರು ವೀಕ್ಷಿಸಿದ್ದರು. ಆದರೆ ಸಂಜೆ ವೇಳೆ ಗ್ರಾಮದ ರಸ್ತೆಯಲ್ಲಿ ನಡೆದ ಹೋಗುತ್ತಿದ್ದ ವೇಳೆ ಏಕಾಏಕಿ ದಾಳಿ ನಡೆಸಿದ ಕಾಡಾನೆ ಹೊವಣ್ಣಗೌಡರನ್ನು ಎತ್ತಿ ಎಸೆದಿದ್ದರಿಂದ ಸೊಂಟ ಮುರಿದಿದೆ. ತೀವ್ರವಾಗಿ ಗಾಯಗೊಂಡಿದ್ದ ವ್ಯಕ್ತಿಯನ್ನು ಗ್ರಾಮಸ್ಥರು ರಕ್ಷಿಸಿ ಪಟ್ಟಣದ ಕ್ರಾಫರ್ಡ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹಾಸನಕ್ಕೆ ಸಾಗಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

