ವಿದೇಶಗಳಲ್ಲೂ ಕರವೇ ಸಂಘಟನಾ ಶಕ್ತಿ
ಕ.ಪ್ರ.ವಾರ್ತೆ ಅರಸೀಕೆರೆ ಮೇ 13
ಕನ್ನಡ ನಾಡಿನ ನೆಲ- ಜಲ ಹಾಗೂ ನಾಡು- ನುಡಿಯ ಸಂರಕ್ಷಣೆಗಾಗಿ ನಾರಾಯಣಗೌಡರು ಅಂದು ಹುಟ್ಟು ಹಾಕಿದ ಕರ್ನಾಟಕ ರಕ್ಷಣಾ ವೇದಿಕೆ ಇಂದು ದೇಶದಾದ್ಯಂತ ಬೃಹತ್ ಹೆಮ್ಮರವಾಗಿ ಬೆಳೆದು ವಿದೇಶಗಳಲ್ಲೂ ಸಂಘಟನೆ ಶಕ್ತಿಯಾಗಿ ಹೊರಹೊಮ್ಮಿರುವುದು ಅತ್ಯಂತ ಸಂತಸದ ಸಂಗತಿ ಎಂದು ಹಾಸನ ಜಿಲ್ಲಾ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಮನುಕುಮಾರ್ ತಿಳಿಸಿದರು.
ಪಟ್ಟಣದ ಮೈಸೂರು ರಸ್ತೆಯಲ್ಲಿನ ಹೊರವಲಯದ ಹಳ್ಳಿಮನೆಯಲ್ಲಿ ಸೋಮವಾರ ಆಯೋಜಿಸಿದ್ದ ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿ, 14 ವರ್ಷಗಳಿಂದ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ರಾಜ್ಯ ಕರವೇ ಸಂಘಟನೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಅವರ ಮಾರ್ಗದರ್ಶನದಲ್ಲಿ ಕನ್ನಡ ಭಾಷೆಯ ಉಳಿವಿಗಾಗಿ ಅನೇಕ ಜನಪರ ಹೋರಾಟಗಳನ್ನು ಇದುವರೆಗೂ ನಡೆಸಿಕೊಂಡು ಬಂದಿದೆ. ಕನ್ನಡಿಗರಿಗೆ ಯಾವುದೇ ಅನ್ಯಾಯ ಉಂಟಾದಾಗ ಮೊಟ್ಟ ಮೊದಲಿಗೆ ಧ್ವನಿ ಎತ್ತಿ ಹೋರಾಟ ಮಾಡಿದ ಸಂಘಟನೆ ಎಂಬ ಹೆಗ್ಗಳಿಕೆಯನ್ನು ತಮ್ಮ ಸಂಘಟನೆ ಹೊಂದಿದೆ ಎಂದರು. ರಾಜ್ಯದ ಪ್ರತಿಯೊಂದು ಜಿಲ್ಲೆ ಮತ್ತು ತಾಲೂಕುಗಳಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ನಿಷ್ಠಾವಂತ ಕಾರ್ಯಕರ್ತರನ್ನು ಹೊಂದಿದ್ದು, ದೇಶದ ಅನೇಕ ರಾಜ್ಯಗಳಲ್ಲಿ ನೂರಾರು ಶಾಖೆಗಳನ್ನು ತಮ್ಮ ಸಂಘಟನೆ ಹೊಂದಿದೆ. ಅಲ್ಲದೆ ಇತ್ತೀಚಿನ ವರ್ಷಗಳಲ್ಲಿ ವಿದೇಶದಲ್ಲಿ ಕೂಡ ಕರವೇ ತನ್ನ ಸಂಘಟನೆಯ ಜಾಲವನ್ನು ಬೆಳೆಸಿಕೊಂಡಿರುವುದು ಹರ್ಷದ ಸಂಗತಿ ಎಂದರು.
