ಜಿಲ್ಲೆಯಾದ್ಯಂತ ಕ್ರಾಂತಿಯೋಗಿ ಸ್ಮರಣೆ
ಕನ್ನಡಪ್ರಭ ವಾರ್ತೆ ಹಾಸನ ಮೇ 2
ದಯವಿಲ್ಲದ ಧರ್ಮವದಾವುದಯ್ಯ,
ದಯವೇ ಬೇಕು ಸಕಲಪ್ರಾಣಿ ಗಳೆಲ್ಲದರಲ್ಲಿ
ದಯವೇ ಧರ್ಮದ ಮೂಲವಯ್ಯ,
ಕೂಡಲ ಸಂಗಯ್ಯನಂತಲ್ಲದೊಲ್ಲನಯ್ಯ...
... ಹೀಗೆ ಮನು ಕುಲಕ್ಕೆ ಮಹಾ ಮಾನವತವಾದವನ್ನು ಬಿತ್ತಿ, ಬೆಳಿಸಿದ ಸಮಾಜ ಸುಧಾಕರ, ಸಾಮಾಜಿಕ ಕ್ರಾಂತಿಯ ಹರಿಕಾರ ಶ್ರೀ ಜಗಜ್ಯೋತಿ ಬಸವೇಶ್ವರರ ಜಯಂತ್ಯೋತ್ಸವ ಹಾಸನ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಶುಕ್ರವಾರ ಸಡಗರ, ಸಂಭ್ರಮದಿಂದ ನಡೆಯಿತು. ನಾನಾ ಸಂಘಟನೆಗಳು ಜಯಂತ್ಯುತ್ಸವ ಆಚರಿಸುವ ಮೂಲಕ ಬಸವಣ್ಣನವರ ಸಂದೇಶ ಸಾರಿದರು.
ಹಾಸನ, ಬೇಲೂರು, ಸಕಲೇಶಪುರ, ಹೊಳೆನರಸೀಪುರ, ಅರಸೀಕೆರೆ, ಅರಕಲಗೂಡು ಮತ್ತು ಚನ್ನರಾಯಪಟ್ಟಣ ತಾಲೂಕುಗಳಲ್ಲಿ ಆಚರಿಸಲಾಯಿತು. ಹಾಸನ ನಗರದಲ್ಲಿ ಶ್ರೀ ಬಸವ ಜಯಂತಿ ಆಚರಣಾ ಸಮಿತಿ ಮತ್ತು ಶ್ರೀ ವೀರಶೈವ ಸಂಘದಿಂದ ಶ್ರೀ ಬಸವೇಶ್ವರ ಜಯಂತ್ಯುತ್ಸವವನ್ನು ವಿಜೃಂಭಣೆಯಿಂದ ನಡೆಯಿತು.
ಮಹಾ ಮಾನವತವಾದಿ ಶ್ರೀ ಜಗಜ್ಯೋತಿ ಬಸವೇಶ್ವರ ಜಯಂತ್ಯೋತ್ಸವವು ಶ್ರೀ ಬಸವೇಶ್ವರ ದೇವಸ್ಥಾನದಿಂದ ಅವರ ಭಾವಚಿತ್ರದೊಡನೆ ರಥೋತ್ಸವವು ಪ್ರಾರಂಭಗೊಂಡಿತು.
ಮೆರವಣಿಗೆಯು ನಗರದ ಅರಳೇಪೇಟೆ, ಸಹ್ಯಾದ್ರಿ ವೃತ್ತ, ಮಹಾವೀರ ವೃತ್ತ, ಕಸ್ತೂರಿ ಬಾ ರಸ್ತೆ, ಸುಭಾಷ್ ಚೌಕ, ಗಾಂಧಿಬಜಾರ್ ವೃತ್ತ, ಎನ್.ಆರ್. ವೃತ್ತ, ಹಳೇ ಬಸ್ ನಿಲ್ದಾಣದ ರಸ್ತೆ, ಹೇಮಾವತಿ ಪ್ರತಿಮೆ, ಮಹಾವೀರ ವೃತ್ತ, ಹೊಸಲೈನ್ ರಸ್ತೆ, ಬಸವೇಶ್ವರ ಬಡಾವಣೆ, ಕುಂಬಾರರ ಬೀದಿ, ಎಸ್ವಿಎಂ ಸ್ಕೂಲ್ ರಸ್ತೆ, ಅಡ್ಲಿ ಮನೆ ರಸ್ತೆ, ಹೊಸಲೈನ್ ರಸ್ತೆ ಮಾರ್ಗದಲ್ಲಿ ಸಾಗಿ ಬಂದು, ಕೊನೆಗೆ ಬಸವೇಶ್ವರ ದೇವಾಲಯಕ್ಕೆ ತಲುಪಿತು.
ಬೈಕ್ ರ್ಯಾಲಿ: ಇದೇ ವೇಳೆ, ಕಲಾತಂಡಗಳಾದ ನಂದೀಧ್ವಜ, ಕರಡಿವಾದ್ಯ, ನೃತ್ಯ ತಂಡ ಹಾಗೂ ಇತರೆ ಕಲಾತಂಡದೊಡನೆ ಅರಳೇಪೇಟೆ ರಸ್ತೆ, ಹೊಸಲೈನ್ ರಸ್ತೆ ಸೇರಿದಂತೆ ನಗರದ ಪ್ರಮುಖ ಭಾಗಗಳಲ್ಲಿ ಮೆರವಣಿಗೆ ಸಾಗಿತು. ಜೊತೆಗೆ ಬೈಕ್ ರ್ಯಾಲಿ ಕೂಡ ನಡೆಯಿತು.
ಇದಕ್ಕೂ ಮೊದಲು ಬೆಳಗ್ಗೆ ಬಸವೇಶ್ವರ ದೇವಾಲಯದಲ್ಲಿ ದೇವತಾಮೂರ್ತಿಗಳಿಗೆ ರುದ್ರಾಭಿಷೇಕ, ಮಹಾಪೂಜೆ, ಮಹಾಮಂಗಳಾರತಿ ಮಾಡಲಾಯಿತು.
ಶ್ರೀ ವೀರಶೈವ ಸಂಘದ ಅಧ್ಯಕ್ಷ ಬಿ.ಪಿ. ಐಸಾಮಿಗೌಡ, ಕಾರ್ಯದರ್ಶಿ ಬಿ.ಎಂ. ಭುವನಾಕ್ಷ, ಸಹ ಕಾರ್ಯದರ್ಶಿ ಕಟ್ಟಾಯ ಶಿವಕುಮಾರ್, ನಗರಸಭೆ ಮಾಜಿ ಸದಸ್ಯೆ ಅನ್ನಪೂರ್ಣ, ಯಡೂರು ಕುಮಾರ್, ಶೋಭಮಹೇಶ್ ಹಾಗೂ ಯತೀಶ್, ಬಿ.ಎಸ್. ಗುರುನಾಥ್, ಎಚ್. ಮಲ್ಲಿಕ್, ಎಚ್.ಆರ್. ಆರತಿ, ಯಡೂರು ಕುಮಾರ್, ಈ. ಎಂ. ರುದ್ರಕುಮಾರ್, ವೈ.ಎಸ್. ಸಿದ್ದಯ್ಯ, ಎಂ.ಬಿ. ವೀರಪ್ಪ ಹಾಗೂ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

