ಹಾಸನ

30ರಂದು ಸಾಮೂಹಿಕ ಬ್ರಹ್ಮೋಪದೇಶ

Published On :

ಹಾಸನ: ನಗರ ಬ್ರಾಹ್ಮಣ ಸಭಾ, ಶೃಂಗೇರಿ ಶಂಕರಮಠದ ಸಹಯೋಗದಲ್ಲಿ  ಮೇ 30ರಂದು ಬೆಳಗ್ಗೆ 8.40ರಿಂದ 9ರೊಳಗೆ ಸ್ಥಳೀಯ ಮತ್ತು ಪರಸ್ಥಳೀಯ ವೈದೀಕರುಗಳ ಆಚಾರ್ಯತ್ವದಲ್ಲಿ ಸಾಮೂಹಿಕ ಬ್ರಹ್ಮೋಪದೇಶ ಕಾರ್ಯಕ್ರಮವನ್ನು ನಗರದ ಶಂಕರಮಠದಲ್ಲಿ ಏರ್ಪಡಿಸಲಾಗಿದೆ.
ಬ್ರಹ್ಮೋಪದೇಶ ಬಯಸುವ ವಟುಗಳ ಹೆಸರನ್ನು ಮೇ 20ರ ಸಂಜೆ 5ರೊಳಗಾಗಿ ವೈದಿಕ ಭವನದಲ್ಲಿ ಇರುವ ಹಾಸನ ನಗರ ಬ್ರಾಹ್ಮಣ ಸಭಾ ಕಾರ್ಯಾಲಯದಲ್ಲಿ ಅಥವಾ ಶೃಂಗೇರಿ ಶಂಕರಮಠದ ಕಾರ್ಯಾಲಯದಲ್ಲಿ ನೋಂದಾಯಿಸಬೇಕು.
ಸಾಮೂಹಿಕ ಉಪನಯನ ಕಾರ್ಯಕ್ರಮದ ನಂತರ ವಟುಗಳಿಗೆ 15 ದಿನದ ಮಟ್ಟಿಗೆ ಸಂಧ್ಯಾವಂದನೆ ಮಾಡುವ ಕ್ರಮವನ್ನು ಹೇಳಿಕೊಡಲು ಏರ್ಪಾಡು ಮಾಡಲಾಗುವುದು. ಆಸಕ್ತರು ಹೆಚ್ಚಿನ ವಿವರಗಳಿಗೆ 08172- 262022, 250022, 9880968879,  260101, 9448867196, 9844550246, 9448346481 ಸಂಪರ್ಕಿಸಬಹುದು.

ನಂಜನಗೂಡು ದೇವಸ್ಥಾನಕ್ಕೆ ಬೆಳ್ಳಿ ಬಾಗಿಲು ಜೋಡಣೆ
ನಂಜನಗೂಡು: ದಕ್ಷಿಣಕಾಶಿ ಶ್ರೀಕಂಠೇಶ್ವರಸ್ವಾಮಿ ದೇಗುಲದಲ್ಲಿರುವ ಸ್ವಾಮಿಯವರ ಗರ್ಭಗುಡಿಯ ಪ್ರವೇಶ ದ್ವಾರದ ಬಾಗಿಲನ್ನು ಶನಿವಾರ ಬೆಳ್ಳಿಯ ಬಾಗಿಲನ್ನಾಗಿ ಮಾರ್ಪಡಿಸಲಾಯಿತು. ಬೆಂಗಳೂರಿನ ಉದ್ಯಮಿ ಸಿ. ಅಜಯ್ಕುಮಾರ್ ತಮ್ಮ ಹರಕೆಯನ್ನು ಶ್ರೀಕಂಠನಿಗೆ ಸಮರ್ಪಿಸಲು ಅಂದಾಜು 15 ಲಕ್ಷ ವೆಚ್ಚದಲ್ಲಿ 24 ಕೆ.ಜಿ ಬೆಳ್ಳಿಯನ್ನು ಉಪಯೋಗಿಸಲಾಯಿತು. ತಮಿಳುನಾಡು ರಾಜ್ಯದ ಮಧುರೈನ ಅಳಗಿರಿಯವರ ತಂಡ ಪರಿಶ್ರಮದಿಂದ ಈ ಬೆಳ್ಳಿ ಬಾಗಿಲನ್ನು ವಿನ್ಯಾಸಗೊಳಿಸಿದೆ.

