14 ಮಂದಿ ಕಣದಲ್ಲಿ, ಎರಡು ನಾಮಪತ್ರ ವಾಪಸ್
ಹಾಸನ: ಹಾಸನ ಲೋಕಸಭಾ ಕ್ಷೇತ್ರದಿಂದ ಇಬ್ಬರು ನಾಮಪತ್ರವನ್ನು ಹಿಂದಕ್ಕೆ ಪಡೆದಿದ್ದು, ಅಂತಿಮವಾಗಿ 14 ಮಂದಿ ಸ್ಪರ್ಧಾ ಕಣದಲ್ಲಿದ್ದಾರೆ. ನಾಮಪತ್ರ ಹಿಂದಕ್ಕೆ ಪಡೆಯಲು ಕಡೆಯ ದಿನವಾದ ಶನಿವಾರ ಪಕ್ಷೇತರರಾದ ಬಿ.ಟಿ. ಗಿರೀಶ್ ಮತ್ತು ಪುಟ್ಟಯ್ಯ ಅವರು ತಮ್ಮ ನಾಮಪತ್ರಗಳನ್ನು ಹಿಂದಕ್ಕೆ ಪಡೆದರು. ನಂತರ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಚುನಾವಣಾ ವೀಕ್ಷಕ ರಘುವೀರ್ ಶ್ರೀವಾಸ್ತವ್ ಸಮ್ಮುಖದಲ್ಲಿ ಅಭ್ಯರ್ಥಿಗಳಿಗೆ ಚಿಹ್ನೆ ನಿಗದಿಪಡಿಸಿದರು.
ಚಿಹ್ನೆಗಳು: ಡಾ. ಭಾನುಪ್ರಕಾಶ್ (ಕಿಟಕಿ), ಸಿ.ಎಚ್.ವಿಜಯಶಂಕರ್ (ಕಮಲ), ಎಂ. ಮಹೇಶ್(ಕ್ಯಾಮೆರಾ), ಸಂತೋಷ್ ಮೋಹನ್ (ಪೊರಕೆ), ಎಚ್.ಡಿ. ದೇವೇಗೌಡ (ತೆನೆ ಹೊತ್ತ ಮಹಿಳೆ), ಮಂಜುನಾಥ್ (ಹೊಲಿಗೆ ಯಂತ್ರ), ಎಚ್.ಡಿ. ರೇವಣ್ಣ (ಬ್ಯಾಟುಗಾರ), ಟಿ.ಡಿ. ಜಗದೀಶ್ (ಆಟೋರಿಕ್ಷಾ), ಎ.ಪಿ. ಅಹಮದ್ (ಆನೆ), ಜವರಯ್ಯ (ಟೆಲಿವಿಷನ್), ಎನ್.ಎನ್. ಮಲ್ಲಪ್ಪ (ಪೆನ್ನಿನ ನಿಬ್), ಎಸ್.ಬಿ. ರಾಜೇಗೌಡ (ಟೇಬಲ್), ಎ. ಮಂಜು (ಹಸ್ತ), ರುದ್ರೇಗೌಡ (ದ್ರಾಕ್ಷಿ). ಸಹಾಯಕ ಚುನಾವಣಾಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎನ್. ಗೋಪಾಲಕೃಷ್ಣ, ಚುನಾವಣಾ ತಹಸೀಲ್ದಾರ ಬಾಬುರಾವ್ ಈ ಸಂದರ್ಭದಲ್ಲಿ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

