ಉತ್ತಮ ಬದುಕಿಗೆ ಶಿವದೀಕ್ಷೆ ಪೂರಕ
ರಾಮನಾಥಪುರ: ಭಾರತೀಯ ಸಂಸ್ಕೃತಿಯಲ್ಲಿ ವೀರಶೈವ ಧರ್ಮದ ಅಚರಣೆಗಳು ಅದರ್ಶಪ್ರಾಯ ಎಂದಿರುವ ಶಿರದನಹಳ್ಳಿ ಬಸವಕಲ್ಯಾಣ ಮಠದ ಶ್ರೀ ಸಿದ್ದಲಿಂಗಸ್ವಾಮೀಜಿ, ವೀರಶೈವ ಧರ್ಮದಲ್ಲಿ ವಟುಗಳಿಗೆ ನೀಡುವ ಶಿವದೀಕ್ಷಾ ಸಂಸ್ಕಾರ ಅವರ ಮುಂದಿನ ಬದುಕು ಉತ್ತಮವಾಗಿ ನಡೆಸಲು ಸಹಾಯಕ ಎಂದರು.
ಕೊಣನೂರು ಹೋಬಳಿ ಶಂಕರೀಪುರ (ಬನ್ನೂರು ಸಂತೆಮಾಳ) ಗ್ರಾಮದಲ್ಲಿ ಇತ್ತೀಚೆಗೆ ಶ್ರೀ ಮಲ್ಲೇಶ್ವರ ದೇವರ ಉತ್ಸವ, ಮತ್ತು ರುದ್ರಾಭಿಷೇಕ ಪೂಜಾ ಕೈಂಕರ್ಯಗಳ ಸಂದರ್ಭದಲ್ಲಿ ವೀರಶೈವ ಸಮಾಜದ ವಟುಗಳಿಗೆ ಶಿವದೀಕ್ಷಾ ಸಂಸ್ಕಾರ ಮತ್ತು ಸಾಮೂಹಿಕ ಇಷ್ಟಲಿಂಗಪೂಜಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಮಾನವನಾಗಿ ದೈವತ್ವ: ಲಿಂಗಪೂಜೆಯಲ್ಲಿ ಓಂನಮಃ ಶಿವಾಯಃ ಎಂಬ ಪ್ರಣವ ಮಂತ್ರವನ್ನು ಭಜಿಸುವ ಮೂಲಕ ಓಂಕಾರದ ಉಸಿರಾಟದ ಹತೋಟಿ ಮಾಡಬಹುದು. ಹೀಗೆ ಪ್ರತಿ ದಿವಸ ಬೆಳಿಗ್ಗೆ ಮತ್ತು ಸಂಜೆ ಇಷ್ಟಲಿಂಗ ಪೂಜೆ ಮಾಡುವ ಮೂಲಕ ದೇಹದಲ್ಲಿನ ಕ್ಲೇಶಗಳು ಹಾಗೂ ಭವರೋಗ ಅಳಿದು ಮನುಷ್ಯ ಮಾನವನಾಗಿ, ದೇವನಾಗುತ್ತಾನೆ ಎಂದು ಲಿಂಗದ ಮಹತ್ವವನ್ನು ಲಿಂಗ ಪಡೆದ ವಟುಗಳಿಗೆ ಶಿರದನಹಳ್ಳಿ ಶ್ರೀಗಳು ಬೋಧಿಸಿದರು.
ಮುದ್ದಿನಕಟ್ಟೆ ಮಠದ ಶ್ರೀ ಶ್ರೀ ಸಿದ್ದವೀರ ಶಿವಾಚಾರ್ಯ ಸ್ವಾಮೀಜಿ, ಶ್ರೀ ಅಭಿನವ ಸಿದ್ದಲಿಂಗಶಿವಾಚಾರ್ಯ ಸ್ವಾಮೀಜಿ ಕೆಸವತ್ತೂರು ಮಠ ಬಸವರಾಜೇಂದ್ರ ಸ್ವಾಮೀಜಿ, ಸೋಮವಾರಪೇಟೆ ಕೆ.ಪಿ. ಯೋಗೇಶಶಾಸ್ತ್ರಿ ಆಶೀರ್ವಚನ ನೀಡಿದರು.
