ಹೊಳೆನರಸೀಪುರಕ್ಕೆ ಶೇ. 93 ಫಲಿತಾಂಶ
ಹೊಳೆನರಸೀಪುರ: ಪ್ರಸಕ್ತ ಸಾಲಿನಲ್ಲಿ ನಡೆದ ಎಸ್ಸೆಸ್ಲೆಲ್ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಉತ್ತಮ ಫಲಿತಾಂಶ ದೊರೆತಿದ್ದು, ಪರೀಕ್ಷೆಗೆ ಹಾಜರಾಗಿದ್ದ ಒಟ್ಟು 2897ವಿದ್ಯಾರ್ಥ್ಥಿಗಳಲ್ಲಿ 2671ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಈ ಬಾರಿ ತಾಲೂಕಿನ ವಿದ್ಯಾರ್ಥಿಗಳು ಶೇ. 93 ಫಲಿತಾಂಶ ತರುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಿವಮಾದಪ್ಪ ತಿಳಿಸಿದ್ದಾರೆ.
ಕಳೆದ ಸಾಲಿನಲ್ಲಿಯೂ ಶೇ.93 ಶೇಕಡಾವಾರು ಫಲಿತಾಂಶ ಪಡೆದಿದ್ದ ತಾಲೂಕು, ಈ ಬಾರಿಯೂ ಸರ್ಕಾರಿ ಪ್ರೌಢಶಾಲೆಗಳು ಶೇ.91, ಅನುದಾನಿತ ಪ್ರೌಢಶಾಲೆಗಳು ಶೇ.92 ಹಾಗೂ ಅನುದಾನರಹಿತ ಪ್ರೌಢಶಾಲೆಗಳಲ್ಲಿನ ವಿದ್ಯಾರ್ಥಿಗಳು ಶೇ. 96ರಷ್ಟು ಉತ್ತೀರ್ಣರಾಗುವ ಮೂಲಕ ಶೇ. 93ರಷ್ಟು ಫಲಿತಾಂಶ ಗಳಿಸುವಲ್ಲಿ ಯಶಸ್ವಿಯಾಗಿದೆ.
ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ನಗರ ಪ್ರದೇಶದಲ್ಲಿನ ವಿದ್ಯಾರ್ಥಿಗಳಿಗಿಂತಲೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಮೇಲುಗೈ ಸಾಧಿಸುವ ಮೂಲಕ ತಮ್ಮ ಪ್ರಾಬಲ್ಯ ಮೆರೆದಿದ್ದಾರೆ.
ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಪಟ್ಟಣದಲ್ಲಿನ ಕೆ.ಎನ್.ಎ ಪ್ರೌಢಶಾಲೆಯ ವಿದ್ಯಾರ್ಥಿನಿ ಕೆ. ಅಮೂಲ್ಯ 625ಕ್ಕೆ 609 (ಶೇ. 97.44)ಅಂಕಗಳನ್ನು ಗಳಿಸುವ ಮೂಲಕ ತಾಲೂಕಿಗೆ ಪ್ರಥಮ ಸ್ಥಾನ ಗಳಿಸಿದ್ದಾಳೆ.
ಇನ್ನುಳಿದಂತೆ ತಟ್ಟೆಕೆರೆ ಮೊರಾರ್ಜಿ ವಸತಿ ಶಾಲೆಯ ಸಿ.ಆರ್. ರಂಜಿತ- 608(ಶೇ. 97.28), ಪಟ್ಟಣದ ಗ್ರೀನ್ವುಡ್ ಪ್ರೌಢಶಾಲೆ ವಿದ್ಯಾರ್ಥಿಗಳಾದ ಎ.ಎನ್. ಚಂದನ- 605(ಶೇ.96.8), ಐಶ್ವರ್ಯ ಭಾರತಿ-605 (ಶೇ. 96.8), ಆಯಿಶಾ ಅಮಾನ್-598(ಶೇ. 95.68), ಎಸ್. ಪ್ರಜ್ವಲ್- 592 (ಶೇ.95.57), ಸಂಜಯ್, ಕಶ್ಯಪ್-590 (ಶೇ. 94.4), ಕೆ.ಎನ್.ಎ. ಪ್ರೌಢಶಾಲೆಯ ಎಚ್.ಬಿ. ಕವನ- 590(ಶೇ. 94.4), ಪಟ್ಟಣದ ಸ್ವರ್ಣ ಪ್ರೌಢಶಾಲೆಯ ಎಚ್.ಎಸ್. ಕಾವ್ಯ- 588 (ಶೇ. 93.76) ಹಾಗೂ ಹಳ್ಳಿಮೈಸೂರಿನ ಅನುಗ್ರಹ ಪ್ರೌಢಶಾಲೆಯ ಕೆ.ಎಸ್. ಕಾವ್ಯ-598(ಶೇ.93.76) ಅಂಕಗಳನ್ನು ಗಳಿಸುವ ಮೂಲಕ ತಾಲೂಕಿನಲ್ಲಿಯೇ ಅತಿ ಹೆಚ್ಚು ಅಂಕ ಪಡೆದ ಮೊದಲ ಹತ್ತು ವಿದ್ಯಾರ್ಥಿಗಳಾಗಿದ್ದಾರೆ.
