ಹಾಸನ

ಸ್ವಸಹಾಯ ಸಂಘಗಳ ನಿಧಿಯಫಲಾನುಭವಿಗಳಿಗೆ ಚೆಕ್ ವಿತರಣೆ

Published On :

ಆಲೂರು: ಮಹಿಳಾ ಸ್ವಸಹಾಯ ಸಂಘಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ  ಹಮ್ಮಿಕೊಂಡಿರುವ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅವುಗಳ ಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕೆಂದು ಶಾಸಕ ಎಚ್.ಕೆ. ಕುಮಾರಸ್ವಾಮಿ ತಿಳಿಸಿದರು.
ಅವರು ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಇತ್ತೀಚೆಗೆ 2013-14ನೇ ಸಾಲಿನ ಸಮಗ್ರ ಜಲಾನಯನ ನಿರ್ವಹಣಾ ಯೋಜನೆಯಡಿ ಸ್ವಸಹಾಯ ಸಂಘಗಳ  ಸುತ್ತು ನಿಧಿ ಫಲಾನುಭವಿಗಳಿಗೆ ಚೆಕ್ ವಿತರಿಸಿ ಅವರು ಮಾತನಾಡಿದರು.
ಸಬಲರಾಗಬೇಕು: ಈಗಾಗಲೇ ಬ್ಯಾಂಕ್ ನೀಡಿದ್ದ ರು. 30 ಲಕ್ಷದಲ್ಲಿ ರು. 12 ಲಕ್ಷ ಪಾವತಿಯಾಗಿದ್ದು, 18 ಲಕ್ಷ ಬಾಕಿಯಿದೆ. ಮುಂದಿನ ದಿನಗಳಲ್ಲಿ ಮಹಿಳೆಯರು ಎಚ್ಚೆತ್ತು ಇರುವ 34 ಸಂಘಗಳು ಆರೋಗ್ಯಕರವಾಗಿ ಪೈಪೋಟಿಯಿಂದ ಕೆಲಸಮಾಡಿ, ಉತ್ತಮವಾದ ಕೆಲಸಗಳನ್ನು ಮಾಡಿರುವ ಸಂಘಗಳನ್ನು ಪ್ರೋತ್ಸಾಹಿಸಬೇಕು. ಇದರ ಮೂಲಕ ಕಾರ್ಯಕ್ರಮದಲ್ಲಿ ನೀಡುವ ಹಣದ ಸದುಪಯೋಗ ಮಾಡಿಕೊಂಡು ಮಹಿಳೆಯರು ಸಬಲರಾಗಬೇಕು ಎಂದರು.
ಅಂತರ್ಜಲ ಸಂರಕ್ಷಿಸಬೇಕು: ತಾಲೂಕು ಪಂಚಾಯ್ತಿ ಅಧ್ಯಕ್ಷೆ ಯಶೋಧ ಹರೀಶ್ ಮಾತನಾಡಿ, ಸರ್ಕಾರದ ಸುತ್ತುನಿಧಿ ಹಣವನ್ನು ಸರಿಯಾಗಿ ಬಳಸಿಕೊಂಡು ಮಹಿಳೆಯರು ಪ್ರಗತಿ ಕಾಣಬೇಕು ನೀರಿಲ್ಲದಿದ್ದರೆ ಸರ್ಕಾರ ಅಥವಾ ಜನ ಪ್ರತಿನಿಧಿಗಳು ಏನೂ ಮಾಡಲು ಸಾಧ್ಯವಿಲ್ಲ ಗ್ರಾಮೀಣ ಪ್ರದೇಶದ ಜನರು ಮಳೆ ನೀರನ್ನು ಸಂಗ್ರಹಿಸುವುದರ ಮೂಲಕ  ಪಟ್ಟಣದ ಜನರಿಗೆ ಮಾದರಿಯಾಗಬೇಕು. ಅಂತರ್ಜಲಗಳು ಬತ್ತಿ ಹೋದರೆ ನೀರಿನ ಮೂಲಗಳಿಂದ ನೀರು ದೊರೆಯುವುದಿಲ್ಲ. ಆದ್ದರಿಂದ, ಮಳೆಕೊಯ್ಲಿನ ಮೂಲಕ ನೀರನ್ನು ಸಂರಕ್ಷಿಸಿ ಅಂತರ್ಜಲಗಳು ಬತ್ತದಂತೆ ನಮ್ಮ ಕೈಲಾದ ಪ್ರಯತ್ನ ಮಾಡಬೇಕೆಂದರು.
ತಾಲೂಕು ಪಂಚಾಯ್ತಿ ಸದಸ್ಯ ಕಾಂತರಾಜ್, ಹುಣಸವಳ್ಳಿ ಗ್ರಾಪಂ ಅಧ್ಯಕ್ಷೆ ದಿಲ್ ಶಾದ್ ಬಾನು, ತಾಳೂರು ಗ್ರಾಪಂ ಅಧ್ಯಕ್ಷೆ ಶಕುಂತಲಾ, ದೊಡ್ಡ ಕಣಗಾಲ್ ಗ್ರಾಪಂ ಅಧ್ಯಕ್ಷೆ ದಾಕ್ಷಾಯಿಣಿ, ಬೈರಾಪುರ ಗ್ರಾಪಂ ಮಾಜಿ ಅಧ್ಯಕ್ಷ ವೀರಭದ್ರ ಸ್ವಾಮಿ, ಜಿಲ್ಲಾ ಜಲಾನಯನ ಅಭಿವೃದ್ಧಿ ಅಧಿಕಾರಿ ಕೃಷ್ಣಮೂರ್ತಿ ಹಾಗೂ ತಾಲೂಕು ಜಲಾನಯನ ಅಧಿಕಾರಿ ಮೋಹನ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.