ದಾಸಿಮಯ್ಯ ಜಯಂತ್ಯುತ್ಸವ ಇಂದು
ಹಾಸನ: ರಮ್ಯಕಲಾರಂಗದ ವತಿಯಿಂದ ಮೇ 11ರಂದು ಬೆಳಗ್ಗೆ 10.30ಕ್ಕೆ ನಗರದ ಕಲಾಭವನದಲ್ಲಿ ಆದ್ಯ ವಚನಕಾರ ಶ್ರೀ ದೇವರ ದಾಸಿಮಯ್ಯನವರ 1034 ನೇ ಜಯಂತ್ಯುತ್ಸವ ಹಾಗೂ ಸಾಂಸ್ಕತಿಕ ಹಬ್ಬ ಹಮ್ಮಿಕೊಳ್ಳಲಾಗಿದೆ. ಗಾಯಿತ್ರಿಪೀಠ ಮಹಾಸಂಸ್ಥಾನ, ಹಂಪಿಯ ಪೂಜ್ಯ ಶ್ರೀ ದಯಾನಂದಪುರಿ ಸ್ವಾಮೀಜಿ   ಸಾನಿದ್ಯ ವಹಿಸುವರು, ಸಂಗಮೇಶ್ವರ ಸ್ವಾಮೀಜಿ ನೇತೃತ್ವ ವಹಿಸುವರು. ಶಾಸಕ ಎಚ್.ಎಸ್.ಪ್ರಕಾಶ್ ಅಧ್ಯಕ್ಷತೆ ವಹಿಸುವರು, ಎಸ್.ಆರ್. ಪಾಟೀಲ್ ಉದ್ಘಾಟಿಸುವರು, ಮುಖ್ಯ ಅತಿಥಿಗಳಾಗಿ ಹರಿಕೃಷ್ಣ ಪುನರೂರು, ಎಸ್.ಎಂ. ಆನಂದ್, ನವಿಲೆ ಅಣ್ಣಪ್ಪ ಭಾಗವಹಿಸುವರು. ಡಾ. ಪಿ.ಕೆ. ರಾಜಶೇಖರ್ ದಾಸಿಮಯ್ಯ ಕುರಿತು ವಿಶೇಷ ಉಪನ್ಯಾಸ ನೀಡುವರು. ಸಂಜೆ 4ಕ್ಕೆ ಎಚ್.ರಾಮಣ್ಣ ನಿರ್ದೇಶನದ ಎನ್.ಎಸ್.ರಾವ್ ವಿರಚಿತ ವಿಷಜ್ವಾಲೆ ನಾಟಕವಿದೆ. ನಂತರ ನಾನಾ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಸಾಧಕರನ್ನು ಸಂಜೆ 5ಕ್ಕೆ ಸನ್ಮಾನ ಕಾರ್ಯಕ್ರಮದಲ್ಲಿ ಗೌರವಿಸಲಾಗುವುದು.

ಕಣ್ಣಿನ ಉಚಿತ ತಪಾಸಣೆ
ಹಾಸನ: ವಿಶ್ವ ತಾಯಂದಿರ ೊದಿನಾಚರಣೆಯ ಪ್ರಯುಕ್ತ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಮೇ 11ರಿಂದ ಮೇ 31ರವರೆಗೆ ವಾಸನ್ ಕಣ್ಣಿನ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 9ರಿಂದ ಸಂಜೆ 6ರವರೆಗೆ (ಭಾನುವಾರ ಹೊರತುಪಡಿಸಿ) ತಪಾಸಣೆ ಮಾಡಿಸಿಕೊಳ್ಳಬಹುದು. ಜಿಲ್ಲೆಯ ಎಲ್ಲಾ ತಾಯಂದರಿಗೆ ನುರಿತ ವೈದ್ಯರಿಂದ ಉಚಿತ ಕಣ್ಣಿನ ತಪಾಸಣೆ ಮಾಡಿ ಕನ್ನಡಕಗಳ ಮೇಲೆ ಶೇ. 10ರಷ್ಟು ರಿಯಾಯ್ತಿ ಮತ್ತು ಶಸ್ತ್ರ ಚಿಕಿತ್ಸೆಗಳ ಮೇಲೆ ಶೇ. 10ರಷ್ಟು ರಿಯಾಯ್ತಿ ಹಾಗೂ  ಕಣ್ಣಿನನ ಪೊರೆ ಶಾಸ್ತ್ರ ಚಿಕಿತ್ಸೆ ಮತ್ತು ಲ್ಯಾಸಿಕ್ ಶಸ್ತ್ರ ಚಿಕಿತ್ಸೆಗೆ ಒಳಪಡುವವರಿಗೆ ಪರೀಕ್ಷಾ ಸೌಲಭ್ಯ  ಒದಗಿಸುತ್ತದೆ.

ಕಳಸ ಪ್ರತಿಷ್ಠಾಪನೆ ಇಂದು
ಅರಸೀಕೆರೆ: ತಾಲೂಕಿನ ಬಾಣಾವರ ಹೋಬಳಿ ಕೆಂಕೆರೆಹಳ್ಳಿ ಗ್ರಾಮದ ಪಾರ್ವತಿ ದೇವಿ ದೇವಸ್ಥಾನದ ನೂತನ ಶಿಖರದ ಕಳಸ ಸ್ಥಾಪನೆ ಹಾಗೂ 108 ಕುಂಭಾಭಿಷೇಕ ಮಹೋತ್ಸವವು ಮೇ 11ರಂದು ನಡೆಯಲಿದೆ. ಇದರ ಅಂಗವಾಗಿ ಧಾರ್ಮಿಕ ಸಮಾರಂಭವನ್ನು ಏರ್ಪಡಿಸಲಾಗಿದ್ದು, ಇದರ ದಿವ್ಯ ಸಾನಿಧ್ಯವನ್ನು ಕೆರಗೋಡಿ ರಂಗಾಪುರ ಮಠದ ಗುರುಪರದೇಶಿಕೇಂದ್ರ ಸ್ವಾಮೀಜಿ, ಯಳನಡು ಜಗದ್ಗುರು ಸಿದ್ದರಾಮ ದೇಶಿಕೇಂದ್ರ ಸ್ವಾಮೀಜಿ, ತಮಡಿಹಳ್ಳಿ ಕುಪ್ಪೂರು ವಿರಕ್ತಮಠದ ಡಾ. ಅಭಿನವ ಮಲ್ಲಿಕಾರ್ಜುನ ದೇಶಿಕೇಂದ್ರ ಸ್ವಾಮೀಜಿ, ಕೋಳಗುಂದ ಕೇದಿಗೆ ಮಠದ ಜಯಚಂದ್ರಶೇಖರ ಸ್ವಾಮೀಜಿ, ಮಾರಗೊಂಡನಹಳ್ಳಿ ವಿರಕ್ತ ಮಠದ ಬಸವಲಿಂಗ ಶಿವಯೋಗಿ ಸ್ವಾಮೀಜಿ ವಹಿಸಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.