ದೇವಸ್ಥಾನದ ಸಮಿತಿಯ ಕೆ.ಬಿ. ಸೋಮಣ್ಣ, ಬಿಎಸ್. ಶಿವಣ್ಣ, ಎಸ್.ಎನ್. ಶಿವಣ್ಣ, ಬಿ.ಎಸ್. ಚಿದಾನಂದ, ಜಿ.ಎನ್. ಶಿವಣ್ಣ, ಎಸ್.ಎನ್. ಚಂದ್ರಶೇಖರಯ್ಯ, ಎಸ್.ಎನ್. ಸಂತೋಷ್, ತಮ್ಮಯ್ಯ, ಧರ್ಮಣ್ಣ, ಬಸವಪಟ್ಟಣ ಟಿ.ಎಸ್. ಚಂದ್ರಶೇಖರಯ್ಯ, ರಾಮನಾಥಪುರ ಹೋಬಳಿ ವಿಶ್ವ ವೀರಶೈವ- ಲಿಂಗಾಯಿತ ಮಹಾ ವೇದಿಕೆ ಗೌರವ ಅಧ್ಯಕ್ಷ ಬಸವಪಟ್ಟಣ ಕಾಫಿಪುಡಿ ಶಂಕರಪ್ಪ, ಅಧ್ಯಕ್ಷ ಪಶುಪತಿ ಸೋಮಶೇಖರ್, ತಾಲ್ಲೂಕು ವೇದಿಕೆ ಅಧ್ಯಕ್ಷ ಕುಮಾರಸ್ವಾಮಿ, ಕಾರ್ಯದರ್ಶಿ ಬಿ.ಎನ್. ಪುಟ್ಟಸ್ವಾಮಿ, ಕೊಣನೂರು ಹೋಬಳಿ ಅಧ್ಯಕ್ಷ ಈರಪ್ಪ, ಸದಸ್ಯ ಎಸ್.ಎಸ್. ಹರೀಶ್ ಮುಂತಾದವರು ಭಾಗವಹಿಸಿದ್ದರು. ಹರೀಶ್ ಸ್ವಾಗತಿಸಿ ಕುಮಾರಸ್ವಾಮಿ ವಂದಿಸಿದರು.
ಸೋಮವಾರಪೇಟೆ ಕೆ.ಪಿ. ಯೋಗೇಶಶಾಸ್ತ್ರಿ ಪೂಜಾ ಕೈಂಕರ್ಯ ನಡೆಸಿಕೊಟ್ಟರು.
ಪೂಜಾ ಸಾಮಗ್ರಿ ಕೊಡುಗೆ
ವಿಶ್ವ ವೀರಶೈವ- ಲಿಂಗಾಯಿತ ಮಹಾ ವೇದಿಕೆ ರಾಷ್ಟ್ರಾಧ್ಯಕ್ಷ ಹಾಗೂ ಬೆಂಗಳೂರು ಅನೇಕಲ್ ತಾಲೂಕು ರಾಜಾಪುರ ಮಠದ ನಟರಾಜ್ ಅವರು, 50 ವಟುಗಳಿಗೆ ಶಿವದೀಕ್ಷಾ ಸಂಸ್ಕಾರದ ಕರಡಿಗೆ, ಲಿಂಗು, ಪಂಚೆ, ಟವಲ್ ಮುಂತಾದ ಶಿವದೀಕ್ಷಾ ಸಾಮಗ್ರಿಗಳನ್ನು ಉಚಿತವಾಗಿ ನೀಡಿದರು. ನಂತರ, ನಟರಾಜ್ ಅವರಿಗೆ ದೇವಸ್ಥಾನದ ಸಮಿತಿ ವತಿಯಿಂದ ಕೆ.ಬಿ. ಸೋಮಣ್ಣ ಮುಂತಾದವರು ಅಭಿನಂದನೆ ಸಲ್ಲಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

