ಹಾಸನ

'ಹಣ ಮಾಡಲುವಿದ್ಯೆ ಕಲಿಯದಿರಿ'

Published On :

ಕೊಣನೂರು (ಅರಕಲಗೂಡು ತಾ.): ಕಠಿಣ ಪರಿಶ್ರಮದಿಂದ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ಕೊಣನೂರು ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ವ್ಯವಸ್ಥಾಪಕ ಕರುಣಾಕರನ್  ಅಭಿಪ್ರಾಯಪಟ್ಟರು.
ಇಲ್ಲಿನ ಬಿ.ಎಂ. ಶೆಟ್ಟಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ದ್ವಿತೀಯ ವರ್ಷದ ವಾಣಿಜ್ಯ ಹಬ್ಬ ಹಾಗೂ ವಾಣಿಜ್ಯ ಮತ್ತು ನಿರ್ವಹಣಾ ವೇದಿಕೆಯ ಪ್ರಾರಂಭೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕೇವಲ ಹಣ ಮಾಡುವುದಕ್ಕಾಗಿ ವಿದ್ಯೆ ಕಲಿಯಬಾರದು. ನೀವು ಒಳ್ಳೆಯ ವಿದ್ಯೆ ಕಲಿತು ಸತ್ಪ್ರಜೆಯಾಗಿ ಬೆಳೆದರೆ ಹಣವೇ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ನಾವು ಹಣವನ್ನು  ಹುಡುಕಿಕೊಂಡು ಹೋಗಬಾರದು. ದಿನಪತ್ರಿಕೆಗಳು ಹಾಗೂ ಟಿವಿಗಳಲ್ಲಿ ಬರುವ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ವಿಷಯಗಳನ್ನು ತಿಳಿಯುವುದರಿಂದ ನಿಮ್ಮ ಕಲಿಕೆಗೆ ಸಹಾಯವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಸವಾಲಾಗಿ ಸ್ವೀಕರಿಸಬಹುದು: ಕಾಲೇಜಿನ ಪ್ರಾಂಶುಪಾಲ ಸಿ.ಎಸ್. ಮೋಹನ್ ಮಾತನಾಡಿ ವಿದ್ಯಾರ್ಥಿಗಳು ವ್ಯಕ್ತಿತ್ವವನ್ನು ಅಭಿವೃದ್ಧಿಪಡಿಸಿಕೊಳ್ಳಲು ಸಹಕಾರಿಯಾಗಿದೆ. ಅಲ್ಲದೇ, ಪಠ್ಯ ವಿಷಯದಿಂದ ಹೊರಬಂದು ಭೌದ್ಧಿಕ ಮಟ್ಟವನ್ನು ಹೆಚ್ಚಿಸಿಕೊಳ್ಳಲು ಸಹಕಾರಿಯಾಗಿದೆ. ವಿದ್ಯಾರ್ಥಿಗಳು ಓದಿನ ಜತೆಗೆ ಇತರೆ ಚಟುವಟಿಕೆಗಳನ್ನು  ಬೆಳೆಸಿಕೊಳ್ಳಬೇಕು. ಇದರಿಂದ ಸಾಮಾನ್ಯ ಜ್ಞಾನ ತಿಳಿದುಕೊಂಡಂತಾಗುತ್ತದೆ. ಇದರಿಂದ ಧೈರ್ಯ, ಆತ್ಮಸ್ಥೈರ್ಯ ಹೆಚ್ಚಾಗಿ ಯಾವುದೇ ಸ್ಪರ್ಧೆಯನ್ನೂ ನೀವು ಸವಾಲಾಗಿ ಸ್ವೀಕರಿಸಬಹುದು. ಗುರು ಹಿರಿಯರ ಬಗ್ಗೆ ತಾತ್ಸಾರ ಮನೋಭಾವನೆ ಇರಬಾರದು. ಎಲ್ಲರನ್ನೂ ಗೌರವದಿಂದ   ಕಂಡು ಸತತವಾಗಿ ಪರಿಶ್ರಮ ಪಟ್ಟರೆ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ಹೇಳಿದರು. ವಾಣಿಜ್ಯಶಾಸ್ತ್ರದ ಮುಖ್ಯಸ್ಥ ಯೋಗೇಶ್ ಮಾತನಾಡಿದರು. ಹಳೆಯ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕ ವೃಂದ ಇದ್ದರು.
ಚಂದ್ರಪ್ರಭ ಜೈನ ಮಸೀದಿಗೆ ವಿದ್ಯಾರ್ಥಿಗಳ ಭೇಟಿ
