ಹಾಸನ

ಲಿಂಗಪತ್ತೆ ಪ್ರಕ್ರಿಯೆ ಶಿಕ್ಷಾರ್ಹ

Published On :

ಹಾಸನ: ಪ್ರತಿಯೊಬ್ಬರಿಗೂ ಕಾನೂನು ಅರಿವು ಅತ್ಯಗತ್ಯ ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷ ವಿ.ಜಿ.ಬೋಪಯ್ಯ ಕಿವಿಮಾತು ಹೇಳಿದರು.
ನಗರದ ನ್ಯಾಯಾಲಯ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘಗಳ ಸಂಯುಕ್ತಾಶ್ರಯದಲ್ಲಿ ಗುರುವಾರ ಕಾನೂನು ಸ್ವಯಂ ಸೇವಕರಿಗೆ
ಏರ್ಪಡಿಸಿದ್ದ ಜನನ ಪೂರ್ವ ಲಿಂಗಪತ್ತೆ ನಿಷೇಧ ಕಾಯ್ದೆ ಕುರಿತ  ನಡೆದ ಕಾನೂನು ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಪ್ರಕೃತಿಗೆ ವಿರುದ್ಧವಾಗಿ ನಡೆದುಕೊಳ್ಳುವುದನ್ನು ತಡೆಗಟ್ಟಲು ಕಾನೂನಿ ಬಗ್ಗೆ ಜನರಲ್ಲಿ ತಿಳಿವಳಿಕೆ ಮೂಡಿಸಬೇಕಾಗ ಅನಿವಾರ್ಯತೆ ಇದೆ. ಸಾಮಾನ್ಯ ಜನರಿಗೆ ಲಭ್ಯವಿರುವ ಕಾನೂನು ಸೇವೆ ನೀಡುವುದು ನಮ್ಮ ಉದ್ದೇಶ ಎಂದರು.
ಪ್ರಧಾನ ಸಿವಿಲ್ ಹಿರಿಯ ನ್ಯಾಯಾಧೀಶೆ ಮತ್ತು ಸಿಜೆಎಂ ಸದಸ್ಯ ಕಾರ್ಯದರ್ಶಿ ಸರಸ್ವತಿ ವಿ.ಕೋಸಂದರ್ ಮಾತನಾಡಿ, ದೇಶದಲ್ಲಿ ಲಿಂಗಪತ್ತೆ ಮಾಡುವಂತಹ ಪ್ರಕ್ರಿಯೆ ಹೆಚ್ಚಾಗಿ ನಡೆಯುತ್ತಿದೆ. ಮಗು ಜನನಕ್ಕೂ ಮುನ್ನವೆ ಗಂಡು-ಹೆಣ್ಣು ಎಂಬುದನ್ನು ತಿಳಿಯುವವರ ಸಂಖ್ಯೆ ಅತಿ ಹೆಚ್ಚಾಗಿದೆ. ಹೆಣ್ಣು ಶಿಶು ಎಂದು ತಿಳಿದರೇ ಜನನದ ಮೊದಲೇ ಗರ್ಭಪಾತ ಮಾಡುವ ಪ್ರವೃತ್ತಿ ನಡೆಯುತ್ತಿದೆ ಇದನ್ನ ತಡೆಗಟ್ಟಬೇಕು ಎಂದರು.
ವಿದ್ಯಾವಂತರಲ್ಲೇ ಹೆಚ್ಚು: ಇತ್ತೀಚೆಗೆ ವಿದ್ಯಾವಂತರೇ ಹೆಚ್ಚಾಗಿ ಗರ್ಭಪಾತದಂತಹ ಕೆಲಸಕ್ಕೆ ಮುಂದಾಗುತ್ತಿದ್ದಾರೆ. ಅವಿದ್ಯಾವಂತರು ಅಂತಹ ಕೆಲಸ ಮುಂದಾಗುವುದಿಲ್ಲ. ದೇಶದಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದ್ದು, ಇದೇ ರೀತಿ ಮುಂದುವರೆದರೇ ದೇಶದಲ್ಲಿ ಮತ್ತಷ್ಟು ಹೆಣ್ಣು ಮಕ್ಕಳ ಕೊರತೆ ಹೆಚ್ಚಾಗಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಭ್ರೂಣಹತ್ಯೆ ತಡೆಗಟ್ಟಲು ಎನ್‌ಜಿಒ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ದೇಶದಲ್ಲಿ ಒಂದು ಗಂಟೆಗೆ 10 ಮಕ್ಕಳು ಕಾಣೆಯಾಗುತ್ತಿದ್ದು, ಒಂದು ಮಗುವಿನ ದಾಖಲೆ ಮಾತ್ರ ನಮೂದು ಮಾಡಲಾಗುತ್ತಿದೆ. ಇಲ್ಲಿವರೆಗೂ 75,808 ಮಕ್ಕಳು ಕಾಣೆಯಾಗಿ ಇನ್ನು ಪತ್ತೆಯಾಗಿಲ್ಲ. 34,895 ಮಾತ್ರ ದಾಖಲಾಗಿದೆ ಎಂದು ಹೇಳಿದರು.
ಜಿಲ್ಲಾ ವಕೀಲರ ಸಂಘ ಅಧ್ಯಕ್ಷ ದೇವರಾಜೇಗೌಡ, ವಕೀಲರಾದ ಎಂ.ಬಿ.ಗಿರಿಜಾಂಬಿಕ, ಬಿ.ಚಂದ್ರಶೇಖರ್, ಬಿ.ಇ.ನಟೇಶ್‌ಕುಮಾರ್ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.