ಶೇ. 100ರ ಸಾಧನೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಈ ಬಾರಿ ಪಡುವಲಹಿಪ್ಪೆ, ಗನ್ನಿಕಡ, ಹರಿಹರಪುರ, ತಟ್ಟೇಕೆರೆ ಬಾರೆ, ಹೊಳೆನರಸೀಪುರ, ಹರಿಹರಪುರ, ಹರದನಹಳ್ಳಿಯಲ್ಲಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು, ಅಲ್ಲದೇ ಸಿಂಗಾಪುರ, ಹರದನಹಳ್ಳಿ, ಅತ್ತೀಚೌಡೇನಹಳ್ಳಿ, ತಟ್ಟೇಕೆರೆ, ಬನಕುಪ್ಪೆ, ಬೇಡಿಗನಹಳ್ಳಿ, ಹಾಗೂ ಹಂಗರಹಳ್ಳಿಯಲ್ಲಿನ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿಗಳು ಶೇ. 100 ಫಲಿತಾಂಶ ಪಡೆದ ಸರ್ಕಾರಿ ಶಾಲೆಗಳಾಗಿವೆ.
ಉಳಿದಂತೆ ಪಟ್ಟಣದ ಪ್ರಿಯದರ್ಶಿನಿ, ಗ್ರೀನ್ವುಡ್, ಅನಿಕೇತನ, ಶ್ರೀ ಲಕ್ಷ್ಮೀನರಸಿಂಹ, ವೆಂಕಟೇಶ್ವರ ಪ್ರೌಢಶಾಲೆ ಮತ್ತು ಹಳ್ಳಿಮೈಸೂರಿನ ಅನುಗ್ರಹ ಪ್ರೌಢಶಾಲೆಯೂ ಈ ಬಾರಿ ಶೇ. 100 ಫಲಿತಾಂಶ ಪಡೆದ ಅನುದಾನ ರಹಿತ ಪ್ರೌಢಶಾಲೆಗಳಾಗಿವೆ.
ಉಳಿದಂತೆ ಅನುದಾನರಹಿತ ಪ್ರೌಢಶಾಲೆಗಳ ಪಟ್ಟಿಯಲ್ಲಿ ಪಟ್ಟಣದ ಸ್ವರ್ಣ ಪ್ರೌಢಶಾಲೆಯಲ್ಲಿನ ವಿದ್ಯಾರ್ಥಿಗಳು ಶೇ. 97, ಕೆ.ಎನ್.ಎ. ಪ್ರೌಢಶಾಲೆ- ಶೇ. 96, ವಾಸವಿ ಪ್ರೌಢಶಾಲೆ-ಶೇ. 96, ಹಂಗರಹಳ್ಳಿಯ ಮಲ್ಲೇಶ್ವರ ಪ್ರೌಢಶಾಲೆ-ಶೇ. 67 ಹಾಗೂ ಆನೆಕನ್ನಂಬಾಡಿಯ ಶ್ರೀ ನರಸಿಂಹಸ್ವಾಮಿ ಪ್ರೌಢಶಾಲೆಯು ಶೇ. 56ರಷ್ಟು ಫಲಿತಾಂಶ ಗಳಿಸಿದೆ.
ಅನುದಾನಿತ ಪ್ರೌಢಶಾಲೆಗಳಲ್ಲಿ ಜೆ.ಎಸ್.ಎಸ್. ದೊಡ್ಡಕಾಡನೂರು ಪ್ರೌಢಶಾಲೆ -ಶೇ. 97, ಪಟ್ಟಣದಲ್ಲಿನ ಜೈಪ್ರಕಾಶ್ ಪ್ರೌಢಶಾಲೆ- ಶೇ. 93, ಹಳ್ಳಿಮೈಸೂರಿನ ಶಿಲ್ಪ ಪ್ರೌಢಶಾಲೆ- ಶೇ. 93, ದೊಡ್ಡಕುಂಚೆಯಲ್ಲಿನ ನವೋದಯ ಪ್ರೌಢಶಾಲೆಯ ವಿದ್ಯಾರ್ಥಿಗಳು ಶೇ. 87ರಷ್ಟು ಫಲಿತಾಂಶವನ್ನು ಗಳಿಸಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಿವಮಾದಪ್ಪ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