ಜಾವಗಲ್: ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಅಂತಿಮ ಬಿಎ ವಿದ್ಯಾರ್ಥಿಗಳು ಪಟ್ಟಣದ ಹೊಯ್ಸಳರ ಕಾಲದ ಇತಿಹಾಸ ಪ್ರಸಿದ್ದ 1008ನೇ ಚಂದ್ರಪ್ರಭ ಜೈನಾ ಬಸದಿಗೆ ಶನಿವಾರ ಭೇಟಿ ನೀಡಿ, ಬಸದಿಯನ್ನು ವೀಕ್ಷಿಸಿ ಬಸದಿಯ ಬಗ್ಗೆ ಮಾಹಿತಿ ಪಡೆದುಕೊಂಡರು.
ಕಾಲೇಜಿನ ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕ ಎಸ್.ಎಂ. ಶಿವಶಂಕರ್ ಮೂರ್ತಿ ಈ ಜೈನ ಬಸದಿಯು 10-11ನೇ ಶತಮಾನದಾಗಿದ್ದು ಜೈನರ 24 ತೀರ್ಥಂಕರರಲ್ಲಿ 8ನೇ ಚಂದ್ರಪ್ರಭ ತೀರ್ಥಂಕರರಿಗೆ ಸಂಬಂಧ ಪಟ್ಟಿದ್ದು ಚಂದ್ರಪ್ರಭರವರು ಚಂದ್ರ ಲಾಂಛನ ಹೊಂದಿದ ತೀರ್ಥಂಕರರಾಗಿದ್ದಾರೆ. ಬಸದಿಯಲ್ಲಿ ಪದ್ಮಾವತಿ, ಜ್ವಾಲಾಮಾಲಿನಿ ಮತ್ತು ಸರಸ್ವತಿ ದೇವತೆಗಳನ್ನು ಪ್ರತಿಷ್ಠಾಪಿಸಲಾಗಿದೆ ಎಂದರು.ಅರ್ಚಕ ಪದ್ಮರಾಜು ನಂದಮುನಿ ಎಂಬ ಮಹಾರಾಜ ಸಲ್ಲೇಖನ ವ್ರತವನ್ನು ಅಚರಿಸಿ ಇಲ್ಲೆಯೇ ಜೀವ ಸಮಾದೀ ಹೊಂದಿದ್ದಾರೆಂದು ಅವರ ಜ್ಞಾಪಕಾರ್ಥವಾಗಿ ನಿಶಾಧಿಯ ಕಲ್ಲನ್ನು ಸ್ಥಾಪಿಸಿದರು ಎಂದರು.  2004-05ನೇ ಸಾಲೀನಲ್ಲಿ ಸ್ಥಳೀಯರಾದ ಕಲ್ಪನನಾಗರಾಜು ಮತ್ತಿತ್ತರರು ಬಸದೀಯ ಜೀರ್ಣೋದ್ಧಾರ ಮಾಡಿರುತ್ತಾರೆ ಎಂದು ತಿಳಿಸಿ 24 ತೀರ್ಥಂಕರರ ಬಗ್ಗೆ ಮಾಹಿತಿ ನೀಡಿದರು.   ಕಾರ್ಯಕ್ರಮದಲ್ಲಿ ರಾಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಎಂ. ಸತೀಶ್, ಉಪನ್ಯಾಸಕರಾದ ಜೆ.ಎಸ್. ದಯಾನಂದ್, ಪುಟ್ಟಸ್ವಾಮಿಗೌಡ ಇದ್ದರು.
ಸೌಲಭ್ಯಗಳ ಸದ್ಬಳಕೆಗೆ ಕರೆ
ಅರಸೀಕೆರೆ:  ಸಂಘಸಂಸ್ಥೆಗಳು ನೀಡುವ ಸೌಲಭ್ಯಗಳನ್ನು ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಂಡು ಶೈಕ್ಷಣಿಕವಾಗಿ ಅಭಿವೃದ್ಧಿ ಸಾಧಿಸಬೇಕೆಂದು ರೋಟರಿ ಸಂಸ್ಥೆಯ ಅಧ್ಯಕ್ಷ ಪ್ರವೀಣ್ ಕುಮಾರ್ ಕಿವಿಮಾತು ಹೇಳಿದರು. ಪಟ್ಟಣದ ಬಿ.ಎಚ್. ರಸ್ತೆಯಲ್ಲಿರುವ ಸರ್ಕಾರಿ ರಾಮಣ್ಣ ಹಿರಿಯ ಪ್ರಾಥಮಿಕ ಶಾಲೆಗೆ ಶನಿವಾರ ವಾದ್ಯಗಳನ್ನು ತರಿಸಿದ ಹಿನ್ನೆಲೆಯಲ್ಲಿ ಮಾತನಾಡಿದ ಅವರು ಸರ್ಕಾರ ಹಾಗೂ ಸರ್ಕಾರೇತರ ಸಂಸ್ಥೆಗಳು ನೀಡುವ ಸವಲತ್ತುಗಳನ್ನು ಬಳಕೆ ಮಾಡಿಕೊಂಡು ಶೈಕ್ಷಣಿಕವಾಗಿ ಮುಂದೆ ಬರಬೇಕೆಂದು ಕರೆ ನೀಡಿದರು. ಜೆ.ಜೆ. ಟ್ಯುಟೋರಿಯಲ್ಸ್‌ನ ನಾರಾಯಣ ಶರ್ಮಾ, ರೆಡ್‌ಕ್ರಾಸ್ ಅಧ್ಯಕ್ಷ ಪಿಸಿಯೋ ಮಧು, ಶಾಲಾ ಮುಖ್ಯ ಶಿಕ್ಷಕ ಸೋಮಶೇಖರ್, ಸೇರಿದಂತೆ ಶಾಲಾ ಶಿಕ್ಷಕರು, ಎಸ್.ಡಿ.ಎಂ.ಸಿ. ಪದಾಧಿಕಾರಿಗಳು, ದಾನಿಗಳು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.