ಶಕ್ತಿಯುತ ಸಂಘಟನೆ: ಅರಸೀಕೆರೆ ತಾಲೂಕು ಘಟಕದ ಅಧ್ಯಕ್ಷ ಹೇಮಂತ್ ಕುಮಾರ್ ಮಾತನಾಡಿ, ಅರಸೀಕೆರೆ ತಾಲೂಕು ವ್ಯಾಪ್ತಿಯಲ್ಲಿ ಕರವೇ 150ಕ್ಕೂ ಹೆಚ್ಚು ಗ್ರಾಮಗಳಲ್ಲಿ ಘಟಕಗಳು ಸ್ಥಾಪಿತವಾಗಿದ್ದು ಭ್ರಷ್ಟಾಚಾರದ ವಿರುದ್ಧ, ರೈತರ ಪರವಾಗಿ, ವಿದ್ಯಾರ್ಥ್ಥಿಗಳೊಂದಿಗೆ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದು, ಅನೇಕ ಕೂಲಿ ಕಾರ್ಮಿಕರ, ದೀನ ದಲಿತರ ಕಷ್ಟ- ಕಾರ್ಪಣ್ಯಗಳಿಗೆ ಸದಾ ಬೆನ್ನೆಲುಬಾಗಿ ನಿಂತಿರುವ ಏಕೈಕ ಶಕ್ತಿಯುತ ಸಂಘಟನೆ ನಮ್ಮದಾಗಿದೆ ಎಂದರು.
ನಿರಂತರ ಕಾರ್ಯಕ್ರಮಗಳು: ರಕ್ತದಾನ, ನೇತ್ರದಾನ, ಆರೋಗ್ಯ ತಪಾಸಣೆ, ಪಲ್ಸ್ ಪೋಲಿಯೋ ಕಾರ್ಯಕ್ರಮಗಳು, ಸಾಂಸ್ಕೃತಿಕ ಚಟುವಟಿಕೆ ನಗೆಹಬ್ಬ, ಅದ್ಧೂರಿ ರಾಜ್ಯೋತ್ಸವಗಳು ನಿರಂತರವಾಗಿ ಆಯೋಜಿಸಿದ್ದು ನಾನಾ ಘಟಕಗಳಿಂದ 2000ಕ್ಕೂ ಹೆಚ್ಚು ಪದಾಧಿಕಾರಿಗಳು ನಿರಂತರವಾಗಿ ಸಂಘಟನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಉಪಾಧ್ಯಕ್ಷ ಲೋಕೇಶ್, ಹರೀಶ್ ಗೌಡ, ಜಿಲ್ಲಾ ವಕ್ತಾರ ರಾಜಣ್ಣ, ಗೌರವಾಧ್ಯಕ್ಷ ಲಕ್ಷ್ಮೀಶ್, ನಗರಾಧ್ಯಕ್ಷ ಕಿರಣ್ ಕುಮಾರ್, ಕಾರ್ಯದರ್ಶಿ ರಘು, ತಾಲೂಕು ಪ್ರಧಾನ ಕಾರ್ಯದರ್ಶಿ ರವಿಶಂಕರ್ ಶಿವಾಳ, ಉಪಾಧ್ಯಕ್ಷ ಮುರುಂಡಿ ಗಂಗಾಧರ್ ಹಾಗೂ ಇತರರು ಇದ್ದರು.
ನೂತನ ಪದಾಧಿಕಾರಿಗಳ ನೇಮಕ
ಕರವೇ ಪದಾಧಿಕಾರಿಗಳ ಸಭೆಯಲ್ಲಿ, ನಾನಾ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ತಾಲೂಕಿನ ಗ್ರಾಮಾಂತರ ಅಧ್ಯಕ್ಷರಾಗಿ ತುಂಬಾಪುರ ನವೀನ್, ನಗರ ಉಪಾಧ್ಯಕ್ಷರಾಗಿ ವಾಸು, ವಕೀಲ ಘಟಕದ ಅಧ್ಯಕ್ಷರಾಗಿ ಶ್ರೀಕಾಂತ್ ಪ್ರಕಾಶ್, ಕಸಬಾ ಹೋಬಳಿ ಅಧ್ಯಕ್ಷರಾಗಿ ಕಿರಣ್, ಕಣಕಟ್ಟೆ ಹೋಬಳಿ ಅಧ್ಯಕ್ಷರಾಗಿ ಗೋವಿಂದ, ವಿದ್ಯಾರ್ಥಿ ಘಟಕದ ಸಂಚಾಲಕನಾಗಿ ಕಣಕಟ್ಟೆ ಮಂಜು, ಮಾಧ್ಯಮ ಪ್ರತಿನಿಧಿಯಾಗಿ ಕಣಕಟ್ಟೆ ಕುಮಾರ್, ಆಟೋ ಚಾಲಕರ ಅಧ್ಯಕ್ಷರಾಗಿ ರಮೇಶ್, ಜೆ.ಸಿ. ಪುರದ ನಿಸಾರ್ ಅಹಮದ್, ಮೊಹಿದ್ದೀನ್, ಮಂಜುನಾಥ್ ಅವರನ್ನು ಆಯ್ಕೆ ಮಾಡಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

