ಹಾಸನ

'ಅಂತರ್ಜಲದ ಮರುಪೂರಣ ವ್ಯವಸ್ಥೆಯಾಗಬೇಕು'

Published On :

ಜಾವಗಲ್: ಜಲಕ್ಷಾಮಕ್ಕೆ ಒಳಗಾಗಿರುವ ಬೇಲೂರು, ಅರಸೀಕೆರೆ, ತಿಪಟೂರು ತಾಲೂಕಿನ ಕಸಬಾ,  ಹೊನ್ನವಳ್ಳಿ ಹೋಬಳಿಗಳಿಗೆ ಯಗಚಿ ನೀರನ್ನು ಹರಿಸಿದರೆ,  ಕೆರೆ-ಕಟ್ಟೆಗಳು ತುಂಬಿ ಅಂತರ್ಜಲದ ಮರುಪೂರಣ ಆಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನಾ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಯೋಗೀಶ್ವರ ಸ್ವಾಮಿ ತಿಳಿಸಿದರು. ಜಾವಗಲ್ ಸಮೀಪದ ಕೋಳಗುಂದ ಗ್ರಾಮಕ್ಕೆ ಈ ಸಮಿತಿ ಭೇಟಿ ನೀಡಿ ರೈತರೊಂದಿಗೆ ಮಾತನಾಡಿ, ಏತ ನೀರಾವರಿಯಿಂದ ವೃಥಾ ಹಣ ಪೋಲಾಗುತ್ತದೆ.  ಬೇಲೂರು, ಅರಸೀಕೆರೆ, ತಿಪಟೂರು ತಾಲೂಕಿನ 64 ಕೆರೆಗಳಿಗೆ ತೆರೆದ ಕಾಲುವೆ ಮೂಲಕ ನೀರು ಹರಿಸಬಹುದು. ಯಗಚಿ ನದಿ ಕಟ್ಟೆಗಿಂತ 100 ಅಡಿ ಕೆಳಗಿದೆ ಈ ಯೋಜನೆ ಅನುಷ್ಠಾನಕ್ಕೆ ಬರುವುದರಿಂದ 3 ತಾಲೂಕಿನ 5 ಲಕ್ಷ ಜನರಿಗೆ 30 ಲಕ್ಷ ಜಾನುವಾರುಗಳಿಗೆ ಅನುಕೂಲವಾಗುವುದು. 300 ಹಳ್ಳಿಗಳ ಅಂತರ್ಜಲ ಹೆಚ್ಚಿ ಕುಡಿಯುವ ನೀರಿನ ಬವಣೆ ತಪ್ಪುತ್ತದೆ ಎಂದರು. ರೈತ ಮುಖಂಡ ನಂಜುಂಡಪ್ಪ ಷಡಾಕ್ಷರ ಸ್ವಾಮಿ, ಮಂಜುನಾಥ್, ನಾಗರಾಜು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.