ಈಗ ಅಧಿಕಾರ ಇಲ್ಲದಿರುವಾಗ ಏನು ಮಾಡಿಯಾರು?
ಹಾಸನ: ಅಧಿಕಾರ ಇರುವಾಗ ಏನೂ ಮಾಡಲಾಗದವರು, ಈಗ ಅಧಿಕಾರವಿಲ್ಲದಾಗ ಏನು ಮಾಡುತ್ತಾರೆ ಎಂದು ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರ್ ಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಹೈಸ್ಕೂಲ್ ಮೈದಾನದಲ್ಲಿ ಶನಿವಾರ ಜಿಲ್ಲಾ ಕಾಂಗ್ರೆಸ್ ವತಿಯಿಂದ ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಎಚ್.ಡಿ. ಕುಮಾರಸ್ವಾಮಿ ಅವರು ನನ್ನನ್ನು ಜೈಲಿಗೆ ಕಳುಹಿಸುತ್ತೇನೆ ಅಂತಾ ಹೇಳುತ್ತಾರಲ್ಲಾ ಅವರೇನು ಜಡ್ಜಾ, ನ್ಯಾಯಾಧೀಶನಾ... ಅಥವಾ ಪೊಲೀಸಾ? ಎಂದು ಪ್ರಶ್ನಿಸಿದರು.
ನೂರು ಹಿರೇಮಠ್ಗಳ ಎದುರಿಸಬಲ್ಲೆ
ನನ್ನ ವಿರುದ್ಧ ಹಿರೇಮಠ್ ಅವರನ್ನು ಛೂ ಬಿಟ್ಟಿದ್ದಾರೆ ಎಂದ ಶಿವಕುಮಾರ್, ನೂರು ಹಿರೇಮಠ ಗಳನ್ನು ಅರಗಿಸಿಕೊಳ್ಳಬಲ್ಲೇ, ದೇವೇಗೌಡರು ಒಂದು ಬಾರಿ ನನಗೆ ಪೋನ್ ಮಾಡಿದ್ದನ್ನು ಬಿಟ್ಟರೆ ಅವರ ಸಂಪರ್ಕವಿಲ್ಲ ಅಂತ ಹಿರೇಮಠ್ ಹೇಳುತ್ತಾನೆ. ಆದರೆ ಹಿರೇಮಠ್ ಅವರು ಜೆಡಿಎಸ್ನ ಗಿಳಿ, ದಾಳ ಅನ್ನೋದು ನನಗೆ ಚೆನ್ನಾಗಿ ತಿಳಿದಿದೆ. ಹಿಂದೆ 3 ಸ್ಥಾನಗಳಿದ್ದ ಜೆಡಿಎಸ್, ಈ ಬಾರಿ ಸೊನ್ನೆ ಗಳಿಸಲಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

