ಇಚ್ಛಾಶಕ್ತಿ ಕೊರತೆ: ನೀರಿನ ಕರಾಳತೆ
ಕ.ಪ್ರ.ವಾರ್ತೆ ಹಾಸನ ಮಾ. 28
ನೀರನ್ನು ಅಂತರ್ಜಲ ಸೇರಿಸುವ ಯೋಜನೆ, ಚರ್ಚೆ ಮಾಡದ ರಾಜಕೀಯ ಇಚ್ಚಾಶಕ್ತಿಯ ಅಧಃಪತನದಿಂದ ಇಂದು ಕನ್ನಡದ ಜನ ಕುಡಿವ ನೀರಿನ ಕರಾಳತೆಯನ್ನು ಅನುಭವಿಸುತ್ತಿದ್ದಾರೆ ಎಂದು ವಿಚಾರವಾದಿ ಕೆ.ಎಸ್. ರವಿಕುಮಾರ್ ಆತಂಕ ವ್ಯಕ್ತಪಡಿಸಿದ್ದಾರೆ.
ಅವರು ಇತ್ತೀಚೆಗೆ ಹಾಸನ ನಗರದ ಪ್ರಗತಿಪರ ಸಂಘಟನೆಗಳು, ಬಿಜಿವಿಎಸ್, ಹಾಗೂ ಸಾಹಿತಿಗಳಿಂದ ಹಾಸನ ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಹಮ್ಮಿ ಕೊಂಡಿದ್ದ ನೀರು ಮತ್ತು ವ್ಯವಸ್ಥೆ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡುತ್ತಿದ್ದರು.
ಅಭಿವೃದ್ಧಿ ಅಸ್ತವ್ಯಸ್ತ: ನೀರು ಒಂದು ಮಾನವನ ಬದುಕಿನ ಅತಿಮುಖ್ಯ ಅಂಗ ಮಾತ್ರವಲ್ಲ. ಜೀವನದ ಸರಾಸರಿಯನ್ನು ಲೆಕ್ಕ ಹಾಕಲು, ಮಾನವನ ಜ್ಞಾನವನ್ನು ಅಳತೆಮಾಡಲು ಹಾಗೂ ಆ ದೇಶದ ರಾಜಕೀಯ ಪ್ರಬುದ್ಧತೆ ಅಳೆಯಲು ಉತ್ತಮ ಸಾಧನ. ಭಾರತ ದೇಶ ನೀರನ್ನು ಬಳಸಿಕೊಂಡಿಲ್ಲದಿರುವುದು ಹಾಗೂ ಬಳಸಿಕೊಳ್ಳುವಲ್ಲಿ ಯೋಚಿಸದಿರುವುದು ಭಾರತದ ಸ್ವಾವಂಲಬಿತನ ಹಾಗೂ ಅಭಿವೃದ್ಧಿಯ ಹಾದಿಯನ್ನು ಅಸ್ತವ್ಯಸ್ತಗೊಳಿಸಿದೆ ಎಂದು ಹೇಳಿದರು.
ಜನ ಅಜ್ಞಾನ: 1970ರ ನಂತರ ಭಾರತದಲ್ಲಿ ಕೊಳವೆ ಬಾವಿ ಜನಪ್ರಿಯತೆ ಕಾಣುತ್ತಾ ಬಂದಿತು. 150-200 ಅಡಿ ಆಳದಲ್ಲಿ ದೊರಕುತ್ತಿದ್ದ ನೀರು ಕೇವಲ 20 ವರ್ಷಗಳಲ್ಲಿ ಎರರೆಡು ಸಾವಿರ ಅಡಿ ದಾಟಿ ಹೋಯಿತು. ಇದಾದ ನಂತರವೂ, ನಮ್ಮ ವ್ಯವಸ್ಥೆಗಳು ವೈಜ್ಞಾನಿಕ ಅಧ್ಯಯನ ಮಾಡದೆ ವ್ಯಕ್ತಿಗತವಾಗಿ ನೀರನ್ನು ಪಡೆದುಕೊಳ್ಳುವ ಜವಾಬ್ದಾರಿಯನ್ನು ವರ್ಗಾಯಿಸಿದರ ಪರಿಣಾಮ ಈಗ ನೀರಿಗಾಗಿ ಹಾಹಾಕಾರಪಡುವ ಕಾಲ ಬಂದಿದೆ ಎಂದು ವಿಷಾದಿಸಿದರು. ಇದು ನೀರಿನ ಬಗೆಗಿನ ಅಜ್ಞಾನ ಎಂದು ತಿಳಿಸಿದರು.
ಭಾರತ ಹಿಂದೆ: ವಿಶ್ವ ಸಂಸ್ಥೆ ನೀರಿನ ಬಡತನದ ಇಂಡೆಕ್ಸ್ ಅನ್ನು ಸಿದ್ಧಪಡಿಸಿದ್ದು ಇದರಲ್ಲಿ, ಶೇ. 76 ಅಂಕ ಗಳಿಸಿದ ಫಿನ್ಲಾಂಡ್, ಅಂತರ್ಜಲ ಕಾಪಾಡಿಕೊಂಡು ನೀರನ್ನು ತನ್ನ ಜನರಿಗೆ ಸುವ್ಯವಸ್ಥಿತವಾಗಿ ಹಂಚುವಲ್ಲಿ ಜಗತ್ತಿನಲ್ಲೇ ಮೊದಲ ಸ್ಥಾನದಲ್ಲಿದೆ. ಭಾರತ 54 ಅಂಕ ಗಳಿಸಿ 100ನೇ ಸ್ಥಾನದಲ್ಲಿದೆ ಎಂದರು.
ಅಧ್ಯಯನ ವೃತ್ತದ ಸಂಚಾಲಕ ಎಚ್.ಎ. ಕಿಶೋರ್ ಕುಮಾರ್ ಮಾತನಾಡಿ, ಜಿಲ್ಲೆಯ ಜನರಲ್ಲಿ ಪ್ರಚಲಿತ ವಿದ್ಯಮಾನಗಳನ್ನು ವೈಜ್ಞಾನಿಕವಾಗಿ ಚರ್ಚಿಸಿ ತಿಳಿದುಕೊಳ್ಳುವ ನಿಟ್ಟಿನಲ್ಲಿ ಪ್ರತಿ ಬುಧವಾರ ಸಂಜೆ 5. 45ರಿಂದ 7 ಗಂಟೆವರೆಗೆ ಸಂವಾದ, ಚರ್ಚೆ ಹಾಗೂ ಅಗತ್ಯ ಸಂದರ್ಭದ ಒತ್ತಡ ಹೇರುವ ಕಾರ್ಯ ಸೂಚಿಯನ್ನು ತಯಾರು ಮಾಡಿಕೊಳ್ಳಲು ಅಧ್ಯಯನ ವೃತ್ತ ಕೆಲಸ ಮಾಡಲಿದೆ ಎಂದರು.
ಸಾಹಿತಿ ಜ.ಹೊ.ನಾ, ಬಿಜಿವಿಎಸ್ನ ಅಹಮದ್, ಸಮತದ ಮಮತಶಿವು, ಸಹಮತ ವೇದಿಕೆಯ ಐವಾನ್ ಡಿಸಿಲ್ವ, ಸಾಹಿತಿ ಗೊರೂರು ಶಿವೇಶ್ ಮುಂತಾದವರು ಚರ್ಚೆಯಲ್ಲಿ ಪಾಲ್ಗೊಂಡು ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

