ಹಾಸನ

ವಿದ್ಯುತ್ ಕೊರತೆ: ನೀರಿಗೆ ತೊಂದರೆ

Published On :

ಸಕಲೇಶಪುರ: ಹಗಲೆಲ್ಲಾ ಕರೆಂಟ್ ಇಲ್ಲ. ಇನ್ನು ಕುಡಿಯಲೂ ನೀರಿಲ್ಲ. ಕರೆಂಟ್ ಬರುವುದೇ ರಾತ್ರಿಗೆ. ಒಂದೊಮ್ಮೆ ಬಂದರೂ ವೋಲ್ಟೇಜ್ ಇರುವುದಿಲ್ಲ. ಹೀಗಾಗಿ ಬೇಲೂರು ಸಮೀಪದ ಘಟ್ಟದ ಹಳ್ಳಿ ಗ್ರಾಮಸ್ಥರು ಒಂದು ಕೊಡ ನೀರು ಬೇಕೆಂದರೆ ನೀರಿನ  ಟ್ಯಾಂಕ್ ಬಳಿ ಕಾಯುತ್ತಾ ಅಲ್ಲೇ ಮಲ ಗಿರಬೇಕಾದ ದುಃಸ್ಥಿತಿ ಎದುರಾಗಿದೆ. ಕುಡಿಯುವ ನೀರು ಕಲ್ಪಿಸುವಂತೆ ಆಗ್ರಹಿಸಿ ಹಲವಾರು ಧರಣಿಗಳು, ಪಂಚಾಯಿತಿ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ಮಾಡಲಾಗಿದೆ. ಆದರೂ ಏನೂ ಪ್ರಯೋಜನವಾಗಿಲ್ಲ. ಇದರಿಂದಾಗಿ ಇಲ್ಲಿನ ಜನರು ರಸ್ತೆಯಲ್ಲಿಯೇ ಮಲಗಿ ನಲ್ಲಿಯಲ್ಲಿ ನಲ್ಲಿಯಲ್ಲಿ ನೀರು ಬಿಟ್ಟಾಗ ಹಿಡಿಯುವ ಪರಿಸ್ಥಿತಿ ಇದೆ. ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ನೀರಿನ ಸಮಸ್ಯೆ ಬಿಗಡಾಯಿಸಿದೆ. ಶಾಲಾ ಮಕ್ಕಳ ಪರೀಕ್ಷೆ ಸಂದರ್ಭದಲ್ಲಿ ವಿದ್ಯುತ್ ಕಡಿತ ಗೊಳಿಸುವುದಿಲ್ಲ ಎಂಬ ಸರ್ಕಾರದ ಭರವಸೆ ಹುಸಿಯಾಗಿದೆ. ಕೆರೆ ಕಟ್ಟೆಗಳು ಒಣಗಿನಿಂತಿದ್ದು ಜನಜಾನುವಾರುಗಳ ಪರಿಸ್ಥಿತಿ ಚಿಂತಾ ಜನಕವಾಗಿದೆ.
ಟಿ ರಾಜೇಶ್, ಮಂಜುನಾಥ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.