ಹಾಸನ

ಅರಣ್ಯ ಇಲಾಖೆಯಿಂದ ಸುಳ್ಳು ಪ್ರಕರಣ ದಾಖಲು; ಆರೋಪ

Published On :

ಎಚ್.ಡಿ. ಕೋಟೆ: ತಾಲೂಕಿನಲ್ಲಿರುವ ಬುಡಕಟ್ಟು ಸಮುದಾಯದವರ ಮೇಲೆ ಅರಣ್ಯ ಇಲಾಖೆಯವರು ಉದ್ದೇಶಪೂರ್ವಕವಾಗಿ ಸುಳ್ಳು ಮೊಕದ್ದಮೆ ಹೂಡಿ ಕಿರುಕುಳ ನೀಡುತ್ತಿದ್ದಾರೆ ಎಂದು ಬುಡಕಟ್ಟು ಜನರು ಆರೋಪಿಸಿದರು.
ನನ್ನ ಪತಿ ಸುರೇಂದ್ರ ಅವರು ಫೆ.27ರ ಸಂಜೆ ಕಾಡಂಚಿನಲ್ಲಿ ತಮ್ಮ ಜಾನುವಾರು ಹುಡುಕುತ್ತಿದ್ದರು. ಈ ವೇಳೆ ಅರಣ್ಯ ಇಲಾಖೆಯ ವಾಚರ್ ನಾಗರಾಜು ಹಾಗೂ ಗಾರ್ಡ್ ಮನೋಹರ್ ಎಂಬವರು ಸುರೇಂದ್ರ ಅವರನ್ನು ಕಚೇರಿಗೆ ಕರೆದುಕೊಂಡು ಹೋಗಿ, 8 ದಿನದ ಹಿಂದೆ ಸತ್ತ ಜಿಂಕೆ ಹತ್ತಿರ ಕೂರಿಸಿ ಫೋಟೋ ತೆಗೆಸಿ ಸುಳ್ಳು ಪ್ರಕರಣ ದಾಖಲಿಸಿದ್ದಾರೆ ಎಂದು ಸುರೇಂದ್ರನ ಪತ್ನಿ ಕಾಳಮ್ಮ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಪತಿ ಸುರೇಂದ್ರ ಅವರು ಅರಣ್ಯ ಇಲಾಖೆಯಲ್ಲಿ 10 ವರ್ಷ ಸೇವೆ ಸಲ್ಲಿಸಿದ್ದರು. ಈ ವೇಳೆ ಹಿರಿಯ ಅಧಿಕಾರಿಗಳು ಅಕ್ರಮ ಕೆಲಸ ಮಾಡುವಂತೆ ಒತ್ತಾಯಿಸಿದ್ದರು. ಇದಕ್ಕೆ ನಿರಾಕರಿಸಿದ್ದರಿಂದ ಮರ ಸಾಗಿಸಿದರು ಎಂದು ಸುಳ್ಳು ಪ್ರಕರಣ ದಾಖಲಿಸಿ, ಕೆಲಸದಿಂದ ತೆಗೆದು ಹಾಕಿದರು. ಆ ನಂತರ ಅರಣ್ಯ ಇಲಾಖೆಯವರು ಉದ್ದೇಶಪೂರ್ವಕವಾಗಿ ನಮಗೆ ತೊಂದರೆ ಕೊಡುತ್ತಿದ್ದರು. ಜೀವನ ಸಾಗಿಸಲು ಸಹ ಬಿಡುತ್ತಿರಲಿಲ್ಲ ಎಂದು ದೂರಿದರು.
ಸುರೇಂದ್ರ ವಿರುದ್ಧ ದಾಖಲಿಸಿರುವ ಸುಳ್ಳು ಪ್ರಕರಣವನ್ನು ಹಿಂಪಡೆದು, ಅವರನ್ನು ಬಿಡುಗಡೆಗೊಳಿಸಬೇಕು. ಇಲ್ಲದಿದ್ದರೆ ಗುಂಡ್ರೆ ಅರಣ್ಯ ಇಲಾಖೆಯ ಕಚೇರಿ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ತಾಲೂಕು ಬುಡಕಟ್ಟು ಜನಾಂಗದವರು ಎಚ್ಚರಿಸಿದರು.
ಬೇಗೂರು ಪಂಚಾಯಿತಿ ಸದಸ್ಯ ಎಂ. ಸುಂದರ, ಆದಿವಾಸಿ ರಕ್ಷಣಾ ಪರಿಷತ್ ತಾಲೂಕು ಅಧ್ಯಕ್ಷ ಜಯರಾಜ್, ಮುಖಂಡರಾದ ಕಾಳಮ್ಮ, ಮಹದೇವಮ್ಮ, ಶಿವರಾಜು, ಚಿಕ್ಕಯ್ಯ, ಶೈಲೇಂದ್ರ ಇದ್ದರು.




Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.