ದೇಗುಲದಂತೆ ಮನವೂ ಸುಂದರವಾಗಿರಲಿ
ಬೇಲೂರು: ಕೇವಲ ದೇವಾಲಯಗಳನ್ನು ಸುಂದರವಾಗಿ ಕಟ್ಟಿಕೊಂಡರೆ ಸಾಲದು ನಮ್ಮ ಮನಸ್ಸು ಕೂಡ ನಿರ್ಮಲತೆಯಿಂದ ಕೂಡಿದಾಗ ಮಾತ್ರ ದೇವರಿಗೆ ಹತ್ತಿರವಾಗುತ್ತವೆ ಎಂದು ಶಾಸಕ ವೈ.ಎನ್. ರುದ್ರೇಶಗೌಡ ತಿಳಿಸಿದರು.
ತಾಲೂಕಿನ ಹೆಬ್ಬಾಳು ಗ್ರಾಮದ ದೊಡ್ಡಮ್ಮ ಹಾಗೂ ಚಿಕ್ಕಮ್ಮ ನೂತನ ದೇವಾಲಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ದೇವಾಲಯಗಳನ್ನು ಇಂದಿನ ಕಾಲಘಟ್ಟದಲ್ಲಿ ನಿರ್ಮಾಣ ಮಾಡುವದು ಬಲು ಕಷ್ಟದ ವಿಷಯ. ಜನರ ಆರ್ಥಿಕ ಪರಿಸ್ಥಿತಿ ಉತ್ತಮವಾಗಿದ್ದಾಗ ಮಾತ್ರ ಇಂಥ ಕಾರ್ಯಗಳಿಗೆ ಮುಂದಾಗಬಹುದಷ್ಟೇ ಎಂದು ಅವರು ಅಭಿಪ್ರಾಯಪಟ್ಟರು.
ನಂತರ, ಕುಡಿಯುವ ನೀರು ಸಮಸ್ಯೆ ಬಗ್ಗೆ ಮಾತನಾಡಿದ ಶಾಸಕರು, ತಾಲ್ಲೂಕಿನ ಹೆಬ್ಬಾಳು ಗ್ರಾಮಕ್ಕೆ ಬಹು ದಿನದ ಬೇಡಿಕೆಯಂತೆ ಯಗಚಿ ನೀರನ್ನು ಸದ್ಯದಲ್ಲಿ ನೀಡಲಾಗುತ್ತದೆ. ಗ್ರಾಮದ ಒಳರಸ್ತೆಗೆ ಡಾಂಬರೀಕರಣ ಸೇರಿದಂತೆ, ಇನ್ನೂ ಮುಂತಾದ ಕೆಲಸವನ್ನು ಹಂತಹಂತವಾಗಿ ಮಾಡಲಾಗುತ್ತದೆ ಎಂದರು.
ಮನೆಗಳಲ್ಲಿ ಶೌಚಾಲಯ ಬೇಕು: ತಾಲೂಕು ಪಂಚಾಯ್ತಿ ಸದಸ್ಯ ಪವರ್ತಯ್ಯ ಮಾತನಾಡಿ, ಗ್ರಾಮದಲ್ಲಿ ದೇವಾಲಯಗಳು ನಿರ್ಮಾಣವಾದಂತೆ, ಪ್ರತಿ ಮನೆ ಮನೆಯಲ್ಲಿ ಶೌಚಾಲಯಗಳನ್ನು ನಿರ್ಮಾಣ ಮಾಡಿದಾಗ ಮಾತ್ರ ಉತ್ತಮ ಆರೋಗ್ಯ ಪಡೆಯಲು ಸಾಧ್ಯವಾಗುತ್ತದೆ ಎಂದರು.
ದೇಗುಲಗಳಿಂದ ಬೆಳಕು: ಹೆಬ್ಬಾಳು ತಾಲೂಕು ಪಂಚಾಯ್ತಿ ಕ್ಷೇತ್ರಕ್ಕೆ ಬಹಳ ಅನುದಾನ ಅವಶ್ಯವಿದ್ದು, ಶಾಸಕರು ನಮ್ಮ ಕ್ಷೇತ್ರದ ಭಾಗಕ್ಕೆ ಗಮನ ನೀಡಬೇಕು ಎಂದ ಅವರು, ದೇವಾಲಯಗಳು ಗ್ರಾಮದ ಮುಖ್ಯ ಸಾಂಸ್ಕೃತಿಕ ಕೇಂದ್ರವಾಗಬೇಕು. ಜನರಲ್ಲಿ ಇರುವ ಅಂಧಕಾರ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ಆಶಿಸಿದರು.
ಕುಡಿಯುವ ನೀರಿಗೆ ಪರದಾಟ: ಉಪನ್ಯಾಸ ಮಾಡಿದ ಶಿಕ್ಷಕ ಎಚ್.ಎನ್. ಧನಂಜಯ ಮಾತನಾಡಿ, ಪಟ್ಟಣದ ಪ್ರದೇಶದ ಜನರಂತೆ ಗ್ರಾಮೀಣ ಪ್ರದೇಶದ ಜನರು ಕೂಡ ಹಣ ಹಿಂದೆ ಬಿದ್ದಿದ್ದಾರೆ, ಈ ದಿಸೆಯಲ್ಲಿ ತಮ್ಮ ಮಕ್ಕಳಿಗೆ ವಿಷಪೂರಿತ ಆಹಾರ ನೀಡುತ್ತಿದ್ದಾರೆ.
ಹಳ್ಳಿಗಾಡಿನಲ್ಲಿ ಜಲ ಕ್ಷಾಮ ದಿನದಿಂದ ದಿನಕ್ಕೆ ತಾರಕಕ್ಕೆ ಏರಿಕೆ ಕಂಡು ಕುಡಿಯುವ ನೀರಿಗಾಗಿ ಜನರು ಪರದಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ದೇವರನ್ನು ಪೂಜಿಸುವ ಬಹುತೇಕ ಜನರು ಬೂಟಾಟಿಕೆಯನ್ನು ಹೊಂದಿದ್ದಾರೆ. ತೋರಿಕೆಯ ಭಕ್ತಿ ಎಂದಿಗೂ ದೇವರನ್ನು ಮೆಚ್ಚಿಸುವುದಿಲ್ಲ ಎಂದರು.
ಈ ಸಂದರ್ಭದಲ್ಲಿ ಗುತ್ತಿಗೆದಾರ ಎಚ್.ಜಿ. ಭುವನೇಶ್, ದಲಿತ ಮುಖಂಡ ದೊರೆಯಪ್ಪ ಹಾಗೂ ಪತ್ರಕರ್ತ ಹೆಬ್ಬಾಳು ಹಾಲಪ್ಪ ಮತನಾಡಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಪಂಚಾಯ್ತಿ ಅಧಿಕಾರಿ ರುದ್ರೇಶಣ್ಣ, ಗ್ರಾಮ ಪಂಚಾಯ್ತಿ ಸದಸ್ಯರಾದ ವಿಘ್ನೇಶಯ್ಯ, ಗೋಪಾಲ್, ಬಸವೇಗೌಡ, ಅಂಗಡಿ ಬಸವರಾಜು, ಲಕ್ಷ್ಮಣ್, ಸಿಂಧಿಗೆರೆ ಪುಟ್ಟಯ್ಯ, ಚಂದ್ರಯ್ಯ, ಜಗದೀಶ್ ಹಾಗೂ ಇತರರುಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

