ನಗರಸಭೆ ಖಜಾನೆಗೆ ಬಂತು ರು. 12 ಲಕ್ಷ
ಕನ್ನಡಪ್ರಭ ವಾರ್ತೆ, ಹಾಸನ, ಮೇ 2
ನಗರಸಭೆಯ 3ನೇ ವಾರ್ಡ್ನಲ್ಲಿ ಇರುವ ಶಂಕರೀಪುರಂ ಉದ್ಯಾನವದ ವಾರ್ಡ್ ಕಚೇರಿಯಲ್ಲಿ ಮನೆ ಹಾಗೂ ನೀರಿನ ಕರ ವಸೂಲಿ ಕೇಂದ್ರವನ್ನು ಸಾರ್ವಜನಿಕರ ಅನುಕೂಲತೆಗಾಗಿ ಏ. 23ರಿಂದ 30ರವರೆಗೆ ತೆರೆದು, ರು. 12 ಲಕ್ಷ ಕಂದಾಯ ಸಂಗ್ರಹಿಸಲಾಯಿತು.
ಏಪ್ರಿಲ್ನಲ್ಲಿ ಪಾವತಿಸುವ ಆಸ್ತಿ ತೆರಿಗೆಗೆ ಶೇ. 5ರಷ್ಟು ರಿಯಾಯಿತಿ ಇರುವ ಹಿನ್ನೆಲೆಯಲ್ಲಿ ಪ್ರತಿ ವರ್ಷವೂ ಈ ಕರ ವಸೂಲಾತಿ ಕಾರ್ಯಕ್ರಮವನ್ನು ವಾರ್ಡ್ನ ನಗರಸಭಾ ಸದಸ್ಯ ಎಚ್.ಎಂ ಸುರೇಶ್ ಕುಮಾರ್ ನೇತೃತ್ವದಲ್ಲಿ ಹಾಗೂ ಎಕ್ಸಿಸ್ ಬ್ಯಾಂಕ್, ನಗರಸಭೆಯ ಅಧಿಕಾರಿಗಳ ಸಹಕಾರದಲ್ಲಿ ನಡೆಸಲಾಯಿತು.
ಇಲ್ಲಿ ಆಸ್ತಿ ತೆರಿಗೆಯ ಚಲನ್ಗಳನ್ನು ಉಚಿತವಾಗಿ ಭರ್ತಿ ಮಾಡಿಕೊಟ್ಟರೆ ಎಕ್ಸಿಸ್ ಬ್ಯಾಂಕ್ನ ಅಧಿಕಾರಿಗಳು ತೆರಿಗೆ ಹಣವನ್ನು ಸ್ಥಳದಲ್ಲಿಯೇ ಸ್ವೀಕರಿಸುತ್ತಿದ್ದರು. ಬ್ಯಾಂಕ್ ಹಾಗೂ ನಗರಸಭೆ ಚಲನ್ಗಳನ್ನು ಸಂಬಂಧಪಟ್ಟವರು ತೆಗೆದುಕೊಡು ಆಸ್ತಿ ಮಾಲಿಕರ ಚಲನ್ಗಳನ್ನು ತೆರಿಗೆ ಪಾವತಿಸಿದವರಿಗೆ ನೀಡಲಾಗುತ್ತಿತ್ತು. ನೀರಿನ ಕಂದಾಯವನ್ನು ಸಹ ಇದೇ ಸಂದರ್ಭದಲ್ಲಿ ಸ್ವೀಕರಿಸಲಾಯಿತು.
ನೀರಿನ ಕಂದಾಯ ಸಂಗ್ರಹ: 3ನೇ ವಾರ್ಡ್ನ ನಿವಾಸಿಗಳಷ್ಟೆಯಲ್ಲದೇ ಅಕ್ಕ ಪಕ್ಕದ ವಾರ್ಡ್ನ ತೆರಿಗೆದಾರರು ಕೂಡ ತೆರಿಗೆ ಪಾವತಿಸಿದ್ದು ವಿಶೇಷವಾಗಿತ್ತು. 3ನೇ ವಾರ್ಡ್ನ ಆಸ್ತಿ ತೆರಿಗೆಯಿಂದ ರು. 8 ಲಕ್ಷ ಪಾವತಿಸಿದರೆ ರು. 4.5 ಲಕ್ಷ ನೀರಿನ ಕಂದಾಯ ಸಂಗ್ರಹವಾಯಿತು.
ನಾಗರಿಕರ ಮೆಚ್ಚುಗೆ: ದೂರದ ನಗರಸಭೆಯ ಕಾರ್ಯಾಲಯಕ್ಕೆ ತೆರಳಿ ಚಲನ್ ಭರ್ತಿಗೆ ರು. 20 ಶುಲ್ಕ ನೀಡಿ ನಂತರ ಚಲನ್ಗಳನ್ನು ಭರ್ತಿ ಮಾಡಿಸಿಕೊಂಡು, ನಂತರ ಬ್ಯಾಂಕಿಗೆ ತೆರಳಿ ಉದ್ದದ ಸಾಲಿನಲ್ಲಿ ನಿಂತು ಕಂದಾಯ ಪಾವತಿಸಲು ಇಡೀ ದಿನ ಬೇಕಾಗುತ್ತಿತ್ತು.
ಆದರೆ ಶಂಕರೀಪುರಂನ ವಾರ್ಡ್ನ ಕಚೇರಿಯಲ್ಲೇ ಉಚಿತವಾಗಿ ತೆರಿಗೆ ಪಾವತಿಸಲು ವ್ಯವಸ್ಥೆ ಮಾಡಲಾಗುತ್ತಿದುದು ಪ್ರಶಂಶನೀಯ ಎಂದು ನಾಗರಿಕರು ಹೇಳಿದ್ದಾರೆ
ಈ ವ್ಯವಸ್ಥೆಗೆ ಕಾರಣರಾದ ಸದಸ್ಯ ಎಚ್.ಎಂ ಸುರೇಶ್ ಕುಮಾರ್ ಅವರಿಗೆ ಜನತೆ ಕೃತಜ್ಞತೆ ಸಲ್ಲಿಸಿದ್ದಾರೆ. ವಾರ್ಡ್ ಕಚೇರಿಯ ಆವರಣದಲ್ಲಿ ವಾಚನಾಲಯ ಮತ್ತು ಪಾರ್ಕ್ ಇರುವುದರಿಂದ ತೆರಿಗೆ ಪಾವತಿಸಲು ಬಂದಾಗ ದಿನಪತ್ರಿಕೆಗಳನ್ನು ಓದುವುದರೊಂದಿಗೆ ಹಾಗೂ ಪಾರ್ಕಿನಲ್ಲಿ ಮಕ್ಕಳನ್ನು ಆಟವಾಡಿಸುವುದರೊಂದಿಗೆ ಕಾಲ ಕಳೆಯಲೂ ಅನುಕೂಲಕರವಾಗಿದೆ ಎಂದು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

